26.01.21 Morning Kannada Murli Om Shanti
BapDada Madhuban
ಮಧುರ ಮಕ್ಕಳೇ – ಬ್ರಹ್ಮಾ
ತಂದೆಯು ಶಿವ ತಂದೆಯ ರಥವಾಗಿದ್ದಾರೆ, ಇಬ್ಬರ ಪಾತ್ರವೂ ಒಟ್ಟಿಗೆ ನಡೆಯುತ್ತದೆ, ಇದರಲ್ಲಿ ಸ್ವಲ್ಪವೂ
ಸಂಶಯ ಬರಬಾರದು.
ಪ್ರಶ್ನೆ:
ಮನುಷ್ಯರು
ದುಃಖಗಳಿಂದ ಮುಕ್ತರಾಗಲು ಯಾವ ಯುಕ್ತಿಯನ್ನು ರಚಿಸುತ್ತಾರೆ, ಅದಕ್ಕೆ ಮಹಾಪಾಪವೆಂದು ಹೇಳಲಾಗುತ್ತದೆ?
ಉತ್ತರ:
ಮನುಷ್ಯರು ಯಾವಾಗ ದುಃಖಿಯಾಗುವರೋ ಆಗ ಸ್ವಯಂನ್ನು ಸಮಾಪ್ತಿ ಮಾಡಿಕೊಳ್ಳಲು ಅನೇಕ ಉಪಾಯಗಳನ್ನು
ರಚಿಸುತ್ತಾರೆ. ಜೀವಘಾತ ಮಾಡಿಕೊಳ್ಳಲು ಯೋಚಿಸುತ್ತಾರೆ. ಇದರಿಂದ ನಾವು ದುಃಖಗಳಿಂದ ಮುಕ್ತರಾಗಿ
ಬಿಡುತ್ತೇವೆಂದು ತಿಳಿಯುತ್ತಾರೆ. ಆದರೆ ಇದರಂತಹ ಮಹಾಪಾಪ ಮತ್ತ್ಯಾವುದೂ ಇಲ್ಲ. ಅವರು ಇನ್ನೂ
ದುಃಖಗಳಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ. ಇದು ಅಪಾರ ದುಃಖದ ಪ್ರಪಂಚವಾಗಿದೆ.
ಓಂ ಶಾಂತಿ.
ಮಕ್ಕಳೊಂದಿಗೆ ತಂದೆಯು ಕೇಳುತ್ತಾರೆ ಅರ್ಥಾತ್ ಆತ್ಮನೊಂದಿಗೆ ಪರಮಾತ್ಮನು ಕೇಳುತ್ತಾರೆ. ಇದಂತೂ
ನಿಮಗೆ ತಿಳಿದಿದೆ - ನಾವು ಪರಮಪಿತ ಪರಮಾತ್ಮನ ಸನ್ಮುಖದಲ್ಲಿ ಕುಳಿತಿದ್ದೇವೆ ಅವರಿಗೆ ತಮ್ಮ ರಥವಂತೂ
ಇಲ್ಲ. ಇದಂತೂ ನಿಶ್ಚಯವಿದೆಯಲ್ಲವೆ - ಈ ಭೃಕುಟಿಯ ಮಧ್ಯದಲ್ಲಿ ತಂದೆಯ ನಿವಾಸ ಸ್ಥಾನವಾಗಿದೆ. ಸ್ವಯಂ
ತಂದೆಯೇ ಹೇಳುತ್ತಾರೆ - ಇವರ ಭೃಕುಟಿಯ ಮಧ್ಯದಲ್ಲಿ ಕುಳಿತುಕೊಳ್ಳುತ್ತೇನೆ, ಈ ಶರೀರವನ್ನು
ಆಧಾರವಾಗಿ ತೆಗೆದುಕೊಳ್ಳುತ್ತೇನೆ. ಆತ್ಮವು ಭೃಕುಟಿಯ ಮಧ್ಯದಲ್ಲಿದೆ ಅಂದಾಗ ತಂದೆಯೂ ಅಲ್ಲಿಯೇ
ಕುಳಿತುಕೊಳ್ಳುತ್ತಾರೆ. ಬ್ರಹ್ಮನಿದ್ದರೆ ಶಿವ ತಂದೆಯೇ ಇರುತ್ತಾರೆ. ಬ್ರಹ್ಮಾರವರಿಲ್ಲವೆಂದರೆ ಶಿವ
ತಂದೆಯು ಹೇಗೆ ಮಾತನಾಡುವರು? ಶಿವ ತಂದೆಯನ್ನು ಮೇಲೆ ಸದಾ ನೆನಪು ಮಾಡುತ್ತಾ ಬಂದಿರಿ, ಈಗ ನೀವು
ಮಕ್ಕಳಿಗೆ ತಿಳಿದಿದೆ - ನಾವು ತಂದೆಯ ಬಳಿ ಇಲ್ಲಿ ಕುಳಿತಿದ್ದೇವೆ. ಶಿವ ತಂದೆಯು ಮೇಲಿದ್ದಾರೆ
ಎಂದಲ್ಲ. ಅವರ ಪ್ರತಿಮೆಯನ್ನು ಇಲ್ಲಿ ಪೂಜಿಸಲಾಗುತ್ತದೆ. ಇವು ಬಹಳ ತಿಳಿದುಕೊಳ್ಳುವ ಮಾತುಗಳಾಗಿವೆ.
ನಿಮಗೆ ಗೊತ್ತಿದೆ - ತಂದೆಯು ಜ್ಞಾನ ಸಾಗರನಾಗಿದ್ದಾರೆ, ಜ್ಞಾನವನ್ನು ಎಲ್ಲಿಂದ ತಿಳಿಸುತ್ತಾರೆ?
ಮೇಲಿಂದ ತಿಳಿಸುವರೇ? ತಂದೆಯು ಕೆಳಗೆ ಬಂದಿದ್ದಾರೆ, ಬ್ರಹ್ಮಾರವರ ತನುವಿನಿಂದ ತಿಳಿಸುತ್ತಾರೆ.
ನಾವು ಬ್ರಹ್ಮನನ್ನು ಒಪ್ಪುವುದಿಲ್ಲವೆಂದು ಕೆಲವರು ಹೇಳುತ್ತಾರೆ. ಆದರೆ ಶಿವ ತಂದೆಯು ಬ್ರಹ್ಮಾರವರ
ತನುವಿನ ಮೂಲಕವೇ ಹೇಳುತ್ತಾರೆ - ನನ್ನನ್ನು ನೆನಪು ಮಾಡಿ ಎಂದು. ಇದು ತಿಳುವಳಿಕೆಯ ಮಾತಲ್ಲವೆ ಆದರೆ
ಮಾಯೆಯು ಬಹಳ ಶಕ್ತಿಶಾಲಿಯಾಗಿದೆ. ಒಮ್ಮೆಲೆ ಮುಖವನ್ನು ಹಿಂತಿರುಗಿಸಿ ಬಿಡುತ್ತದೆ. ಶಿವ ತಂದೆಯು
ಈಗ ನಿಮ್ಮ ತಲೆಯನ್ನು ಮುಂದಕ್ಕೆ ತಿರುಗಿಸಿದ್ದಾರೆ, ಸಮ್ಮುಖದಲ್ಲಿ ಕುಳಿತಿದ್ದೀರಿ. ಆದರೂ ಸಹ ಈ
ಬ್ರಹ್ಮಾರವರಂತೂ ಏನೂ ಇಲ್ಲ ಎಂದು ಯಾರು ತಿಳಿದುಕೊಳ್ಳುವರೋ ಅವರ ಗತಿಯೇನಾಗುವುದು? ಅಂತಹವರು
ದುರ್ಗತಿಯನ್ನು ಹೊಂದುತ್ತಾರೆ. ಅವರಲ್ಲಿ ಸ್ವಲ್ಪವೂ ಜ್ಞಾನವಿಲ್ಲ. ಓ ಗಾಡ್ಫಾದರ್ ಎಂದು ಮನುಷ್ಯರು
ಕರೆಯುತ್ತಾರೆ ಅಂದಮೇಲೆ ಆ ಗಾಡ್ಫಾದರ್ ಹೇಳಿಸಿಕೊಳ್ಳುತ್ತಾರೆಯೇ! ಮುಕ್ತಿದಾತನೇ ಬನ್ನಿ ಎಂದು
ಅವರಿಗೆ ಹೇಳುತ್ತಾರೆ ಅಂದಮೇಲೆ ಅವರು ಅಲ್ಲಿ ಕುಳಿತೇ ಮುಕ್ತಗೊಳಿಸುತ್ತಾರೆಯೇ? ಕಲ್ಪ-ಕಲ್ಪವೂ
ಪುರುಷೋತ್ತಮ ಸಂಗಮಯುಗದಲ್ಲಿಯೇ ತಂದೆಯು ಬರುತ್ತಾರೆ ಅಂದಾಗ ಅವರು ಯಾರಲ್ಲಿ ಬರುವರು? ಅವರನ್ನೇ
ಒಂದುವೇಳೆ ಹಾರಿಸಿ ಬಿಟ್ಟರೆ ಅಂತಹವರಿಗೆ ಏನು ಹೇಳುವುದು! ನಂಬರ್ವನ್ ತಮೋಪ್ರಧಾನರು.
ನಿಶ್ಚಯವಿದ್ದರೂ ಸಹ ಮಾಯೆಯು ಒಮ್ಮೆಲೆ ಮುಖವನ್ನು ತಿರುಗಿಸಿ ಬಿಡುತ್ತದೆ. ಅದರಲ್ಲಿ ಎಷ್ಟು
ಬಲವಿದೆಯೆಂದರೆ ಒಮ್ಮೆಲೆ ಕನಿಷ್ಟರನ್ನಾಗಿ ಮಾಡಿ ಬಿಡುತ್ತದೆ. ಇಂತಹವರು ಕೆಲವು ಸೇವಾಕೇಂದ್ರಗಳಿಗೆ
ಬರುತ್ತಾರೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಎಚ್ಚರಿಕೆಯಿಂದಿರಿ, ಭಲೆ ಯಾರಿಗಾದರೂ ಕೇಳಿರುವ
ಮಾತನ್ನು ತಿಳಿಸಲೂಬಹುದು, ಆದರೆ ಅವರು ಹೇಗೆ ಪಂಡಿತರಂತೆ ಆಗಿ ಬಿಡುತ್ತಾರೆ. ಹೇಗೆ ತಂದೆಯು
ಪಂಡಿತನ ಕಥೆಯನ್ನು ತಿಳಿಸುತ್ತಾರಲ್ಲವೆ. ರಾಮ-ರಾಮ ಎಂದು ಹೇಳಿದರೆ ಸಾಗರವನ್ನು ಪಾರಾಗಿ
ಬಿಡುತ್ತೀರಿ ಎಂದು ಪಂಡಿತನು ಹೇಳಿದನು. ಇದೂ ಸಹ ಒಂದು ಕಥೆ ಮಾಡಲ್ಪಟ್ಟಿದೆ. ಈ ಸಮಯದಲ್ಲಿ ನೀವು
ತಂದೆಯ ನೆನಪಿನಿಂದ ವಿಷಯ ಸಾಗರದಿಂದ ಕ್ಷೀರ ಸಾಗರದೆಡೆಗೆ ಹೋಗುತ್ತೀರಲ್ಲವೆ. ಅವರು
ಭಕ್ತಿಮಾರ್ಗದಲ್ಲಿ ಅನೇಕ ಕಥೆಗಳನ್ನು ಬರೆದಿಟ್ಟಿದ್ದಾರೆ. ಈ ರೀತಿಯ ಮಾತುಗಳಂತೂ ಇಲ್ಲ, ಕೇವಲ
ಇದೊಂದು ಕಥೆಯು ಬರೆಯಲ್ಪಟ್ಟಿದೆ. ಪಂಡಿತನು ಬೇರೆಯವರಿಗೆ ಹೇಳುತ್ತಿದ್ದನು, ತಾನು ಮಾತ್ರ ಸಿಕ್ಕಿ
ಹಾಕಿಕೊಂಡನು. ಹಾಗೆಯೇ ಒಂದುವೇಳೆ ತಾನು ವಿಕಾರದಲ್ಲಿ ಹೋಗುತ್ತಾ ಇರುವುದು ಮತ್ತು ಅನ್ಯರಿಗೆ
ನಿರ್ವಿಕಾರಿಗಳಾಗಿ ಎಂದು ಹೇಳಿದರೆ ಅದರ ಪ್ರಭಾವ ಬೀರುವುದೆ? ಇಂತಹ ಬ್ರಹ್ಮಾಕುಮಾರ-ಕುಮಾರಿಯರೂ
ಇದ್ದಾರೆ. ತನಗೆ ನಿಶ್ಚಯವಿಲ್ಲ ಅನ್ಯರಿಗೆ ತಿಳಿಸುತ್ತಿರುತ್ತಾರೆ. ಆದ್ದರಿಂದ ಕೆಲವೊಂದೆಡೆ
ಹೇಳುವವರಿಗಿಂತಲೂ ಕೇಳುವವರು ಮುಂದೆ ಹೊರಟು ಹೋಗುತ್ತಾರೆ. ಯಾರು ಅನೇಕರ ಸೇವೆ ಮಾಡುವರೋ ಅವರು
ಖಂಡಿತ ಪ್ರಿಯರೆನಿಸುತ್ತಾರಲ್ಲವೆ. ಸುಳ್ಳು ಪಂಡಿತರಾಗಿ ಬಿಟ್ಟರೆ ಅವರನ್ನು ಯಾರು ಪ್ರೀತಿ
ಮಾಡುತ್ತಾರೆ? ಮತ್ತೆ ಯಾರು ಪ್ರತ್ಯಕ್ಷದಲ್ಲಿ ನೆನಪು ಮಾಡುವರು ಅವರ ಕಡೆ ಪ್ರೀತಿಯಿರುವುದು.
ಒಳ್ಳೊಳ್ಳೆಯ ಮಹಾರಥಿಗಳನ್ನೂ ಸಹ ಮಾಯೆಯು ನುಂಗಿ ಬಿಡುತ್ತದೆ. ಅನೇಕರು ಹೀಗೆ ಹೊರಟು ಹೋದರು.
ತಂದೆಯು ತಿಳಿಸುತ್ತಾರೆ - ಇನ್ನೂ ಕರ್ಮಾತೀತ ಸ್ಥಿತಿಯಾಗಿಲ್ಲ, ಒಂದು ಕಡೆ ಯುದ್ಧವಾಗುವುದು,
ಇನ್ನೊಂದು ಕಡೆ ಕರ್ಮಾತೀತ ಸ್ಥಿತಿಯಾಗುವುದು. ಪೂರ್ಣ ಸಂಬಂಧವಿದೆ. ಮತ್ತೆ ಯುದ್ಧವು ಮುಕ್ತಾಯವಾಗಿ
ಬಿಟ್ಟರೆ ನೀವು ಇಲ್ಲಿಂದ ವರ್ಗಾವಣೆಯಾಗುತ್ತೀರಿ. ಮೊದಲು ರುದ್ರ ಮಾಲೆಯಾಗುತ್ತದೆ - ಈ ಮಾತುಗಳನ್ನು
ಮತ್ತ್ಯಾರೂ ತಿಳಿದುಕೊಂಡಿಲ್ಲ. ನಿಮಗೆ ತಿಳಿದಿದೆ - ವಿನಾಶವು ಸನ್ಮುಖದಲ್ಲಿ ನಿಂತಿದೆ. ಈಗ ನೀವು
ಇನ್ನೂ ಕಡಿಮೆ ಅಂದಾಜಿನಲ್ಲಿದ್ದೀರಿ, ಅವರು ಮೆಜಾರಿಟಿಯಲ್ಲಿದ್ದಾರೆ. ಅಂದಾಗ ನಿಮ್ಮ ಮಾತನ್ನು ಯಾರು
ಪಾಲಿಸುವರು? ಯಾವಾಗ ನಿಮ್ಮದು ವೃದ್ಧಿಯಾಗುವುದೋ ಆಗ ನಿಮ್ಮ ಯೋಗಬಲದಿಂದ ಅನೇಕರು ಆಕರ್ಷಿತರಾಗಿ
ಬರುತ್ತಾರೆ. ಎಷ್ಟು ನಿಮ್ಮಿಂದ ತುಕ್ಕು ಬಿಡುತ್ತಾ ಹೋಗುವುದೋ ಅಷ್ಟು ಬಲ ತುಂಬುತ್ತಾ ಹೋಗುವುದು.
ತಂದೆಯು ಎಲ್ಲರ ಒಳಹೊಕ್ಕು ನೋಡುತ್ತಾರೆಂದಲ್ಲ, ಇಲ್ಲಿ ಬಂದು ಎಲ್ಲರನ್ನೂ ನೋಡುತ್ತಾರೆ. ಎಲ್ಲರ
ಸ್ಥಿತಿಗಳನ್ನು ನೋಡಿದಾಗ ತಂದೆಗೆ ಅರ್ಥವಾಗುತ್ತದೆ. ತಂದೆಯು ಮಕ್ಕಳ ಸ್ಥಿತಿಯ ಬಗ್ಗೆ
ಅರಿತುಕೊಳ್ಳುವುದಿಲ್ಲವೆ? ಎಲ್ಲವೂ ಅರ್ಥವಾಗುತ್ತದೆ. ಇದರಲ್ಲಿ ಅಂತರ್ಯಾಮಿಯ ಯಾವುದೇ ಮಾತಿಲ್ಲ.
ಈಗಿನ್ನೂ ಕರ್ಮಾತೀತ ಸ್ಥಿತಿಯಾಗಿಲ್ಲ. ಆಸುರೀ ಮಾತುಕತೆ, ಚಲನೆ ಇತ್ಯಾದಿಗಳೆಲ್ಲವೂ ಪ್ರಸಿದ್ಧವಾಗಿ
ಬಿಡುತ್ತವೆ. ನೀವಂತೂ ತಮ್ಮದನ್ನು ದೈವೀ ಚಲನೆಯನ್ನಾಗಿ ಮಾಡಿಕೊಳ್ಳಬೇಕಾಗಿದೆ. ದೇವತೆಗಳು ಸರ್ವಗುಣ
ಸಂಪನ್ನರಲ್ಲವೆ. ನೀವೀಗ ಅವರಂತೆ ಆಗಬೇಕಾಗಿದೆ. ಈ ಆಸುರರೆಲ್ಲಿ, ಆ ದೇವತೆಗಳೆಲ್ಲಿ! ಆದರೆ ಮಾಯೆಯು
ಯಾರನ್ನೂ ಬಿಡುವುದಿಲ್ಲ. ಮುಟ್ಟಿದರೆ ಮುನಿಯನ್ನಾಗಿ ಮಾಡಿ ಬಿಡುತ್ತದೆ. ಒಮ್ಮೆಲೆ ಸಾಯಿಸಿ
ಬಿಡುತ್ತದೆ. ಇದು 5ನೇ ಮಾಡಿ ಅಲ್ಲವೆ. ದೇಹಾಭಿಮಾನವು ಬಂದಾಗಲೇ ಒಮ್ಮೆಲೆ ಮೇಲಿನಿಂದ ಕೆಳಗೆ
ಬೀಳುತ್ತಾರೆ. ಬಿದ್ದರೆ ಸತ್ತರೆಂದರ್ಥ. ಇತ್ತೀಚೆಗೆ ತಮ್ಮನ್ನು ತಾವು ಹತ್ಯೆ ಮಾಡಿಕೊಳ್ಳಲು
ಎಂತೆಂತಹ ಉಪಾಯಗಳನ್ನು ರಚಿಸುತ್ತಾರೆ. 21ನೇ ಅಂತಸ್ತಿನಿಂದ ಬೀಳುತ್ತಾರೆ, ಇದರಿಂದ ಒಂದೇ ಸಲ
ಸಮಾಪ್ತಿಯಾಗಿ ಬಿಡಬೇಕು ಎಂದು. ಏಕೆಂದರೆ ಮತ್ತೆ ಆಸ್ಪತ್ರೆಯಲ್ಲಿ ನೋವನ್ನನುಭವಿಸಬಾರದು.
ದುಃಖವನ್ನನುಭವಿಸಬಾರದು. 5ನೇ ಅಂತಸ್ತಿನಿಂದ ಬಿದ್ದ ಮೇಲೆ ಒಂದುವೇಳೆ ಪ್ರಾಣ ಹೋಗದೇ ಇದ್ದರೆ
ಎಷ್ಟೊಂದು ದುಃಖವನ್ನು ಅನುಭವಿಸುತ್ತಾ ಇರುತ್ತಾರೆ. ಕೆಲವರು ತಮಗೆ ಬೆಂಕಿಯನ್ನಿಟ್ಟುಕೊಳ್ಳುತ್ತಾರೆ.
ಒಂದುವೇಳೆ ಅವರನ್ನು ಯಾರಾದರೂ ಅದರಿಂದ ರಕ್ಷಿಸುತ್ತಾರೆಂದರೆ ಮತ್ತೆ ಅವರಿಗೆ ಎಷ್ಟೊಂದು ದುಃಖವನ್ನು
ಸಹನೆ ಮಾಡಬೇಕಾಗುತ್ತದೆ. ಒಂದುವೇಳೆ ಸುಟ್ಟು ಹೋದರೆ ಆತ್ಮವಂತೂ ಹೊರಟು ಹೋಗುತ್ತದೆಯಲ್ಲವೆ.
ಆದ್ದರಿಂದ ಜೀವಘಾತ ಮಾಡಿಕೊಳ್ಳುತ್ತಾರೆ. ಶರೀರವನ್ನು ಸಮಾಪ್ತಿ ಮಾಡಿಕೊಳ್ಳುತ್ತಾರೆ. ಶರೀರ
ಬಿಟ್ಟರೆ ನಾವು ದುಃಖದಿಂದ ಮುಕ್ತರಾಗುತ್ತೇವೆಂದು ತಿಳಿದುಕೊಳ್ಳುತ್ತಾರೆ ಆದರೆ ಇದೂ ಸಹ
ಮಹಾಪಾಪವಾಗಿದೆ. ಇನ್ನೂ ಅಧಿಕ ದುಃಖವನ್ನು ಅನುಭವಿಸಬೇಕಾಗುತ್ತದೆ. ಇದು ಅಪಾರ ದುಃಖದ
ಪ್ರಪಂಚವಾಗಿದೆ. ಅಲ್ಲಿ ಅಪಾರ ಸುಖವಿರುತ್ತದೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಾವೀಗ
ಹಿಂತಿರುಗಿ ಹೋಗುತ್ತೇವೆ. ದುಃಖಧಾಮದಿಂದ ಸುಖಧಾಮಕ್ಕೆ ಹೋಗುತ್ತೇವೆ. ಈಗ ಯಾವ ತಂದೆಯು ಸುಖಧಾಮದ
ಮಾಲೀಕರನ್ನಾಗಿ ಮಾಡುತ್ತಾರೆಯೋ ಅವರನ್ನು ನೆನಪು ಮಾಡಬೇಕಾಗಿದೆ. ಈ ಬ್ರಹ್ಮಾರವರ ಮೂಲಕ ತಂದೆಯು
ತಿಳಿಸಿಕೊಡುತ್ತಾರೆ, ಬ್ರಹ್ಮನ ಮೂಲಕ ರಾಜಯೋಗದ ಸ್ಥಾಪನೆಯ ಚಿತ್ರವೂ ಇದೆಯಲ್ಲವೆ. ಬಾಬಾ, ನಾವು
ಅನೇಕಬಾರಿ ತಮ್ಮಿಂದ ಸ್ವರ್ಗದ ಆಸ್ತಿಯನ್ನು ತೆಗೆದುಕೊಳ್ಳಲು ಬಂದಿದ್ದೇವೆಂದು ನೀವು ಹೇಳುತ್ತೀರಿ.
ತಂದೆಯೂ ಸಹ ಯಾವಾಗ ಪ್ರಪಂಚವು ಬದಲಾಗಬೇಕೋ ಆಗ ಸಂಗಮದಲ್ಲಿಯೇ ಬರುತ್ತಾರೆ ಆದ್ದರಿಂದ ತಂದೆಯು
ತಿಳಿಸುತ್ತಾರೆ - ನಾನು ನೀವು ಮಕ್ಕಳನ್ನು ದುಃಖದಿಂದ ಬಿಡಿಸಿ ಸುಖದ ಪಾವನ ಪ್ರಪಂಚದಲ್ಲಿ
ಕರೆದುಕೊಂಡು ಹೋಗಲು ಬಂದಿದ್ದೇನೆ. ಹೇ ಪತಿತ-ಪಾವನ... ಎಂದು ಕರೆಯುತ್ತಾರೆ. ಆದರೆ ಈ ಛೀ ಛೀ
ಪ್ರಪಂಚದಿಂದ ಮನೆಗೆ ಕರೆದುಕೊಂಡು ಹೋಗಿ ಎಂದು ನಾವು ಮಹಾಕಾಲನನ್ನು ಕರೆಯುತ್ತಿದ್ದೇವೆಂಬುದನ್ನು
ತಿಳಿದುಕೊಂಡಿಲ್ಲ. ಅವಶ್ಯವಾಗಿ ತಂದೆಯು ಬರುವರು, ನಾವು ಸಾಯುತ್ತೇವೆ ಆಗ ಶಾಂತಿ
ಸ್ಥಾಪನೆಯಾಗುತ್ತದೆಯಲ್ಲವೆ. ಶಾಂತಿ ಬೇಕು-ಶಾಂತಿ ಬೇಕು ಎಂದು ಹೇಳುತ್ತಿರುತ್ತಾರೆ. ಶಾಂತಿಯಂತೂ
ಪರಮಧಾಮದಲ್ಲಿರುತ್ತದೆ ಆದರೆ ಈ ಪ್ರಪಂಚದಲ್ಲಿ ಎಷ್ಟೊಂದು ಮನುಷ್ಯರಿದ್ದಾರೆ ಅಂದಮೇಲೆ ಶಾಂತಿಯು
ಹೇಗೆ ಸ್ಥಾಪನೆಯಾಗುವುದು! ಸತ್ಯಯುಗದಲ್ಲಿ ಸುಖ-ಶಾಂತಿಯಿತ್ತು, ಈಗ ಕಲಿಯುಗದಲ್ಲಿ ಅನೇಕ ಧರ್ಮಗಳಿವೆ.
ಯಾವಾಗ ಅನೇಕ ಧರ್ಮಗಳು ಸಮಾಪ್ತಿಯಾಗುವುದೋ ಆಗ ಒಂದು ಧರ್ಮದ ಸ್ಥಾಪನೆಯಾಗುವುದು ಮತ್ತು
ಸುಖ-ಶಾಂತಿಯಿಂದ ಇರುತ್ತೀರಲ್ಲವೆ. ಹಾಹಾಕಾರದ ನಂತರವೇ ಮತ್ತೆ ಜಯ ಜಯಕಾರವಾಗುವುದು. ಮುಂದೆ ಹೋದಂತೆ
ನೋಡುವಿರಿ - ಮೃತ್ಯುವಿನ ಸಂತೆ ಎಷ್ಟು ಜೋರಾಗಿರುತ್ತದೆ! ವಿನಾಶವು ಖಂಡಿತ ಆಗುವುದು. ತಂದೆಯೇ ಬಂದು
ಒಂದು ಧರ್ಮದ ಸ್ಥಾಪನೆ ಮಾಡಿಸುತ್ತಾರೆ, ರಾಜಯೋಗವನ್ನೂ ಕಲಿಸುತ್ತಾರೆ. ಉಳಿದ ಅನೇಕ ಧರ್ಮಗಳು
ಸಮಾಪ್ತಿಯಾಗುತ್ತದೆ. ಗೀತೆಯಲ್ಲಿ ಏನನ್ನೂ ತೋರಿಸಿಲ್ಲ. ಪಂಚ ಪಾಂಡವರು ಮತ್ತು ನಾಯಿಯು
ಹಿಮಾಲಯದಲ್ಲಿ ಕರಗಿ ಹೋದರು ಮತ್ತೆ ಫಲಿತಾಂಶವೇನು? ಪ್ರಳಯವನ್ನು ತೋರಿಸಿ ಬಿಟ್ಟಿದ್ದಾರೆ. ಭಲೆ
ಜಲಮಯವಾಗುತ್ತದೆ ಆದರೆ ಇಡೀ ಪ್ರಪಂಚವು ಜಲಯಮಯವಾಗಲು ಸಾಧ್ಯವಿಲ್ಲ. ಭಾರತವು ಅವಿನಾಶಿ, ಪವಿತ್ರ
ಖಂಡವಾಗಿದೆ ಅದರಲ್ಲಿಯೂ ಅಬುಪರ್ವತವು ಎಲ್ಲದಕ್ಕಿಂತ ಪವಿತ್ರ ತೀರ್ಥಸ್ಥಾನವಾಗಿದೆ, ಎಲ್ಲಿ ತಂದೆಯು
ಬಂದು ಮಕ್ಕಳ ಮೂಲಕ ಸರ್ವರ ಸದ್ಗತಿ ಮಾಡುತ್ತಾರೆ. ದಿಲ್ವಾಡಾ ಮಂದಿರದಲ್ಲಿ ಎಷ್ಟು ಒಳ್ಳೆಯ
ನೆನಪಾರ್ಥವಿದೆ, ಎಷ್ಟು ಅರ್ಥ ಸಹಿತವಾಗಿದೆ ಆದರೆ ಯಾರು ಅದನ್ನು ಕಟ್ಟಿಸಿದ್ದಾರೆಯೋ ಅದನ್ನು
ತಿಳಿದುಕೊಂಡಿಲ್ಲ. ಆದರೂ ಸಹ ಅವರು ಒಳ್ಳೆಯ ಬುದ್ಧಿವಂತರಾಗಿರಬೇಕಲ್ಲವೆ. ದ್ವಾಪರದಲ್ಲಿ ಅವಶ್ಯವಾಗಿ
ಒಳ್ಳೆಯ ಬುದ್ಧಿವಂತರಿರುತ್ತಾರೆ, ದ್ವಾಪರದಲ್ಲಾದರೋ ತಮೋಬುದ್ಧಿವರಿರುತ್ತಾರೆ ಆದರೆ ಕಲಿಯುಗದಲ್ಲಿ
ತಮೋಪ್ರಧಾನರಿದ್ದಾರೆ. ಎಲ್ಲಾ ಮಂದಿರಗಳಿಗಿಂತಲೂ ಇದು ಶ್ರೇಷ್ಠವಾಗಿದೆ ಎಲ್ಲಿ ನೀವು ಕುಳಿತಿದ್ದೀರಿ.
ನಿಮಗೆ ತಿಳಿದಿದೆ - ನಾವು ಚೈತನ್ಯವಾಗಿ ಕುಳಿತಿದ್ದೇವೆ, ಅದು ಜಡ ಮಂದಿರವಾಗಿದೆ. ನಮ್ಮದೇ
ನೆನಪಾರ್ಥ ಮಂದಿರವಾಗಿದೆ ಆದರೆ ನಾವು ಚೈತನ್ಯ ದಿಲ್ವಾಡಾ ಮಂದಿರವೆಂದು ಬರೆಯಲು ಸಾಧ್ಯವಿಲ್ಲ
ಏಕೆಂದರೆ ಜೈನರು ಇವರ್ಯಾರು ಹೀಗೆ ಹೇಳುತ್ತಾರೆ! ಎಂದು ಕೇಳುತ್ತಾರೆ.
ನೀವೀಗ ನೋಡುತ್ತಾ ಇರುತ್ತೀರಿ - ವಿನಾಶದಲ್ಲಿ ಹೋಲ್ಸೇಲ್ ಮೃತ್ಯುವಾಗುವುದು. ಹೋಲ್ಸೇಲ್ ಮಹಾಭಾರಿ
ಯುದ್ಧವಾಗುವುದು, ಎಲ್ಲರೂ ಸಮಾಪ್ತಿಯಾಗುತ್ತಾರೆ. ಬಾಕಿ ಒಂದು ಖಂಡವೇ ಇರುವುದು, ಭಾರತವು ಬಹಳ
ಚಿಕ್ಕದಾಗಿರುವುದು. ಉಳಿದೆಲ್ಲವೂ ಸಮಾಪ್ತಿಯಾಗಿ ಬಿಡುತ್ತದೆ. ಸ್ವರ್ಗವು ಎಷ್ಟು ಚಿಕ್ಕದಾಗಿರುವುದು!
ಈಗ ನಿಮ್ಮ ಬುದ್ಧಿಯಲ್ಲಿ ಈ ಜ್ಞಾನವಿದೆ. ಯಾರಿಗಾದರೂ ತಿಳಿಸುವುದರಲ್ಲಿ ಸಮಯ ಹಿಡಿಸುವುದಿಲ್ಲ. ಇದು
ಪುರುಷೋತ್ತಮ ಸಂಗಮಯುಗವಾಗಿದೆ. ಇಲ್ಲಿ ಎಷ್ಟೊಂದು ಮಂದಿ ಮನುಷ್ಯರಿದ್ದಾರೆ ಮತ್ತು ಸತ್ಯಯುಗದಲ್ಲಿ
ಎಷ್ಟೊಂದು ಕಡಿಮೆ ಜನಸಂಖ್ಯೆಯಿರುತ್ತದೆ. ಇವರೆಲ್ಲರೂ ಸಮಾಪ್ತಿಯಾಗುತ್ತಾರೆ. ಮತ್ತೆ ಮೊದಲಿನಿಂದ
ವಿಶ್ವದ ಇತಿಹಾಸ-ಭೂಗೋಳವು ಪುನರಾವರ್ತನೆಯಾಗುತ್ತದೆ. ಅವಶ್ಯವಾಗಿ ಸ್ವರ್ಗದಿಂದ ಪುನರಾವರ್ತನೆ
ಮಾಡುತ್ತೀರಿ. ನೀವು ಕೊನೆಯಲ್ಲಿ ಬರುವುದಿಲ್ಲ, ಈ ಡ್ರಾಮಾದ ಚಕ್ರವು ಅನಾದಿಯಾಗಿದೆ, ಸುತ್ತುತ್ತಾ
ಇರುತ್ತದೆ. ಇತ್ತಕಡೆ ಕಲಿಯುಗ, ಅತ್ತ ಕಡೆ ಸತ್ಯಯುಗವಿದೆ. ನಾವು ಸಂಗಮದಲ್ಲಿದ್ದೇವೆ. ತಂದೆಯು
ಬರುತ್ತಾರೆ ಅಂದಮೇಲೆ ರಥವು ಅವಶ್ಯವಾಗಿ ಬೇಕಲ್ಲವೆ. ಈಗ ತಂದೆಯು ತಿಳಿಸುತ್ತಾರೆ - ನೀವು ಮನೆಗೆ
ಹೋಗುತ್ತೀರಿ, ನೀವೇ ಲಕ್ಷ್ಮೀ-ನಾರಾಯಣರಾಗಬೇಕಾಗಿದೆ ಆದ್ದರಿಂದ ದೈವೀ ಗುಣಗಳನ್ನೂ ಧಾರಣೆ ಮಾಡಬೇಕು.
ಮಾಯೆಯು ಹೀಗಿದೆ ಒಮ್ಮೆಲೇ ಬೀಳಿಸಿ ಬಿಡುತ್ತದೆ. ಆಗ ಬಾಬಾ ನಾವು ಮುಖ ಕಪ್ಪು ಮಾಡಿಕೊಂಡೆವು ಎಂದು
ಬರೆಯುತ್ತಾರೆ.
ರಾಮ ರಾಜ್ಯ ಮತ್ತು ರಾವಣ ರಾಜ್ಯವೆಂದು ಯಾವುದಕ್ಕೆ ಹೇಳಲಾಗುತ್ತದೆ ಎಂಬುದನ್ನೂ ನೀವು ಮಕ್ಕಳಿಗೆ
ತಿಳಿಸಲಾಗಿದೆ. ಪತಿತರಿಂದ ಪಾವನರು ಮತ್ತೆ ಪಾವನರಿಂದ ಪತಿತರು ಹೇಗಾಗುತ್ತೀರಿ, ಈ ಆಟದ ರಹಸ್ಯವನ್ನು
ತಂದೆಯೇ ಕುಳಿತು ತಿಳಿಸುತ್ತಾರೆ. ತಂದೆಯು ಜ್ಞಾನಪೂರ್ಣ ಬೀಜ ರೂಪನಾಗಿದ್ದಾರೆ, ಚೈತನ್ಯನಾಗಿದ್ದಾರೆ,
ಅವರೇ ಬಂದು ತಿಳಿಸಿಕೊಡುತ್ತಾರೆ. ತಂದೆಯೇ ಹೇಳುತ್ತಾರೆ - ಇಡೀ ಕಲ್ಪವೃಕ್ಷದ ರಹಸ್ಯವನ್ನು
ತಿಳಿದುಕೊಂಡಿರಾ? ಇದರಲ್ಲಿ ಏನೇನಾಗುತ್ತದೆ? ನೀವು ಇದರಲ್ಲಿ ಎಷ್ಟು ಪಾತ್ರವನ್ನು ಅಭಿನಯಿಸಿದಿರಿ?
ಅರ್ಧಕಲ್ಪ ದೈವೀ ಸ್ವರಾಜ್ಯ, ಅರ್ಧಕಲ್ಪ ಆಸುರೀ ರಾಜ್ಯವಿರುತ್ತದೆ. ಒಳ್ಳೊಳ್ಳೆಯ ಮಕ್ಕಳ
ಬುದ್ಧಿಯಲ್ಲಿ ಜ್ಞಾನವಿರುತ್ತದೆ. ತಂದೆಯು ತಮ್ಮ ಸಮಾನರನ್ನಾಗಿ ಮಾಡಿಕೊಳ್ಳುತ್ತಾರಲ್ಲವೆ.
ಶಿಕ್ಷಕರಲ್ಲಿಯೂ ನಂಬರ್ವಾರ್ ಇರುತ್ತಾರೆ. ಕೆಲವರು ಶಿಕ್ಷಕರಾಗಿಯೂ ಸಹ ಮತ್ತೆ ಕೆಟ್ಟು ಹೋಗುತ್ತಾರೆ
ಅನೇಕರಿಗೆ ಕಲಿಸಿದವರು ಮತ್ತೆ ಸ್ವಯಂ ತಾವೇ ಸಮಾಪ್ತಿಯಾದರು. ಚಿಕ್ಕ-ಚಿಕ್ಕ ಮಕ್ಕಳಲ್ಲಿಯೂ
ಭಿನ್ನ-ಭಿನ್ನ ಸಂಸ್ಕಾರದವರಿರುತ್ತಾರೆ. ಕೆಲವರು ನಂಬರ್ವನ್ ಪತಿತರಾಗಿದ್ದಾರೆ, ಇನ್ನು ಕೆಲವರು
ಸ್ವರ್ಗದಲ್ಲಿ ಹೋಗಲು ಯೋಗ್ಯರಾಗಿದ್ದಾರೆ. ಕೆಲವರು ಜ್ಞಾನವನ್ನು ತೆಗೆದುಕೊಳ್ಳುವುದೇ ಇಲ್ಲ. ತಮ್ಮ
ಚಲನೆಯನ್ನೂ ಸುಧಾರಣೆ ಮಾಡಿಕೊಳ್ಳುವುದಿಲ್ಲ. ಎಲ್ಲರಿಗೆ ದುಃಖವನ್ನೇ ಕೊಡುತ್ತಿರುತ್ತಾರೆ. ಇದನ್ನೂ
ಸಹ ಶಾಸ್ತ್ರಗಳಲ್ಲಿ ತೋರಿಸಿದ್ದಾರೆ - ಅಸುರರು ಬಂದು ಗೊತ್ತಿಲ್ಲದಂತೆ ಕುಳಿತು ಬಿಡುತ್ತಿದ್ದರು
ಅಂದರೆ ಅಸುರರಾಗಿ ಎಷ್ಟೊಂದು ತೊಂದರೆ ಕೊಡುತ್ತಾರೆ. ಇದೆಲ್ಲವೂ ನಡೆಯುತ್ತದೆ. ಸ್ವರ್ಗದ ಸ್ಥಾಪನೆ
ಮಾಡಲು ಶ್ರೇಷ್ಠಾತಿ ಶ್ರೇಷ್ಠ ತಂದೆಯೇ ಬರಬೇಕಾಗುತ್ತದೆ. ಮಾಯೆಯು ಬಹಳ ಪ್ರಬಲವಾಗಿದೆ. ದಾನವನ್ನು
ಕೊಡುತ್ತಾರೆ ಆದರೂ ಮಾಯೆಯು ಬುದ್ಧಿಯನ್ನು ತಿರುಗಿಸಿ ಬಿಡುತ್ತದೆ. ಅರ್ಧಂಬರ್ಧ ಇರುವವರನ್ನು
ಮಾಯೆಯು ಖಂಡಿತ ತಿಂದು ಹಾಕುತ್ತದೆ. ಆದ್ದರಿಂದಲೇ ಮಾಯೆಯು ಶಕ್ತಿಶಾಲಿಯೆಂದು ಹೇಳುತ್ತಾರೆ.
ಅರ್ಧಕಲ್ಪ ಮಾಯೆಯು ರಾಜ್ಯ ಮಾಡುತ್ತದೆ ಅಂದಮೇಲೆ ಅವಶ್ಯವಾಗಿ ಅಷ್ಟು ಶಕ್ತಿಶಾಲಿಯಾಗಿರಬೇಕಲ್ಲವೆ.
ಮಾಯೆಯಿಂದ ಸೋಲುವವರ ಗತಿಯೇನಾಗಿ ಬಿಡುತ್ತದೆ! ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಎಂದೂ ಸಹ
ಮುಟ್ಟಿದರೆ ಮುನಿಯಾಗಬಾರದು. ದೈವೀ ಗುಣಗಳನ್ನು ಧಾರಣೆ ಮಾಡಿ ತಮ್ಮ ಚಲನೆಯನ್ನು ಸುಧಾರಣೆ
ಮಾಡಿಕೊಳ್ಳಬೇಕು.
2. ತಂದೆಯ ಪ್ರೀತಿಯನ್ನು ಪಡೆಯಲು ಸೇವೆ ಮಾಡಬೇಕು ಆದರೆ ಏನನ್ನು ಅನ್ಯರಿಗೆ ತಿಳಿಸುತ್ತೀರೋ ಅದನ್ನು
ಸ್ವಯಂ ಧಾರಣೆ ಮಾಡಿಕೊಳ್ಳಬೇಕಾಗಿದೆ. ಕರ್ಮಾತೀತ ಸ್ಥಿತಿಯಲ್ಲಿ ಹೋಗುವ ಸಂಪೂರ್ಣ ಪುರುಷಾರ್ಥ
ಮಾಡಬೇಕಾಗಿದೆ.
ವರದಾನ:
ಪರಿಶ್ರಮ ಮತ್ತು
ಮಹಾನತೆಯ ಜೊತೆ ಆತ್ಮೀಯತೆಯ ಅನುಭವ ಮಾಡಿಸುವಂತಹ ಶಕ್ತಿಶಾಲಿ ಸೇವಾಧಾರಿ ಭವ.
ಯಾರೇ ಆತ್ಮಗಳು ನಿಮ್ಮ
ಸಂಪರ್ಕದಲ್ಲಿ ಬರುತ್ತಾರೆ ಅವರಿಗೆ ಆತ್ಮೀಯ ಶಕ್ತಿಯ ಅನುಭವ ಮಾಡಿಸಿ. ಈ ರೀತಿ ಸ್ಥೂಲ ಮತ್ತು
ಸೂಕ್ಷ್ಮ ಸ್ಟೇಜ್ ಮಾಡಿ ಯಾವುದರಿಂದ ಬರುವಂತಹ ಆತ್ಮಗಳು ತಮ್ಮ ಸ್ವರೂಪದ ಮತ್ತು ಆತ್ಮೀಯತೆಯ ಅನುಭವ
ಮಾಡಲಿ. ಇಂತಹ ಶಕ್ತಿಶಾಲಿ ಸೇವೆಯನ್ನು ಮಾಡಲು ಸೇವಾಧಾರಿ ಮಕ್ಕಳಿಗೆ ವ್ಯರ್ಥ ಸಂಕಲ್ಪ, ವ್ಯರ್ಥ
ಮಾತು, ವ್ಯರ್ಥ ಕರ್ಮದ ಏರುಪೇರಿನಿಂದ ದೂರ ಏಕಾಗ್ರತೆ ಅರ್ಥಾತ್ ಆತ್ಮೀಯತೆಯಲ್ಲಿರುವಂತಹ ವ್ರತ
ತೆಗೆದುಕೊಳ್ಳಬೇಕಾಗುತ್ತದ. ಈ ವ್ರತದಿಂದ ಜ್ಞಾನ ಸೂರ್ಯನ ಚಮತ್ಕಾರ ತೋರಿಸಲು ಸಾಧ್ಯ.
ಸ್ಲೋಗನ್:
ತಂದೆ ಮತ್ತು ಸೇವೆಯ
ಆರ್ಶೀವಾದದ ವಿಮಾನದಲ್ಲಿ ಹಾರುವಂತಹವರೇ ಹಾರುವ ಯೋಗಿಗಳು.
ಡಬ್ಬಲ್ಲೈಟ್ ಸ್ಥಿತಿಯ
ಅನುಭವ:-
ಆಜ್ಞಾಕಾರಿಯಾಗಿದ್ದು ಬಾಪ್ದಾದಾರವರ ಆಜ್ಞೆಯೆಂಬ ಹೆಜ್ಜೆಯಲ್ಲಿ ಹೆಜ್ಜೆಯನ್ನಿಡುತ್ತಾ, ಪರಮಾತ್ಮನ
ಆಶೀರ್ವಾದವನ್ನು ಅನುಭವ ಮಾಡಿರಿ. ಆಜ್ಞಾಕಾರಿ ಮಕ್ಕಳಿಗೇ ಸರ್ವ ಸಂಬಂಧದಿಂದ ಪರಮಾತ್ಮನ ಆಶೀರ್ವಾದವು
ಸಿಗುತ್ತದೆ, ಈ ಆಶೀರ್ವಾದವೇ ಡಬ್ಬಲ್ಲೈಟ್ ಮಾಡಿ ಬಿಡುತ್ತದೆ.