31.03.20         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನೀವೀಗ ಹಳೆಯ ಪ್ರಪಂಚದ ದ್ವಾರದಿಂದ ಹೊರಬಂದು ಶಾಂತಿಧಾಮ ಮತ್ತು ಸುಖಧಾಮದಲ್ಲಿ ಹೋಗುತ್ತಿದ್ದೀರಿ, ತಂದೆಯೇ ಮುಕ್ತಿ-ಜೀವನ್ಮುಕ್ತಿಯ ಮಾರ್ಗವನ್ನು ತಿಳಿಸುತ್ತಾರೆ”

ಪ್ರಶ್ನೆ:
ವರ್ತಮಾನ ಸಮಯದಲ್ಲಿ ಎಲ್ಲದಕ್ಕಿಂತ ಒಳ್ಳೆಯ ಕರ್ಮ ಯಾವುದಾಗಿದೆ?

ಉತ್ತರ:
ಎಲ್ಲದಕ್ಕಿಂತ ಒಳ್ಳೆಯ ಕರ್ಮವಾಗಿದೆ - ಮನಸಾ, ವಾಚಾ, ಕರ್ಮಣಾ ಅಂಧರಿಗೆ ಊರುಗೋಲಾಗುವುದು. ಇಂತಹ ಯಾವ ಶಬ್ಧವನ್ನು ಬರೆದರೆ ಮನುಷ್ಯರಿಗೆ ಮನೆ (ಮುಕ್ತಿ) ಯ ಮತ್ತು ಜೀವನ್ಮುಕ್ತಿಯ ಮಾರ್ಗವು ಸಿಗುವುದೆಂದು ನೀವು ಮಕ್ಕಳು ವಿಚಾರಸಾಗರ ಮಂಥನ ಮಾಡಬೇಕು. ಅದರಿಂದ ಇಲ್ಲಿ ಸುಖ-ಶಾಂತಿಯ ಪ್ರಪಂಚದಲ್ಲಿ ಹೋಗುವ ಮಾರ್ಗವನ್ನು ತಿಳಿಸಲಾಗುತ್ತದೆ ಎಂಬುದನ್ನು ಮನುಷ್ಯರು ಸಹಜವಾಗಿ ತಿಳಿದುಕೊಳ್ಳಲಿ.

ಓಂ ಶಾಂತಿ.
ಜಾದೂಗಾರನ ಅದ್ಭುತ ದೀಪವನ್ನು ಕುರಿತು ಕೇಳಿದ್ದೀರಾ? ಅಲ್ಲಾವುದ್ದೀನನ ದೀಪವೆಂದೂ ಗಾಯನವಿದೆ. ಅಲ್ಲಾವುದ್ದೀನ ದೀಪ ಅಥವಾ ಜಾದೂಗರನ ದೀಪವು ಏನೇನು ತೋರಿಸುತ್ತದೆ! ವೈಕುಂಠ, ಸ್ವರ್ಗ, ಸುಖಧಾಮ. ದೀಪಕ್ಕೆ ಪ್ರಕಾಶವೆಂದು ಹೇಳಲಾಗುತ್ತದೆ. ಈಗಂತೂ ಅಂಧಕಾರವಾಗಿದೆಯಲ್ಲವೆ. ಈಗ ಪ್ರಕಾಶವನ್ನು ತೋರಿಸಲು ಮಕ್ಕಳು ಪ್ರದರ್ಶನಿ ಮಾಡುತ್ತೀರಿ, ಎಷ್ಟೊಂದು ಖರ್ಚು ಮಾಡುತ್ತೀರಿ, ತಲೆ ಕೆಡಿಸಿಕೊಳ್ಳುತ್ತೀರಿ. ಬಾಬಾ, ಇದಕ್ಕೆ ಏನೆಂದು ಹೆಸರಿಡುವುದೆಂದು ಮಕ್ಕಳು ಕೇಳುತ್ತಾರೆ. ಬಾಂಬೆಯಲ್ಲಿ ಗೇಟ್ ವೇ ಆಫ್ ಇಂಡಿಯಾ ಎಂದು ಹೇಳುತ್ತಾರೆ. ಹಡಗು ಮೊದಲು ಬಾಂಬೆಯಲ್ಲಿಯೇ ಬರುತ್ತದೆ. ದೆಹಲಿಯಲ್ಲಿಯೂ ಇಂಡಿಯಾ ಗೇಟ್ ಇದೆ, ಈಗ ತಮ್ಮದು ಗೇಟ್ ಆಫ್ ಮುಕ್ತಿ-ಜೀವನ್ಮುಕ್ತಿ (ಮುಕ್ತಿ-ಜೀವನ್ಮುಕ್ತಿಯ ದ್ವಾರ) ಆಗಿದೆ. ಎರಡೂ ದ್ವಾರಗಳಿವೆಯಲ್ಲವೆ. ಯಾವಾಗಲೂ ಒಳಗೆ ಮತ್ತು ಹೊರಗೆ ಎರಡು ದ್ವಾರಗಳಿರುತ್ತವೆ. ಒಂದು ಕಡೆಯಿಂದ ಹೋಗುವುದು, ಇನ್ನೊಂದು ಕಡೆಯಿಂದ ಬರುವುದು. ಇಲ್ಲಿಯೂ ಸಹ ಅದೇ ರೀತಿ, ನಾವು ಹೊಸ ಪ್ರಪಂಚದಲ್ಲಿ ಬರುತ್ತೇವೆ ಮತ್ತೆ ಹಳೆಯ ಪ್ರಪಂಚದಿಂದ ಹೊರಬಂದು ನಮ್ಮ ಮನೆಗೆ ಹೊರಟು ಹೋಗುತ್ತೇವೆ ಆದರೆ ತಾವಾಗಿಯೇ ಹಿಂತಿರುಗಿ ಹೋಗಲು ಸಾಧ್ಯವಿಲ್ಲ ಏಕೆಂದರೆ ಮನೆಯನ್ನು ಮರೆತಿದ್ದೇವೆ. ಆದ್ದರಿಂದ ಮಾರ್ಗದರ್ಶಕನು ಬೇಕು. ಅವರೂ ಸಹ ನಮಗೆ ಸಿಕ್ಕಿದ್ದಾರೆ, ಮಾರ್ಗವನ್ನು ತೋರಿಸುತ್ತಾರೆ. ಮಕ್ಕಳಿಗೆ ತಿಳಿದಿದೆ, ತಂದೆಯು ನಮಗೆ ಮುಕ್ತಿ-ಜೀವನ್ಮುಕ್ತಿ ಮತ್ತು ಸುಖ-ಶಾಂತಿಯ ಮಾರ್ಗವನ್ನು ತೋರಿಸುತ್ತಾರೆ. ಅಂದಮೇಲೆ ಶಾಂತಿಧಾಮ-ಸುಖಧಾಮದ ದ್ವಾರವೆಂದು ಬರೆಯಬಹುದು. ವಿಚಾರಸಾಗರ ಮಂಥನ ಮಾಡಬೇಕಲ್ಲವೆ. ಮುಕ್ತಿ-ಜೀವನ್ಮುಕ್ತಿಯೆಂದು ಯಾವುದಕ್ಕೆ ಹೇಳಲಾಗುತ್ತದೆ ಎಂದು ಬಹಳಷ್ಟು ವಿಚಾರಗಳು ನಡೆಯುತ್ತವೆ, ಅದೂ ಸಹ ಯಾರಿಗೂ ತಿಳಿದಿಲ್ಲ. ಸುಖ-ಶಾಂತಿಯನ್ನಂತೂ ಎಲ್ಲರೂ ಬಯಸುತ್ತಾರೆ, ಶಾಂತಿಯೂ ಬೇಕು ಮತ್ತು ಹಣ-ಅಧಿಕಾರವು ಬೇಕೆಂದು ಬಯಸುತ್ತಾರೆ. ಆದರೆ ಅದೆಲ್ಲವೂ ಸತ್ಯಯುಗದಲ್ಲಿ ಬರುತ್ತದೆ. ಅಂದಮೇಲೆ ಶಾಂತಿಧಾಮ ಮತ್ತು ಸುಖಧಾಮದ ದ್ವಾರ ಅಥವಾ ಸುಖ-ಶಾಂತಿ-ಪವಿತ್ರತೆಯ ದ್ವಾರವೆಂದು ಹೆಸರನ್ನಿಡಿ. ಇವು ಒಳ್ಳೆಯ ಶಬ್ಧಗಳಾಗಿವೆ. ಮೂರೂ ಸಹ ಇಲ್ಲಿಲ್ಲ, ಅಂದಮೇಲೆ ಇದರ ಮೇಲೂ ತಿಳಿಸಬೇಕಾಗುತ್ತದೆ. ಹೊಸ ಪ್ರಪಂಚದಲ್ಲಿ ಇವೆಲ್ಲವೂ ಇತ್ತು, ಹೊಸ ಪ್ರಪಂಚದ ಸ್ಥಾಪನೆ ಮಾಡುವವರು ಪತಿತ-ಪಾವನ, ಪರಮಾತ್ಮನಾಗಿದ್ದಾರೆ. ಆದ್ದರಿಂದ ಅವಶ್ಯವಾಗಿ ನಾವು ಈ ಹಳೆಯ ಪ್ರಪಂಚದಿಂದ ಹೊರಬಂದು ಮನೆಗೆ ಹೋಗಬೇಕಾಗಿದೆ. ಅಂದಮೇಲೆ ಇದು ಸುಖ-ಶಾಂತಿ-ಪವಿತ್ರತೆಯ ದ್ವಾರವಾಯಿತಲ್ಲವೆ. ತಂದೆಗೆ ಈ ಹೆಸರು ಪ್ರಿಯವೆನಿಸುತ್ತದೆ, ಈಗ ವಾಸ್ತವದಲ್ಲಿ ಅದರ ಉದ್ಘಾಟನೆಯನ್ನು ಶಿವ ತಂದೆಯೇ ಮಾಡುತ್ತಾರೆ ಆದರೆ ನಾವು ಬ್ರಾಹ್ಮಣರ ಮೂಲಕ ಮಾಡಿಸುತ್ತಾರೆ. ಪ್ರಪಂಚದಲ್ಲಿ ಬಹಳಷ್ಟು ಉದ್ಘಾಟನಾ ಸಮಾರಂಭಗಳು ಆಗುತ್ತಿರುತ್ತವೆ, ಕೆಲವರು ಆಸ್ಪತ್ರೆಯ ಉದ್ಘಾಟನೆ ಮಾಡುತ್ತಾರೆ, ಇನ್ನೂ ಕೆಲವರು ವಿಶ್ವ ವಿದ್ಯಾಲಯಗಳ ಉದ್ಘಾಟನೆ ಮಾಡುತ್ತಾರೆ, ಇಲ್ಲಂತೂ ಒಂದೇ ಬಾರಿ ಅದೂ ಈ ಸಮಯದಲ್ಲಿ ಆಗುತ್ತದೆ. ಆದ್ದರಿಂದ ವಿಚಾರ ಸಾಗರ ಮಂಥನ ಮಾಡಲಾಗುತ್ತದೆ. ಬ್ರಹ್ಮಾ ತಂದೆಯು ಬಂದು ಉದ್ಘಾಟನೆ ಮಾಡಲಿ ಎಂದು ಮಕ್ಕಳು ಬರೆದಿದ್ದರು, ಬಾಪ್ದಾದಾ ಇಬ್ಬರನ್ನೂ ಕರೆಯೋಣ. ಅದಕ್ಕೆ ತಂದೆಯು ತಿಳಿಸುತ್ತಾರೆ - ನೀವು ಹೊರಗಡೆ ಎಲ್ಲಿಯೂ ಹೋಗಲು ಸಾಧ್ಯವಿಲ್ಲ. ಉದ್ಘಾಟನೆ ಮಾಡಲು ಹೋಗುವುದಕ್ಕೆ ವಿವೇಕವು ಒಪ್ಪುವುದಿಲ್ಲ, ನಿಯಮವಿಲ್ಲ. ಅದನ್ನಂತೂ ಯಾರು ಬೇಕಾದರೂ ಉದ್ಘಾಟನೆ ಮಾಡಬಹುದಾಗಿದೆ. ಪ್ರಜಾಪಿತ ಬ್ರಹ್ಮಾಕುಮಾರ-ಕುಮಾರಿಯರೆಂದು ಪತ್ರಿಕೆಯಲ್ಲಿ ಬರುವುದು, ಈ ಹೆಸರೂ ಸಹ ಬಹಳ ಚೆನ್ನಾಗಿದೆಯಲ್ಲವೆ. ಪ್ರಜಾಪಿತ ಎಲ್ಲರ ತಂದೆಯಾದರು, ಅವರೇನು ಕಡಿಮೆಯೇ! ಮತ್ತೆ ತಂದೆಯು ತಾವೇ ಸಮಾರಂಭವನ್ನು ಮಾಡಿಸುತ್ತಾರೆ. ಮಾಡಿ-ಮಾಡಿಸುವವರಾಗಿದ್ದಾರಲ್ಲವೆ. ನಾವು ಸ್ವರ್ಗದ ಸ್ಥಾಪನೆ ಮಾಡುತ್ತಿದ್ದೇವೆಂದು ಬುದ್ಧಿಯಲ್ಲಿರಬೇಕು ಅಂದಮೇಲೆ ಎಷ್ಟೊಂದು ಪುರುಷಾರ್ಥ ಮಾಡಿ ಶ್ರೀಮತದಂತೆ ನಡೆಯಬೇಕಾಗಿದೆ. ವರ್ತಮಾನ ಸಮಯದಲ್ಲಿ ಮನಸಾ, ವಾಚಾ, ಕರ್ಮಣಾ ಎಲ್ಲದಕ್ಕಿಂತ ಒಳ್ಳೆಯ ಕರ್ಮವು ಒಂದೇ ಆಗಿದೆ - ಅಂಧರಿಗೆ ಊರುಗೋಲಾಗುವುದು. ಹೇ ಪ್ರಭು, ಅಂಧರ ಊರುಗೋಲಾಗಿ ಬನ್ನಿ ಎಂದು ಹಾಡುತ್ತಾರೆ. ಎಲ್ಲರೂ ಅಂಧರೇ ಅಂಧರಾಗಿದ್ದಾರೆ. ಆದ್ದರಿಂದ ತಂದೆಯು ಬಂದು ಊರುಗೋಲಾಗುತ್ತಾರೆ. ಜ್ಞಾನದ ಮೂರನೆಯ ನೇತ್ರವನ್ನು ಕೊಡುತ್ತಾರೆ, ಇದರಿಂದ ನೀವು ಸ್ವರ್ಗದಲ್ಲಿ ನಂಬರ್ವಾರ್ ಪುರುಷಾರ್ಥದನುಸಾರ ಹೋಗುತ್ತೀರಿ. ನಂಬರ್ವಾರಂತೂ ಇದ್ದೇ ಇರುವರು, ಇದು ಬಹಳ ಬೇಹದ್ದಿನ ಆಸ್ಪತ್ರೆ ಹಾಗೂ ವಿಶ್ವ ವಿದ್ಯಾಲಯವಾಗಿದೆ. ತಿಳಿಸಬೇಕಾಗಿದೆ, ಆತ್ಮಗಳ ತಂದೆಯು ಪರಮಪಿತ ಪರಮಾತ್ಮ, ಪತಿತ-ಪಾವನ ತಂದೆಯಾಗಿದ್ದಾರೆ. ನೀವು ಆ ತಂದೆಯನ್ನು ನೆನಪು ಮಾಡಿದರೆ ಸುಖಧಾಮದಲ್ಲಿ ಹೋಗುತ್ತೀರಿ. ಇದು ನರಕವಾಗಿದೆ, ಇದಕ್ಕೆ ಸ್ವರ್ಗವೆಂದು ಹೇಳುವುದಿಲ್ಲ. ಸ್ವರ್ಗದಲ್ಲಿ ಒಂದೇ ಧರ್ಮವಿರುತ್ತದೆ, ಭಾರತವು ಸ್ವರ್ಗವಾಗಿದ್ದಾಗ ಅನ್ಯ ಯಾವುದೇ ಧರ್ಮವಿರಲಿಲ್ಲ. ಕೇವಲ ಇದನ್ನು ನೆನಪು ಮಾಡುವುದೂ ಸಹ ಮನ್ಮನಾಭವವಾಗಿದೆ, ನಾವು ಸ್ವರ್ಗದಲ್ಲಿ ಇಡೀ ವಿಶ್ವದ ಮಾಲೀಕರಾಗಿದ್ದೆವು, ಇಷ್ಟಾದರೂ ನೆನಪು ಬರುವುದಿಲ್ಲವೆ! ನಮಗೆ ತಂದೆಯು ಸಿಕ್ಕಿದ್ದಾರೆಂಬುದು ಬುದ್ಧಿಯಲ್ಲಿದೆ ಅಂದಮೇಲೆ ಆ ಖುಷಿಯಿರಬೇಕಲ್ಲವೆ. ಆದರೆ ಮಾಯೆಯೂ ಕಡಿಮೆಯೇನಿಲ್ಲ. ಇಂತಹ ತಂದೆಗೆ ಮಕ್ಕಳಾಗಿಯೂ ಖುಷಿಯಾಗಿರುವುದಿಲ್ಲ, ಗುಟುಕರಿಸುತ್ತಿರುತ್ತಾರೆ. ಮಾಯೆಯು ಪದೇ-ಪದೇ ಬಹಳ ಗುಟುಕರಿಸುವಂತೆ ಮಾಡುತ್ತದೆ. ಶಿವ ತಂದೆಯ ನೆನಪನ್ನು ಮರೆಸಿ ಬಿಡುತ್ತದೆ. ಸ್ಥಿರವಾದ ನೆನಪು ಇರುವುದಿಲ್ಲವೆಂದು ತಾವೇ ಹೇಳುತ್ತಾರೆ. ತಂದೆಯು ಜ್ಞಾನಸಾಗರದಲ್ಲಿ ತೋಯಿಸುತ್ತಾರೆ ಮತ್ತೆ ಮಾಯೆಯು ವಿಷಯ ಸಾಗರದಲ್ಲಿ ಮುಳುಗಿಸುತ್ತದೆ. ಬಹಳ ಖುಷಿಯಿಂದ ಮುಳುಗುತ್ತಿರುತ್ತಾರೆ. ತಂದೆಯು ತಿಳಿಸುತ್ತಾರೆ – ಶಿವ ತಂದೆಯನ್ನು ನೆನಪು ಮಾಡಿ ಆದರೆ ಮಾಯೆಯು ಮರೆಸಿ ಬಿಡುತ್ತದೆ, ತಂದೆಯನ್ನು ನೆನಪು ಮಾಡುವುದೇ ಇಲ್ಲ. ತಂದೆಯನ್ನು ತಿಳಿದುಕೊಂಡೇ ಇಲ್ಲ. ದುಃಖಹರ್ತ-ಸುಖಕರ್ತನು ಪರಮಪಿತ ಪರಮಾತ್ಮನಾಗಿದ್ದಾರಲ್ಲವೆ. ಅವರೇ ದುಃಖಹರಣ ಮಾಡುವವರಾಗಿದ್ದಾರೆ. ಆ ಮನುಷ್ಯರು ಗಂಗೆಯಲ್ಲಿ ಹೋಗಿ ಮುಳುಗುತ್ತಾರೆ, ಗಂಗೆಯು ಪತಿತ-ಪಾವನಿಯಾಗಿದೆಯೆಂದು ತಿಳಿಯುತ್ತಾರೆ. ಸತ್ಯಯುಗದಲ್ಲಿ ನೀರಿಗೆ ದುಃಖಹರಣಿ ಎಂದು ಹೇಳುವುದಿಲ್ಲ. ಸಾಧು-ಸಂತ ಮೊದಲಾದವರೆಲ್ಲರೂ ಹೋಗಿ ನದಿಯ ತೀರದಲ್ಲಿ ಕುಳಿತುಕೊಳ್ಳುತ್ತಾರೆ, ಸಾಗರದ ತೀರದಲ್ಲೇಕೆ ಕುಳಿತುಕೊಳ್ಳುವುದಿಲ್ಲ. ಈಗ ನೀವು ಮಕ್ಕಳು ಸಾಗರನ ತೀರದಲ್ಲಿ ಕುಳಿತಿದ್ದೀರಿ. ಅನೇಕಾನೇಕ ಮಕ್ಕಳು ಸಾಗರನ ಬಳಿ ಬರುತ್ತೀರಿ. ಸಾಗರನಿಂದ ಹೊರಟಿರುವ ಇವರು ಚಿಕ್ಕ-ದೊಡ್ಡ ನದಿಗಳಾಗಿದ್ದಾರೆಂದು ತಿಳಿಯುತ್ತೀರಿ. ಬ್ರಹ್ಮ್ ಪುತ್ರ, ಸಿಂಧು, ಸರಸ್ವತಿ ಈ ಹೆಸರುಗಳನ್ನೂ ಇಟ್ಟಿದ್ದಾರೆ.

ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು ಮನಸಾ, ವಾಚಾ, ಕರ್ಮಣಾ ಬಹಳ-ಬಹಳ ಗಮನವನ್ನಿಡಬೇಕಾಗಿದೆ. ಎಂದೂ ನಿಮಗೆ ಕ್ರೋಧವು ಬರಬಾರದು. ಕ್ರೋಧವು ಮೊದಲು ಮನಸ್ಸಿನಲ್ಲಿ ಬರುತ್ತದೆ ನಂತರ ವಾಚಾ ಮತ್ತು ಕರ್ಮಣಾದಲ್ಲಿಯೂ ಬಂದು ಬಿಡುತ್ತದೆ. ಇವು ಮೂರು ಕಿಟಕಿಗಳಾಗಿವೆ, ಅದ್ದರಿಂದ ತಂದೆಯು ತಿಳಿಸುತ್ತಾರೆ - ಮಧುರ ಮಕ್ಕಳೇ, ಕ್ರೋಧವನ್ನು ವಾಚಾದಲ್ಲಿ ಹೆಚ್ಚಿನದಾಗಿ ತರಬೇಡಿ, ಶಾಂತಿಯಲ್ಲಿರಿ. ವಾಚಾದಲ್ಲಿ ಬಂದರೆ ಕ್ರೋಧವು ಕರ್ಮದಲ್ಲಿಯೂ ಬಂದು ಬಿಡುವುದು. ಕೋಪವು ಮೊದಲು ಮನಸ್ಸಿನಲ್ಲಿ ಬರುತ್ತದೆ ನಂತರ ವಾಚಾ ಮತ್ತು ಕರ್ಮಣದಲ್ಲಿ ಬರುತ್ತದೆ. ಅಂತೂ ಮೂರೂ ಕಿಟಕಿಗಳಿಂದ ಹೊರ ಬರುತ್ತದೆ. ಮೊದಲು ಮನಸ್ಸಿನಲ್ಲಿಯೇ ಬರುತ್ತದೆ. ಪ್ರಪಂಚದವರಂತೂ ಪರಸ್ಪರ ದುಃಖವನ್ನೇ ಕೊಡುತ್ತಿರುತ್ತಾರೆ, ಜಗಳ-ಕಲಹಗಳನ್ನು ಮಾಡುತ್ತಿರುತ್ತಾರೆ, ನೀವು ಯಾರಿಗೂ ದುಃಖವನ್ನು ಕೊಡಬಾರದು. ದುಃಖದ ವಿಚಾರಗಳೂ ಬರಬಾರದು. ಶಾಂತಿಯಲ್ಲಿರುವುದು ಬಹಳ ಒಳ್ಳೆಯದಾಗಿದೆ ಅಂದಾಗ ತಂದೆಯು ಬಂದು ಸ್ವರ್ಗದ ಅಥವಾ ಸುಖ-ಶಾಂತಿಯ ದ್ವಾರವನ್ನು ಮಕ್ಕಳಿಗೇ ತಿಳಿಸುತ್ತಾರೆ. ನೀವು ಅನ್ಯರಿಗೂ ತಿಳಿಸಿಕೊಡಿ ಎಂದು ಹೇಳುತ್ತಾರೆ. ಸುಖ-ಶಾಂತಿ-ಪವಿತ್ರತೆಯು ಸ್ವರ್ಗದಲ್ಲಿಯೇ ಇರುತ್ತದೆ, ಅಲ್ಲಿಗೆ ಹೇಗೆ ಹೋಗುತ್ತೀರಿ ಎಂಬುದನ್ನೂ ಸಹ ಅರಿತುಕೊಳ್ಳಬೇಕಾಗಿದೆ. ಈ ಮಹಾಭಾರತ ಯುದ್ಧವು ಬಾಗಿಲನ್ನು ತೆರೆಯುತ್ತದೆ. ಯಾವ ಹೆಸರನ್ನಿಡುವುದೆಂದು ತಂದೆಗೆ ವಿಚಾರ ಸಾಗರ ಮಂಥನವಂತೂ ನಡೆಯುತ್ತದೆಯಲ್ಲವೆ. ಮುಂಜಾನೆಯಲ್ಲಿ ವಿಚಾರ ಸಾಗರ ಮಂಥನ ಮಾಡುವುದರಿಂದಲೇ ಬೆಣ್ಣೆಯು ಸಿಗುತ್ತದೆ ಅಂದರೆ ಒಳ್ಳೊಳ್ಳೆಯ ವಿಚಾರಗಳು ಹೊಳೆಯುತ್ತಿರುತ್ತವೆ. ಆದ್ದರಿಂದಲೇ ತಂದೆಯು ತಿಳಿಸುತ್ತಾರೆ - ಅಮೃತವೇಳೆಯಲ್ಲಿ ಎದ್ದು ತಂದೆಯನ್ನು ನೆನಪು ಮಾಡಿ ಮತ್ತು ಯಾವ ಹೆಸರನ್ನಿಡುವುದೆಂದು ವಿಚಾರ ಸಾಗರ ಮಂಥನ ಮಾಡಿ. ಇದರಿಂದ ಕೆಲವರಿಗೆ ಒಳ್ಳೆಯ ವಿಚಾರಗಳೂ ಹೊಳೆಯುತ್ತವೆ. ಈಗ ನೀವು ತಿಳಿದುಕೊಂಡಿದ್ದೀರಿ - ಪತಿತರನ್ನು ಪಾವನ ಮಾಡುವುದೆಂದರೆ ನರಕವಾಸಿಗಳಿಂದ ಸ್ವರ್ಗವಾಸಿಗಳನ್ನಾಗಿ ಮಾಡುವುದಾಗಿದೆ. ದೇವತೆಗಳು ಪಾವನರಾಗಿದ್ದಾರೆ ಆದ್ದರಿಂದಲೇ ಎಲ್ಲರೂ ಅವರ ಮುಂದೆ ತಲೆ ಬಾಗುತ್ತಾರೆ. ನೀವೀಗ ಯಾರಿಗೂ ತಲೆ ಬಾಗುವಂತಿಲ್ಲ, ನಿಯಮವೇ ಇಲ್ಲ. ಆದರೆ ಬಹಳ ಯುಕ್ತಿಯಿಂದ ನಡೆಯಬೇಕಾಗಿದೆ. ಸಾಧುಗಳು ತಮ್ಮನ್ನು ಶ್ರೇಷ್ಠರು, ಪವಿತ್ರರೆಂದು ತಿಳಿಯುತ್ತಾರೆ, ಅನ್ಯರನ್ನು ಅಪವಿತ್ರರು, ನೀಚರೆಂದು ತಿಳಿಯುತ್ತಾರೆ. ನಾವು ಎಲ್ಲರಿಗಿಂತ ಶ್ರೇಷ್ಠರೆಂದು ಭಲೆ ನಿಮಗೆ ಗೊತ್ತಿದೆ. ಆದರೆ ಯಾರಾದರೂ ನಿಮ್ಮ ಮುಂದೆ ನಮಸ್ಕಾರ ಮಾಡಿದರೆ ನೀವೂ ಸಹ ನಮಸ್ಕಾರ ಮಾಡಬೇಕು. ಹರಿ ಓಂ ತತ್ಸತ್ ಎಂದು ಹೇಳಿದರೆ ನೀವೂ ಸಹ ಹೇಳಬೇಕಾಗುತ್ತದೆ. ಯುಕ್ತಿಯಿಂದ ನಡೆದುಕೊಳ್ಳದಿದ್ದರೆ ಅವರು ಕೈಗೆ ಸಿಗುವುದಿಲ್ಲ. ಬಹಳ ಯುಕ್ತಿಯಿರಬೇಕು. ಮೃತ್ಯುವು ತಲೆಯ ಮೇಲೆ ಬಂದಾಗ ಎಲ್ಲರೂ ಭಗವಂತನ ನಾಮ ಸ್ಮರಣೆ ಮಾಡುತ್ತಾರೆ. ಇತ್ತೀಚೆಗೆ ಆಕಸ್ಮಿಕವಾಗಿ ಬಹಳಷ್ಟು ಏರುಪೇರುಗಳಾಗುತ್ತಿರುತ್ತವೆ. ನಿಧಾನ-ನಿಧಾನವಾಗಿ ದ್ವೇಷದ ಬೆಂಕಿಯು ಹರಡುತ್ತದೆ. ಬೆಂಕಿಯು ಮೊದಲು ವಿದೇಶದಿಂದ ಆರಂಭವಾಗಿ ನಂತರ ನಿಧಾನ-ನಿಧಾನವಾಗಿಇಡೀ ಪ್ರಪಂಚವೇ ಸುಟ್ಟು ಹೋಗುತ್ತದೆ, ಅಂತಿಮದಲ್ಲಿ ನೀವು ಮಕ್ಕಳೇ ಉಳಿಯುತ್ತೀರಿ. ನೀವಾತ್ಮಗಳು ಪವಿತ್ರರಾದರೆ ನಿಮಗಾಗಿ ಅಲ್ಲಿ ಹೊಸ ಪ್ರಪಂಚವು ಸಿಗುತ್ತದೆ. ಪ್ರಪಂಚದ ಹೊಸ ನೋಟು ನೀವು ಮಕ್ಕಳಿಗೆ ಸಿಗುತ್ತದೆ, ನೀವು ರಾಜ್ಯಭಾರ ಮಾಡುತ್ತೀರಿ. ಅಲ್ಲಾವುದ್ಧೀನನ ಅದ್ಭುತ ದೀಪವು ಪ್ರಸಿದ್ಧವಾಗಿದೆಯಲ್ಲವೆ. ಅದನ್ನು ಉಜ್ಜಿದರೆ ಸಾಕು, ಕುಬೇರನ ಖಜಾನೆಯು ಸಿಕ್ಕಿ ಬಿಡುತ್ತದೆ. ಇದು ಅವಶ್ಯವಾಗಿದೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಅಲ್ಲಾವುದ್ಧೀನನ್ನು ಸನ್ನೆಯಿಂದಲೇ ತಕ್ಷಣ ಸಾಕ್ಷಾತ್ಕಾರ ಮಾಡಿಸುತ್ತಾನೆ, ನೀವು ಕೇವಲ ಶಿವ ತಂದೆಯನ್ನು ನೆನಪು ಮಾಡಿ ಆಗ ಸಾಕ್ಷಾತ್ಕಾರಗಳಾಗುತ್ತವೆ. ನೌಧಾಭಕ್ತಿಯಿಂದಲೂ ಸಾಕ್ಷಾತ್ಕಾರಗಳಾಗುತ್ತವೆಯಲ್ಲವೆ. ಇಲ್ಲಿ ನಿಮಗೆ ಗುರಿ-ಧ್ಯೇಯದ (ಲಕ್ಷ್ಮಿ-ನಾರಾಯಣ) ಸಾಕ್ಷಾತ್ಕಾರವಂತೂ ಆಗಿಯೇ ಆಗುತ್ತದೆ. ಆಗ ನೀವು ತಂದೆಯನ್ನು ಮತ್ತು ಸ್ವರ್ಗವನ್ನು ಬಹಳ ನೆನಪು ಮಾಡುತ್ತೀರಿ, ಪದೇ-ಪದೇ ನೋಡುತ್ತೀರಿ. ಯಾರು ತಂದೆಯ ನೆನಪಿನಲ್ಲಿ ಮತ್ತು ಜ್ಞಾನದಲ್ಲಿ ಮಸ್ತರಾಗಿರುವರೋ ಅವರೇ ಅಂತಿಮದ ಎಲ್ಲಾ ದೃಶ್ಯಗಳನ್ನು ನೋಡಬಲ್ಲರು. ಇದು ಬಹಳ ಉನ್ನತ ಗುರಿಯಾಗಿದೆ. ತನ್ನನ್ನು ಆತ್ಮವೆಂದು ತಿಳಿದು ತಂದೆಯನ್ನು ನೆನಪು ಮಾಡುವುದು ಚಿಕ್ಕಮ್ಮನ ಮನೆಯಂತಲ್ಲ, ಬಹಳ ಪರಿಶ್ರಮವಿದೆ, ನೆನಪೇ ಮುಖ್ಯವಾಗಿದೆ. ಹೇಗೆ ತಂದೆಯು ದಿವ್ಯ ದೃಷ್ಟಿಯ ದಾತನಾಗಿದ್ದಾರೆ, ಹಾಗೆಯೇ ಸ್ವಯಂ ತಮಗಾಗಿ ದಿವ್ಯ ದೃಷ್ಟಿಯ ದಾತರಾಗುತ್ತೀರಿ. ಹೇಗೆ ಭಕ್ತಿಮಾರ್ಗದಲ್ಲಿ ತೀವ್ರವಾಗಿ ನೆನಪು ಮಾಡುತ್ತಾರೆಂದರೆ ಸಾಕ್ಷಾತ್ಕಾರವಾಗುತ್ತದೆ, ತಮ್ಮ ಪರಿಶ್ರಮದಿಂದ ಹೇಗೆ ದಿವ್ಯ ದೃಷ್ಟಿದಾತರಾಗಿ ಬಿಡುತ್ತಾರೆ. ನೀವೂ ಸಹ ನೆನಪಿನ ಪರಿಶಮ್ರ ಪಟ್ಟರೆ ಬಹಳ ಖುಷಿಯಲ್ಲಿರುತ್ತೀರಿ ಮತ್ತೆ ಸಾಕ್ಷಾತ್ಕಾರಗಳಾಗುತ್ತಾ ಇರುತ್ತವೆ. ಇಡೀ ಪ್ರಪಂಚವೇ ಮರೆತು ಹೋಗಿ ಮನ್ಮನಾಭವ ಆಗಿ ಬಿಟ್ಟರೆ ಇನ್ನೇನು ಬೇಕು! ಯೋಗಬಲದಿಂದ ನೀವು ತಮ್ಮ ಶರೀರವನ್ನು ಬಿಟ್ಟು ಬಿಡುತ್ತೀರಿ. ಭಕ್ತಿಯಲ್ಲಿಯೂ ಪರಿಶ್ರಮವಿರುತ್ತದೆ, ಇದರಲ್ಲಿಯೂ ಪರಿಶ್ರಮ ಪಡಬೇಕು. ಪರಿಶ್ರಮದ ಮಾರ್ಗವನ್ನು ತಂದೆಯು ಬಹಳ ಸುಂದರವಾಗಿ ತಿಳಿಸುತ್ತಿರುತ್ತಾರೆ. ತಮ್ಮನ್ನು ಆತ್ಮವೆಂದು ತಿಳಿಯುವುದರಿಂದ ದೇಹದ ಪರಿವೆಯೇ ಇರುವುದಿಲ್ಲ ಹೇಗೆ ತಂದೆಯ ಸಮಾನರಾಗಿ ಬಿಡುತ್ತೀರಿ. ಸಾಕ್ಷಾತ್ಕಾರವನ್ನು ಮಾಡುತ್ತಾ ಇರುತ್ತೀರಿ, ಬಹಳ ಖುಷಿಯೂ ಇರುತ್ತದೆ. ಫಲಿತಾಂಶವೆಲ್ಲವೂ ಅಂತಿಮದ್ದೆಂದು ಗಾಯನವಿದೆ. ತಮ್ಮ ನಾಮ-ರೂಪದಿಂದಲೂ ಭಿನ್ನರಾಗಬೇಕಾಗಿದೆ, ಅಂದಮೇಲೆ ಅನ್ಯರ ನಾಮ-ರೂಪವನ್ನು ನೆನಪು ಮಾಡುವುದರಿಂದ ಯಾವ ಗತಿಯಾಗುವುದು! ಜ್ಞಾನವು ಬಹಳ ಸಹಜವಾಗಿದೆ, ಭಾರತದ ಯಾವ ಪ್ರಾಚೀನ ಯೋಗವಿದೆಯೋ ಅದರಲ್ಲಿ ಚಮತ್ಕಾರವಿದೆ. ತಂದೆಯು ತಿಳಿಸಿದ್ದಾರೆ, ಬ್ರಹ್ಮ್ ಜ್ಞಾನಿಗಳೂ ಸಹ ಹೀಗೆ ಶರೀರ ಬಿಡುತ್ತಾರೆ. ನಾವಾತ್ಮಗಳಾಗಿದ್ದೇವೆ, ಪರಮಾತ್ಮನಲ್ಲಿ ಲೀನವಾಗಬೇಕಾಗಿದೆ ಎಂದು ತಿಳಿಯುತ್ತಾರೆ. ಆದರೆ ಯಾರೂ ಲೀನವಾಗುವುದಿಲ್ಲ, ಅವರು ಬ್ರಹ್ಮ್ ಜ್ಞಾನಿಗಳು ಅರ್ಥಾತ್ ತತ್ವಜ್ಞಾನಿಗಳಾಗಿದ್ದಾರೆ. ಬ್ರಹ್ಮಾ ತಂದೆಯು ನೋಡಿದ್ದಾರೆ - ಅವರು ಕುಳಿತು-ಕುಳಿತಿದ್ದಂತೆಯೇ ಶರೀರವನ್ನು ಬಿಟ್ಟು ಬಿಡುತ್ತಾರೆ, ವಾಯುಮಂಡಲವು ಶಾಂತವಾಗಿ ಬಿಡುತ್ತದೆ. ಈ ಶಾಂತಿಯ ಅನುಭವವೂ ಸಹ ಯಾರು ಜ್ಞಾನ ಮಾರ್ಗದಲ್ಲಿರುವರೋ, ಶಾಂತಿಯಲ್ಲಿರುವರೋ ಅವರಿಗೇ ಭಾಸವಾಗುತ್ತದೆ. ಕೆಲವರಂತೂ ಇನ್ನೂ ಚಿಕ್ಕ ಬೇಬಿಗಳಾಗಿದ್ದಾರೆ. ಪದೇ-ಪದೇ ಕೆಳಗೆ ಬೀಳುತ್ತಾರೆ, ಇದರಲ್ಲಿ ಬಹಳ-ಬಹಳ ಗುಪ್ತ ಪರಿಶ್ರಮವಿದೆ. ಭಕ್ತಿಮಾರ್ಗದ ಪರಿಶ್ರಮವು ಪ್ರತ್ಯಕ್ಷವಾಗಿರುತ್ತದೆ. ಮಾಲೆಯನ್ನು ಜಪಿಸಿ, ಕೋಣೆಯಲ್ಲಿ ಕುಳಿತು ಭಕ್ತಿ ಮಾಡಿ ಎಂದು ಹೇಳುತ್ತಾರೆ. ಇಲ್ಲಂತೂ ನಡೆಯುತ್ತಾ-ತಿರುಗಾಡುತ್ತಾ ನೀವು ನೆನಪಿನಲ್ಲಿರುತ್ತೀರಿ. ಇವರು ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತಿದ್ದಾರೆಂದು ಯಾರಿಗೂ ಅರ್ಥವಾಗುವುದಿಲ್ಲ. ಯೋಗದಿಂದಲೇ ಎಲ್ಲಾ ಲೆಕ್ಕಾಚಾರಗಳನ್ನು ಕಳೆಯಬೇಕಾಗಿದೆ. ಜ್ಞಾನದಿಂದ ಲೆಕ್ಕಾಚಾರವು ಸಮಾಪ್ತಿಯಾಗುವುದಿಲ್ಲ, ಯೋಗದಿಂದಲೇ ಆಗುತ್ತದೆ. ಕರ್ಮಭೋಗವು ನೆನಪಿನಿಂದಲೇ ಸಮಾಪ್ತಿಯಾಗುತ್ತದೆ. ಇದು ಗುಪ್ತವಾಗಿದೆ. ತಂದೆಯು ಎಲ್ಲವನ್ನೂ ಗುಪ್ತವಾಗಿ ಕಲಿಸುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಮನಸಾ-ವಾಚಾ-ಕರ್ಮಣಾ ಎಂದೂ ಕ್ರೋಧ ಮಾಡಬಾರದು. ಈ ಮೂರೂ ಕಿಟಕಿಗಳ ಮೇಲೆ ಬಹಳ ಗಮನವನ್ನಿಡಬೇಕಾಗಿದೆ. ಕ್ರೋಧವು ಬಂದಾಗ ಹೆಚ್ಚಿನದಾಗಿ ವಾಚಾದಲ್ಲಿ ತರಬಾರದು. ಒಬ್ಬರು ಇನ್ನೊಬ್ಬರಿಗೆ ದುಃಖವನ್ನೂ ಕೊಡಬಾರದಾಗಿದೆ.

2. ಜ್ಞಾನ ಮತ್ತು ಯೋಗದಲ್ಲಿ ಮಸ್ತರಾಗಿದ್ದು ಅಂತಿಮದ ದೃಶ್ಯವನ್ನು ನೋಡಬೇಕಾಗಿದೆ. ತನ್ನ ಮತ್ತು ಅನ್ಯರ ನಾಮ-ರೂಪವನ್ನು ಮರೆತು ನಾನಾತ್ಮನಾಗಿದ್ದೇನೆ ಎಂಬ ಸ್ಮೃತಿಯಿಂದ ದೇಹದ ಪರಿವೆಯನ್ನು ಸಮಾಪ್ತಿ ಮಾಡಿಕೊಳ್ಳಬೇಕಾಗಿದೆ.

ವರದಾನ:
ಆತ್ಮೀಯ ಡ್ರಿಲ್ ನ ಅಭ್ಯಾಸದ ಮೂಲಕ ಫೈನಲ್ ಪೇಪರ್ ನಲ್ಲಿ ಪಾಸ್ ಆಗುವಂತಹ ಸದಾ ಶಕ್ತಿಶಾಲಿ ಭವ.

ಹೇಗೆ ವರ್ತಮಾನ ಸಮಯದ ಪ್ರಮಾಣ ಶರೀರಕ್ಕಾಗಿ ಸರ್ವ ಖಾಯಿಲೆಗಳ ಔಷಧಿ ವ್ಯಾಯಾಮವನ್ನು ಕಲಿಸುತ್ತಾರೆ. ಅಂತಹ ಆತ್ಮಗಳಿಗೆ ಸದಾ ಶಕ್ತಿಶಾಲಿ ಮಾಡುವುದಕ್ಕಾಗಿ ಆತ್ಮೀಯ ವ್ಯಾಯಾಮದ ಅಭ್ಯಾಸ ಬೇಕು. ನಾಲ್ಕೂ ಕಡೆ ಎಷ್ಟೇ ಹಲ್-ಚಲ್ ನ ವಾತಾವರಣ ಇರಬಹುದು. ಆದರೆ ಶಬ್ಧದಲ್ಲಿರುತ್ತಾ ಶಬ್ಧದಿಂದ ದೂರ ಸ್ಥಿತಿಯ ಅಭ್ಯಾಸ ಮಾಡಿ. ಮನಸ್ಸನ್ನು ಎಲ್ಲಿ ಮತ್ತು ಎಷ್ಟು ಸಮಯ ಸ್ಥಿತ ಮಾಡಲು ಇಚ್ಛೆ ಪಡುವಿರೋ ಅಷ್ಟು ಸಮಯ ಅಲ್ಲಿ ಸ್ಥಿತ ಮಾಡಿ - ಆಗ ಶಕ್ತಿಶಾಲಿಯಾಗಿ ಫೈನಲ್ ಪೇಪರ್ ನಲ್ಲಿ ಪಾಸ್ ಆಗಲು ಸಾಧ್ಯ.

ಸ್ಲೋಗನ್:
ತಮ್ಮ ವಿಕಾರಿ ಸ್ವಭಾವ-ಸಂಸ್ಕಾರ ಮತ್ತು ಕರ್ಮವನ್ನು ಸಮರ್ಪಣೆ ಮಾಡಿ ಬಿಡುವುದೇ ಸಮರ್ಪಿತವಾಗುವುದು.