13.02.21 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನೀವು
ತಂದೆಯ ಬಳಿ ತಮ್ಮ ಮಲಗಿರುವ ಅದೃಷ್ಟವನ್ನು ಜಾಗೃತ ಮಾಡಿಕೊಳ್ಳಲು ಬಂದಿದ್ದೀರಿ, ಅದೃಷ್ಟ ಬೆಳಗುವುದು
ಎಂದರೆ ವಿಶ್ವದ ಮಾಲೀಕರಾಗುವುದು.”
ಪ್ರಶ್ನೆ:
ಯಾವ ಔಷಧಿಯು
ನೀವು ಮಕ್ಕಳನ್ನು ತಂದೆಯ ಸಮಾನ ಬುದ್ಧಿವಂತರನ್ನಾಗಿ ಮಾಡಿ ಬಿಡುತ್ತದೆ?
ಉತ್ತರ:
ಈ ವಿದ್ಯೆಯು ನೀವು ಮಕ್ಕಳಿಗೆ ಬುದ್ಧಿಯ ಔಷಧಿಯಾಗಿದೆ. ಯಾರು ನಿತ್ಯವೂ ವಿದ್ಯೆಯನ್ನು ಓದುವರೋ
ಅರ್ಥಾತ್ ಈ ಔಷಧಿಯನ್ನು ತೆಗೆದುಕೊಳ್ಳುವರೋ ಅವರ ಬುದ್ಧಿಯು ಪಾರಸವಾಗಿ ಬಿಡುತ್ತದೆ. ಪಾರಸನಾಥ
ತಂದೆಯು ಯಾರು ಬುದ್ಧಿವಂತರಿಗೂ ಬುದ್ಧಿವಂತನಾಗಿದ್ದಾರೆ ಅವರು ನಿಮ್ಮನ್ನು ತನ್ನ ಸಮಾನ ಪಾರಸ
ಬುದ್ಧಿಯವರನ್ನಾಗಿ ಮಾಡುತ್ತಾರೆ.
ಗೀತೆ:
ಅದೃಷ್ಟವನ್ನು
ಬೆಳಗಿಸಿಕೊಂಡು ಬಂದಿದ್ದೇನೆ..................
ಓಂ ಶಾಂತಿ.
ಗೀತೆಯ ಸಾಲನ್ನು ಕೇಳಿ ಮಧುರಾತಿ ಮಧುರ ಮಕ್ಕಳಿಗೆ ರೋಮಾಂಚನವಾಗಿ ಬಿಡಬೇಕು. ಭಲೆ ಇದು ಸಾಮಾನ್ಯ
ಗೀತೆಯಾಗಿದೆ ಆದರೆ ಇದರ ಸಾರವನ್ನು ಮತ್ತ್ಯಾರೂ ತಿಳಿದುಕೊಂಡಿಲ್ಲ. ತಂದೆಯೇ ಬಂದು ಗೀತೆ, ಶಾಸ್ತ್ರ
ಇತ್ಯಾದಿಗಳ ಅರ್ಥವನ್ನು ತಿಳಿಸುತ್ತಾರೆ. ಮಧುರಾತಿ ಮಧುರ ಮಕ್ಕಳು ಇದನ್ನೂ ತಿಳಿದುಕೊಂಡಿದ್ದೀರಿ -
ಕಲಿಯುಗದಲ್ಲಿ ಎಲ್ಲರ ಅದೃಷ್ಟವು ಮಲಗಿಕೊಂಡು ಬಿಟ್ಟಿದೆ. ಸತ್ಯಯುಗದಲ್ಲಿ ಎಲ್ಲರ ಅದೃಷ್ಟವು
ಜಾಗೃತವಾಗಿರುತ್ತದೆ. ಮಲಗಿರುವ ಅದೃಷ್ಟವನ್ನು ಜಾಗೃತ ಮಾಡುವವರು ಮತ್ತು ಶ್ರೀಮತ ಕೊಡುವವರು ಅಥವಾ
ಪುರುಷಾರ್ಥ ಮಾಡಿಸುವವರು ಒಬ್ಬರೇ ತಂದೆಯಾಗಿದ್ದಾರೆ. ಅವರೇ ಕುಳಿತು ಮಕ್ಕಳ ಅದೃಷ್ಟವನ್ನು
ಬೆಳಗಿಸುತ್ತಾರೆ. ಹೇಗೆ ಮಕ್ಕಳು ಜನ್ಮ ಪಡೆಯುತ್ತಿದ್ದಂತೆಯೇ ಅದೃಷ್ಟವು ಜಾಗೃತವಾಗುತ್ತದೆ.
ಮಗುವಿನ ಜನ್ಮವಾಗುತ್ತಿದ್ದಂತೆಯೇ ಅವರಿಗೆ ನಮ್ಮ ವಾರಸುಧಾರನು ಜನ್ಮ ಪಡೆದನೆಂದು ಅರ್ಥವಾಗಿ
ಬಿಡುತ್ತದೆ. ಹಾಗೆಯೇ ಇದು ಬೇಹದ್ದಿನ ಮಾತಾಗಿದೆ. ಮಕ್ಕಳಿಗೆ ತಿಳಿದಿದೆ - ಕಲ್ಪ-ಕಲ್ಪವೂ ನಮ್ಮ
ಅದೃಷ್ಟವು ಬೆಳಗುತ್ತದೆ ಮತ್ತೆ ಮಲಗಿ ಬಿಡುತ್ತದೆ. ಪಾವನರಾದಾಗ ಅದೃಷ್ಟವು ಬೆಳಗುತ್ತದೆ. ಪಾವನ
ಗೃಹಸ್ಥಾಶ್ರಮವೆಂದು ಹೇಳಲಾಗುತ್ತದೆ, ಆಶ್ರಮ ಶಬ್ಧವು ಪವಿತ್ರವಾಗಿರುತ್ತದೆ. ಪವಿತ್ರ
ಗೃಹಸ್ಥಾಶ್ರಮ ಅದಕ್ಕೆ ವಿರುದ್ಧವಾಗಿದೆ - ಅಪವಿತ್ರ ಪತಿತ ಗೃಹಸ್ಥ ಧರ್ಮ. ಅದಕ್ಕೆ ಆಶ್ರಮವೆಂದು
ಹೇಳುವುದಿಲ್ಲ. ಎಲ್ಲರದೂ ಗೃಹಸ್ಥ ಧರ್ಮವಾಗಿದೆ. ಪ್ರಾಣಿಗಳಲ್ಲಿಯೂ ಇದೆ ಏಕೆಂದರೆ ಎಲ್ಲವೂ
ಮಕ್ಕಳಿಗೆ ಜನ್ಮ ಕೊಡುತ್ತದೆ. ಪ್ರಾಣಿಗಳೂ ಸಹ ಗೃಹಸ್ಥ ಧರ್ಮದಲ್ಲಿವೆ ಎಂದು ಹೇಳಲಾಗುತ್ತದೆ. ಈಗ
ಮಕ್ಕಳು ತಿಳಿದುಕೊಂಡಿದ್ದೀರಿ - ನಾವು ಸ್ವರ್ಗದಲ್ಲಿ ಪವಿತ್ರ ಗೃಹಸ್ಥ ಆಶ್ರಮದಲ್ಲಿದ್ದೆವು,
ದೇವಿ-ದೇವತೆಗಳಾಗಿದ್ದೆವು. ಸರ್ವಗುಣ ಸಂಪನ್ನರು, 16 ಕಲಾ ಸಂಪೂರ್ಣರು.... ಎಂದು ಅವರ ಮಹಿಮೆಯನ್ನೂ
ಹಾಡುತ್ತಾರೆ. ನೀವೂ ಸಹ ಹಾಡುತ್ತಿದ್ದಿರಿ. ಈಗ ನಿಮಗೆ ತಿಳಿದಿದೆ - ನಾವು ಪುನಃ ಮನುಷ್ಯರಿಂದ
ದೇವತೆಗಳಾಗುತ್ತಿದ್ದೇವೆ. ಮನುಷ್ಯರಿಂದ ದೇವತೆಗಳನ್ನಾಗಿ ಮಾಡಿದರು..... ಎಂದು ಗಾಯನವಿದೆ.
ಬ್ರಹ್ಮಾ-ವಿಷ್ಣು-ಶಂಕರನಿಗೂ ದೇವತೆಯೆಂದು ಹೇಳುತ್ತಾರೆ. ಬ್ರಹ್ಮ ದೇವತಾಯ ನಮಃ ಎಂದು ಹೇಳುತ್ತಾರೆ
ಮತ್ತೆ ಶಿವ ಪರಮಾತ್ಮಾಯ ನಮಃ ಎಂದು ಹೇಳುತ್ತಾರೆ. ಅದರ ಅರ್ಥವನ್ನೂ ನೀವು ತಿಳಿದುಕೊಂಡಿದ್ದೀರಿ,
ಅವರಂತೂ ಕೇವಲ ಅಂಧಶ್ರದ್ಧೆಯಿಂದ ಹೇಳಿ ಬಿಡುತ್ತಾರೆ. ಶಂಕರ ದೇವತಾಯ ನಮಃ ಎಂದು ಹೇಳುತ್ತಾರೆ,
ಶಿವನಿಗೆ ಶಿವ ಪರಮಾತ್ಮಾಯ ನಮಃ ಎಂದು ಹೇಳುತ್ತಾರೆ ಅಂದಮೇಲೆ ಶಿವ-ಶಂಕರನಲ್ಲಿ
ವ್ಯತ್ಯಾಸವಾಯಿತಲ್ಲವೆ. ಶಂಕರನೂ ದೇವತೆಯಾದರು, ಶಿವನು ಪರಮಾತ್ಮನಾದರು ಅಂದಮೇಲೆ ಶಿವ ಮತ್ತು
ಶಂಕರನನ್ನು ಒಂದೇ ಎಂದು ಹೇಳಲು ಸಾಧ್ಯವಿಲ್ಲ. ನಿಮಗೆ ತಿಳಿದಿದೆ - ನಾವು ಅವಶ್ಯವಾಗಿ ಕಲ್ಲು
ಬುದ್ಧಿಯವರಾಗಿದ್ದೆವು, ಈಗ ಪಾರಸ ಬುದ್ಧಿಯವರಾಗುತ್ತಿದ್ದೇವೆ. ದೇವತೆಗಳಿಗಂತೂ ಕಲ್ಲು
ಬುದ್ಧಿಯವರೆಂದು ಹೇಳುವುದಿಲ್ಲ ಮತ್ತೆ ಡ್ರಾಮಾನುಸಾರ ರಾವಣ ರಾಜ್ಯದಲ್ಲಿ ಏಣಿಯನ್ನು
ಕೆಳಗಿಳಿಯಬೇಕಾಗಿದೆ. ಪಾರಸ ಬುದ್ಧಿಯವರಿಂದ ಕಲ್ಲು ಬುದ್ಧಿಯವರಾಗಬೇಕಾಗಿದೆ. ಎಲ್ಲರಿಗಿಂತ
ಬುದ್ಧಿವಂತರಂತೂ ಒಬ್ಬರೇ ತಂದೆಯಾಗಿದ್ದಾರೆ. ಈಗ ನಿಮ್ಮ ಬುದ್ಧಿಯಲ್ಲಿ ಆ ತಾಕತ್ತು ಉಳಿದಿಲ್ಲ.
ತಂದೆಯು ನಿಮ್ಮನ್ನು ಪಾರಸ ಬುದ್ಧಿಯವರನ್ನಾಗಿ ಮಾಡುತ್ತಾರೆ. ನೀವು ಪಾರಸ
ಬುದ್ಧಿಯವರಾಗುವುದಕ್ಕಾಗಿಯೇ ಬರುತ್ತೀರಿ. ಪಾರಸನಾಥನ ಮಂದಿರವೂ ಇದೆ, ಅಲ್ಲಿ ಮೇಳವಾಗುತ್ತದೆ ಆದರೆ
ಪಾರಸನಾಥನು ಯಾರು? ಎಂಬುದು ಅವರಿಗೆ ತಿಳಿದಿಲ್ಲ. ವಾಸ್ತವದಲ್ಲಿ ಪಾರಸವನ್ನಾಗಿ ಮಾಡುವವರು ತಂದೆಯೇ
ಆಗಿದ್ದಾರೆ. ಅವರು ಬುದ್ಧಿವಂತರಿಗೂ ಬುದ್ಧಿವಂತನಾಗಿದ್ದಾರೆ. ಈ ಜ್ಞಾನವು ನೀವು ಮಕ್ಕಳಿಗಾಗಿ
ಔಷಧಿಯಾಗಿದೆ, ಇದರಿಂದ ಬುದ್ಧಿಯು ಎಷ್ಟೊಂದು ಪರಿವರ್ತನೆಯಾಗುತ್ತದೆ. ಈ ಪ್ರಪಂಚವು ಮುಳ್ಳುಗಳ
ಅರಣ್ಯವಾಗಿದೆ. ಒಬ್ಬರು ಇನ್ನೊಬ್ಬರಿಗೆ ಎಷ್ಟೊಂದು ದುಃಖ ಕೊಡುತ್ತಾರೆ. ಈಗ ಇರುವುದೇ ತಮೋಪ್ರಧಾನ,
ರೌರವ ನರಕ. ಗರುಡ ಪುರಾಣದಲ್ಲಂತೂ ಬಹಳ ರೋಚಕ ಮಾತುಗಳನ್ನು ಬರೆದಿದ್ದಾರೆ.
ಈಗ ನೀವು ಮಕ್ಕಳ ಬುದ್ಧಿಗೆ ಔಷಧಿ ಸಿಗುತ್ತಿದೆ. ಬೇಹದ್ದಿನ ತಂದೆಯು ಔಷಧಿಯನ್ನು ಕೊಡುತ್ತಿದ್ದಾರೆ.
ಇದು ವಿದ್ಯೆಯಾಗಿದೆ, ಇದಕ್ಕೆ ಜ್ಞಾನಾಮೃತವೆಂದೂ ಹೇಳಿ ಬಿಡುತ್ತಾರೆ. ಯಾವುದೇ ಜಲ ಇತ್ಯಾದಿಗಳಿಲ್ಲ.
ಇತ್ತೀಚೆಗೆ ಎಲ್ಲಾ ಪದಾರ್ಥಗಳಿಗೆ ಅಮೃತವೆಂದು ಹೇಳಿ ಬಿಡುತ್ತಾರೆ. ಗಂಗಾ ಜಲಕ್ಕೂ ಅಮೃತವೆಂದು ಹೇಳಿ
ಬಿಡುತ್ತಾರೆ. ದೇವತೆಗಳ ಪಾದಗಳನ್ನು ತೊಳೆದು ನೀರನ್ನಿಡುತ್ತಾರೆ, ಅದಕ್ಕೆ ಅಮೃತವೆಂದು ಹೇಳುತ್ತಾರೆ.
ಇದೂ ಸಹ ಬುದ್ಧಿಯಿಂದ ತಿಳಿದುಕೊಳ್ಳುವ ಮಾತಲ್ಲವೆ. ಈ ಅಂಚಲಿಯು ಅಮೃತವೇ ಅಥವಾ ಪತಿತ-ಪಾವನ
ಗಂಗಾಜಲವು ಅಮೃತವೇ? ಯಾರು ಅಂಚಲಿಯನ್ನು ಕೊಡುವರೋ ಅವರು ಇದು ಪತಿತರನ್ನು ಪಾವನ ಮಾಡುವಂತದ್ದಾಗಿದೆ
ಎಂದು ಹೇಳುವುದಿಲ್ಲ. ಗಂಗಾಜಲಕ್ಕೆ ಪತಿತ-ಪಾವನ ಎಂದು ಹೇಳುತ್ತಾರೆ. ಮನುಷ್ಯರು ಸಾಯುವಾಗ ಗಂಗಾಜಲವು
ಬಾಯಲ್ಲಿರಲಿ ಎಂದು ಹೇಳುತ್ತಾರೆ. ಅರ್ಜುನನು ಬಾಣ ಹೊಡೆದನು, ಮತ್ತೆ ಅಮೃತ ಜಲವನ್ನು ಕುಡಿಸಿದನೆಂದು
ಹೇಳುತ್ತಾರೆ. ನೀವು ಮಕ್ಕಳು ಯಾವುದೇ ಬಾಣ ಇತ್ಯಾದಿಯನ್ನು ಹೊಡೆಯುವುದಿಲ್ಲ. ಒಂದು ಹಳ್ಳಿಯಿದೆ,
ಅಲ್ಲಿ ಬಾಣಗಳಿಂದಲೇ ಹೊಡೆದಾಡುತ್ತಾರೆ. ಅಲ್ಲಿನ ರಾಜನಿಗೆ ಈಶ್ವರನ ಅವತಾರವೆಂದು ಹೇಳುತ್ತಾರೆ ಆದರೆ
ಯಾರೂ ಈಶ್ವರನ ಅವತಾರನಾಗಲು ಸಾಧ್ಯವಿಲ್ಲ. ವಾಸ್ತವದಲ್ಲಿ ಸತ್ಯ-ಸತ್ಯವಾದ ಸದ್ಗುರುವು ಒಬ್ಬರೇ
ಆಗಿದ್ದಾರೆ, ಅವರು ಸರ್ವರ ಸದ್ಗತಿದಾತನಾಗಿದ್ದಾರೆ. ಎಲ್ಲಾ ಆತ್ಮರನ್ನು ಜೊತೆ ಕರೆದುಕೊಂಡು
ಹೋಗುತ್ತಾರೆ. ತಂದೆಯ ವಿನಃ ಮತ್ತ್ಯಾರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಬ್ರಹ್ಮ್ದಲ್ಲಿ
ಲೀನವಾಗುವ ಮಾತೂ ಇಲ್ಲ. ಈ ನಾಟಕವು ಮಾಡಲ್ಪಟ್ಟಿದೆ. ಸೃಷ್ಟಿಚಕ್ರವು ಅನಾದಿಯಾಗಿ ಸುತ್ತುತ್ತಲೇ
ಇರುತ್ತದೆ. ವಿಶ್ವದ ಇತಿಹಾಸ-ಭೂಗೋಳವು ಹೇಗೆ ಪುನರಾವರ್ತನೆಯಾಗುತ್ತದೆ ಎಂಬುದನ್ನು ನೀವೀಗ
ತಿಳಿದುಕೊಂಡಿದ್ದೀರಿ, ಮತ್ತ್ಯಾರೂ ತಿಳಿದುಕೊಂಡಿಲ್ಲ. ಮನುಷ್ಯರು ಅರ್ಥಾತ್ ಆತ್ಮರು ತನ್ನ ರಚಯಿತ
ತಂದೆಯನ್ನೇ ಅರಿತುಕೊಂಡಿಲ್ಲ, ಅವರನ್ನು ಓ ಗಾಡ್ಫಾದರ್ ಎಂದು ನೆನಪು ಮಾಡುತ್ತಾರೆ. ಹದ್ದಿನ ತಂದೆಗೆ
ಎಂದೂ ಗಾಡ್ಫಾದರ್ ಎಂದು ಹೇಳುವುದಿಲ್ಲ. ಗಾಡ್ಫಾದರ್ ಎಂಬ ಶಬ್ಧವನ್ನು ಬಹಳ ಗೌರವದಿಂದ ಹೇಳುತ್ತಾರೆ,
ಅವರಿಗೇ ಪತಿತ-ಪಾವನ, ದುಃಖಹರ್ತ-ಸುಖಕರ್ತನೆಂದು ಹಾಡುತ್ತಾರೆ. ಒಂದು ಕಡೆ ಅವರು
ದುಃಖಹರ್ತ-ಸುಖಕರ್ತನೆಂದು ಹೇಳುತ್ತಾರೆ ಮತ್ತು ಯಾವಾಗ ದುಃಖವಾಗುವುದೋ ಅಥವಾ ಮಗು ಮೊದಲಾದವರು
ಶರೀರ ಬಿಡುತ್ತಾರೆಂದರೆ ಈಶ್ವರನೇ ದುಃಖ-ಸುಖವನ್ನು ಕೊಡುತ್ತಾನೆ, ಈಶ್ವರನು ನಮ್ಮ ಮಗುವನ್ನು
ತೆಗೆದುಕೊಂಡು ಬಿಟ್ಟರು ಎಂದು, ಇದು ಏನು ಮಾಡಿದಂತಾಯಿತು? ಒಂದು ಕಡೆ ಮಹಿಮೆ ಮಾಡುತ್ತಾರೆ, ಮತ್ತೆ
ಸ್ವಲ್ಪ ಏನಾದರೂ ಆಯಿತೆಂದರೆ ಈಶ್ವರನಿಗೆ ನಿಂದನೆ ಮಾಡಿದಂತಾಯಿತು. ಈಶ್ವರನೇ ಮಕ್ಕಳನ್ನು ಕೊಟ್ಟರು
ಎಂದು ಹೇಳುತ್ತೀರಿ, ಒಂದುವೇಳೆ ಅವರನ್ನು ಮರಳಿ ತೆಗೆದುಕೊಂಡರೆ ಮತ್ತೇಕೆ ಅಳುತ್ತೀರಿ? ಈಶ್ವರನ ಬಳಿ
ಹೋದರಲ್ಲವೆ. ಸತ್ಯಯುಗದಲ್ಲಿ ಎಂದೂ ಯಾರೂ ಅಳುವುದಿಲ್ಲ. ತಂದೆಯು ತಿಳಿಸುತ್ತಾರೆ, ಅಳುವ ಮಾತೇ
ಇಲ್ಲ. ಆತ್ಮವು ತನ್ನ ಲೆಕ್ಕಾಚಾರದನುಸಾರ ಹೋಗಿ ಇನ್ನೊಂದು ಪಾತ್ರವನ್ನಭಿನಯಿಸಬೇಕಾಗಿದೆ.
ಜ್ಞಾನವಿಲ್ಲದಿರುವ ಕಾರಣ ಮನುಷ್ಯರು ಎಷ್ಟೊಂದು ಅಳುತ್ತಾರೆ, ಹೇಗೆ ಹುಚ್ಛರಾಗಿ ಬಿಡುತ್ತಾರೆ.
ಇಲ್ಲಂತೂ ತಂದೆಯು ತಿಳಿಸುತ್ತಾರೆ – ಅಮ್ಮ ಸತ್ತರೂ ಹಲ್ವ ತಿನ್ನಿ..... ಅಂದರೆ
ನಷ್ಟಮೋಹಿಯಾಗಿರಬೇಕು. ನಮ್ಮವರು ಒಬ್ಬರೇ ಬೇಹದ್ದಿನ ತಂದೆಯಾಗಿದ್ದಾರೆ, ಅನ್ಯ ಯಾರೂ ಇಲ್ಲ. ಮಕ್ಕಳ
ಸ್ಥಿತಿಯು ಈ ರೀತಿ ಇರಬೇಕು – ಮೋಹಜೀತ ರಾಜನ ಕಥೆಯನ್ನೂ ಕೇಳಿದ್ದೀರಲ್ಲವೆ. ಇವೆಲ್ಲವೂ ದಂತ
ಕಥೆಗಳಾಗಿವೆ. ಸತ್ಯಯುಗದಲ್ಲಿ ಎಂದೂ ದುಃಖದ ಮಾತಿರುವುದಿಲ್ಲ, ಎಂದೂ ಅಕಾಲ ಮೃತ್ಯುವೂ ಆಗುವುದಿಲ್ಲ.
ಮಕ್ಕಳಿಗೆ ತಿಳಿದಿದೆ - ನಾವು ಕಾಲದ ಮೇಲೆ ಜಯ ಗಳಿಸುತ್ತೇವೆ, ತಂದೆಗೆ ಮಹಾಕಾಲನೆಂದು ಹೇಳುತ್ತಾರೆ.
ಕಾಲರ ಕಾಲನು ನಿಮಗೆ ಕಾಲದ ಮೇಲೆ ವಿಜಯವನ್ನು ಪ್ರಾಪ್ತಿ ಮಾಡಿಸುತ್ತಾರೆ, ಕಾಲವೆಂದೂ
ಕಬಳಿಸುವುದಿಲ್ಲ. ಕಾಲವು ಆತ್ಮನನ್ನಂತೂ ಕಬಳಿಸಲು ಸಾಧ್ಯವಿಲ್ಲ. ಆತ್ಮವು ಒಂದು ಶರೀರವನ್ನು ಬಿಟ್ಟು
ಇನ್ನೊಂದನ್ನು ತೆಗೆದುಕೊಳ್ಳುತ್ತದೆ. ಅದಕ್ಕೆ ಕಾಲವು ತಿಂದು ಬಿಟ್ಟಿತೆಂದು ಹೇಳುತ್ತಾರೆ. ಬಾಕಿ
ಕಾಲವೆಂದರೆ ಯಾವುದೇ ಒಂದು ವಸ್ತುವಲ್ಲ. ಮನುಷ್ಯರು ಮಹಿಮೆ ಹಾಡುತ್ತಿರುತ್ತಾರೆ, ಏನನ್ನೂ
ತಿಳಿದುಕೊಂಡಿಲ್ಲ. ಅಚ್ಯುತಂ, ಕೇಶವಂ....... ಎಂದು ಹಾಡುತ್ತಾರೆ, ಅರ್ಥವೇನೂ ಗೊತ್ತಿಲ್ಲ.
ಮನುಷ್ಯರು ತಿಳುವಳಿಕೆಯಿಂದ ಸಂಪೂರ್ಣ ಹೊರಗಿದ್ದಾರೆ. ತಂದೆಯು ತಿಳಿಸುತ್ತಾರೆ - ಈ ಪಂಚ ವಿಕಾರಗಳು
ನಮ್ಮ ಬುದ್ಧಿಯನ್ನು ಎಷ್ಟು ಕೆಡಿಸಿ ಬಿಡುತ್ತದೆ. ಎಷ್ಟೊಂದು ಮನುಷ್ಯರು ಬದರೀನಾಥ ಮೊದಲಾದ ಕಡೆ
ಹೋಗುತ್ತಾರೆ. ಇಂದು 2 ಲಕ್ಷ ಮಂದಿ ಹೋದರು, 4 ಲಕ್ಷ ಮಂದಿ ಹೋದರು...... ದೊಡ್ದ-ದೊಡ್ಡ
ಅಧಿಕಾರಿಗಳೂ ಸಹ ತೀರ್ಥ ಯಾತ್ರೆ ಮಾಡಲು ಹೋಗುತ್ತಾರೆ. ನೀವಂತೂ ಎಲ್ಲಿಗೂ ಹೋಗುವುದಿಲ್ಲ.
ಆದ್ದರಿಂದ ಈ ಬಿ.ಕೆ.ಗಳು ನಾಸ್ತಿಕರಾಗಿದ್ದಾರೆ ಏಕೆಂದರೆ ಭಕ್ತಿ ಮಾಡುವುದಿಲ್ಲ ಎಂದು ಹೇಳುತ್ತಾರೆ.
ಆದರೆ ನೀವು ಹೇಳುತ್ತೀರಿ - ಯಾರು ಭಗವಂತನನ್ನು ಅರಿತುಕೊಂಡಿಲ್ಲವೋ ಅವರು ನಾಸ್ತಿಕರಾಗಿದ್ದಾರೆ.
ತಂದೆಯನ್ನು ಯಾರೂ ಅರಿತುಕೊಂಡಿಲ್ಲ, ಇದಕ್ಕೆ ಅನಾಥರ ಪ್ರಪಂಚವೆಂದು ಹೇಳಲಾಗುತ್ತದೆ. ಪರಸ್ಪರ
ಹೊಡೆದಾಡುತ್ತಾ-ಜಗಳವಾಡುತ್ತಿರುತ್ತಾರೆ. ಇಡೀ ಪ್ರಪಂಚವೇ ತಂದೆಯ ಮನೆಯಲ್ಲವೆ. ತಂದೆಯು ಇಡೀ
ಪ್ರಪಂಚದ ಮಕ್ಕಳನ್ನು ಪತಿತರಿಂದ ಪಾವನ ಮಾಡಲು ಬರುತ್ತಾರೆ. ಅವಶ್ಯವಾಗಿ ಅರ್ಧಕಲ್ಪ ಪಾವನ
ಪ್ರಪಂಚವಿತ್ತಲ್ಲವೆ. ರಾಮ ರಾಜ, ರಾಮ ಪ್ರಜೆ, ರಾಮ ಸಾಹುಕಾರ..... ಎಂದು ಹಾಡುತ್ತಾರೆ. ಒಂದನೆಯದು
ಅಲ್ಲಿ ಅಧರ್ಮದ ಮಾತಿರಲು ಹೇಗೆ ಸಾಧ್ಯ! ಅಲ್ಲಿ ಹಸು-ಹುಲಿ ಒಟ್ಟಿಗೆ ನೀರು ಕುಡಿಯುತ್ತದೆ ಎಂದು
ಹೇಳುತ್ತಾರೆ ಅಂದಾಗ ಅಲ್ಲಿ ರಾವಣ ಮೊದಲಾದವರು ಎಲ್ಲಿಂದ ಬರುವರು? ತಿಳಿದುಕೊಂಡಿಲ್ಲ. ಹೊರಗಿನವರಂತೂ
ಈ ಮಾತುಗಳನ್ನು ಕೇಳಿ ನಗುತ್ತಾರೆ.
ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಈಗ ಜ್ಞಾನ ಸಾಗರ ತಂದೆಯು ಬಂದು ಜ್ಞಾನವನ್ನು ಕೊಡುತ್ತಾರೆ.
ಇದು ಪತಿತ ಪ್ರಪಂಚವಲ್ಲವೆ. ಈಗ ಪ್ರೇರಣೆಯಿಂದ ಪತಿತರನ್ನು ಪಾವನ ಮಾಡುವರೇ? ಹೇ ಪತಿತ-ಪಾವನ ಬನ್ನಿ,
ಬಂದು ನಮ್ಮನ್ನು ಪಾವನ ಮಾಡಿ ಎಂದು ಕರೆಯುತ್ತಾರೆ ಅಂದಮೇಲೆ ಅವಶ್ಯವಾಗಿ ಭಾರತದಲ್ಲಿಯೇ ಬಂದಿದ್ದರು,
ಈಗಲೂ ಸಹ ಹೇಳುತ್ತಾರೆ – ಜ್ಞಾನ ಸಾಗರನಾದ ನಾನು ಬಂದಿದ್ದೇನೆ. ನೀವು ಮಕ್ಕಳಿಗೂ ತಿಳಿದಿದೆ, ಶಿವ
ತಂದೆಯಲ್ಲಿಯೇ ಸಂಪೂರ್ಣ ಜ್ಞಾನವಿದೆ, ಆ ತಂದೆಯೇ ಕುಳಿತು ಮಕ್ಕಳಿಗೆ ಇವೆಲ್ಲಾ ಮಾತುಗಳನ್ನು
ತಿಳಿಸುತ್ತಾರೆ. ಶಾಸ್ತ್ರಗಳಲ್ಲಿ ಎಲ್ಲವೂ ದಂತ ಕಥೆಗಳಿವೆ. ವ್ಯಾಸ ಭಗವಂತನು ಶಾಸ್ತ್ರಗಳನ್ನು
ರಚಿಸಿದನೆಂದು ಹೆಸರನ್ನಿಟ್ಟು ಬಿಟ್ಟಿದ್ದಾರೆ. ಅವರಂತೂ ಭಕ್ತಿಮಾರ್ಗದ ವ್ಯಾಸನಾಗಿದ್ದರು, ಇವರು
ವ್ಯಾಸ ದೇವನಾಗಿದ್ದಾರೆ. ಅವರ ಮಕ್ಕಳು ನೀವೂ ಸುಖ ದೇವರಾಗಿದ್ದೀರಿ. ನೀವೀಗ ಸುಖದ
ದೇವತೆಗಳಾಗುತ್ತೀರಿ. ವ್ಯಾಸ ಅರ್ಥಾತ್ ಶಿವಾಚಾರ್ಯರಿಂದ ಸುಖದ ಆಸ್ತಿಯನ್ನು ಪಡೆಯುತ್ತಿದ್ದೀರಿ,
ನೀವು ವ್ಯಾಸನ ಮಕ್ಕಳಾಗಿದ್ದೀರಿ ಆದರೆ ಮನುಷ್ಯರು ತಬ್ಬಿಬ್ಬಾಗದಿರಲಿ ಎಂದು ನಿಮಗೆ ಶಿವನ
ಮಕ್ಕಳೆಂದು ಹೇಳಲಾಗುತ್ತದೆ. ಅವರ ಮೂಲ ಹೆಸರು ಶಿವ ಎಂದಾಗಿದೆ ಅಂದಾಗ ತಂದೆಯು ತಿಳಿಸುತ್ತಾರೆ -
ಮಕ್ಕಳೇ, ಯಾವುದೇ ದೇಹಧಾರಿಯನ್ನು ನೋಡಬೇಡಿ ಯಾವಾಗ ಶಿವ ತಂದೆಯು ಸಮ್ಮುಖದಲ್ಲಿ ಕುಳಿತಿದ್ದಾರೆ.
ಆತ್ಮವನ್ನು ತಿಳಿದುಕೊಳ್ಳಲಾಗುತ್ತದೆ, ಅದೇರೀತಿ ಪರಮಾತ್ಮನನ್ನೂ ಸಹ ತಿಳಿದುಕೊಳ್ಳಲಾಗುತ್ತದೆ.
ಅವರು ಪರಮಪಿತ ಪರಮಾತ್ಮ ಶಿವನಾಗಿದ್ದಾರೆ, ಅವರೇ ಬಂದು ಪತಿತರಿಂದ ಪಾವನರಾಗುವ ಮಾರ್ಗವನ್ನು
ತಿಳಿಸುತ್ತಾರೆ. ಹೇಳುತ್ತಾರೆ - ನಾನು ನೀವಾತ್ಮರ ತಂದೆಯಾಗಿದ್ದೇನೆ, ಆತ್ಮವನ್ನು ಕಣ್ಣಿನಿಂದ
ನೋಡಲು ಸಾಧ್ಯವಾಗುವುದಿಲ್ಲ, ಅನುಭವ ಮಾಡಲಾಗುತ್ತದೆ. ತಂದೆಯು ಕೇಳುತ್ತಾರೆ - ನೀವೀಗ ತಮ್ಮ
ಆತ್ಮಾನುಭೂತಿ ಮಾಡಿಕೊಂಡಿರಾ? ಇಷ್ಟು ಚಿಕ್ಕದಾದ ಆತ್ಮನಲ್ಲಿ ಅವಿನಾಶಿ ಪಾತ್ರವು ಅಡಕವಾಗಿದೆ.
ಇದೊಂದು ರೆಕಾರ್ಡ್ ಆಗಿದೆ.
ನಿಮಗೆ ತಿಳಿದಿದೆ - ನಾನಾತ್ಮನೇ ಶರೀರ ಧಾರಣೆ ಮಾಡುತ್ತೇನೆ. ಮೊದಲು ನೀವು ದೇಹಾಭಿಮಾನಿಯಾಗಿದ್ದಿರಿ,
ಈಗ ದೇಹೀ-ಅಭಿಮಾನಿಯಾಗಿದ್ದೀರಿ. ನಿಮಗೆ ಗೊತ್ತಿದೆ, ನಾನಾತ್ಮನು 84 ಜನ್ಮಗಳನ್ನು
ತೆಗೆದುಕೊಳ್ಳುತ್ತೇನೆ. ಅದು ಎಂದೂ ಮುಕ್ತಾಯವಾಗುವುದಿಲ್ಲ. ಕೆಲವರು ಕೇಳುತ್ತಾರೆ - ಈ ನಾಟಕವು
ಯಾವಾಗಿನಿಂದ ಆರಂಭವಾಯಿತೆಂದು. ಆದರೆ ಇದು ಅನಾದಿಯಾಗಿದೆ, ಎಂದೂ ವಿನಾಶವಾಗುವುದಿಲ್ಲ. ಇದಕ್ಕೆ
ಮಾಡಿ-ಮಾಡಲ್ಪಟ್ಟ ಅವಿನಾಶಿ ವಿಶ್ವ ನಾಟಕವೆಂದು ಹೇಳಲಾಗುತ್ತದೆ. ಅಂದಾಗ ತಂದೆಯು ಕುಳಿತು ಮಕ್ಕಳಿಗೆ
ತಿಳಿಸುತ್ತಾರೆ. ಹೇಗೆ ಅವಿದ್ಯಾವಂತ ಮಕ್ಕಳಿಗೆ ವಿದ್ಯೆಯನ್ನು ಓದಿಸಲಾಗುತ್ತದೆ, ಆತ್ಮವೇ
ಶರೀರದಲ್ಲಿರುತ್ತದೆ. ಇದು ಕಲ್ಲು ಬುದ್ಧಿಯವರಿಗಾಗಿ ಭೋಜನವಾಗಿದೆ. ಬುದ್ಧಿಗೆ ತಿಳುವಳಿಕೆ
ಸಿಗುತ್ತದೆ. ನೀವು ಮಕ್ಕಳಿಗಾಗಿ ತಂದೆಯು ಚಿತ್ರಗಳನ್ನು ಮಾಡಿಸಿದ್ದಾರೆ. ಬಹಳ ಸಹಜವಾಗಿದೆ. ಇವರು
ತ್ರಿಮೂರ್ತಿ ಬ್ರಹ್ಮಾ, ವಿಷ್ಣು, ಶಂಕರರಾಗಿದ್ದಾರೆ. ಬ್ರಹ್ಮನಿಗೂ ತ್ರಿಮೂರ್ತಿಯೆಂದು ಏಕೆ
ಹೇಳುತ್ತಾರೆ? ದೇವ-ದೇವ ಮಹಾದೇವ. ಒಬ್ಬರು ಇನ್ನೊಬ್ಬರ ಮೇಲೆ ಇಡುತ್ತಾರೆ, ಅರ್ಥವೇನನ್ನೂ
ತಿಳಿದುಕೊಂಡಿಲ್ಲ. ಬ್ರಹ್ಮನು ದೇವತೆಯಾಗಲು ಹೇಗೆ ಸಾಧ್ಯ! ಪ್ರಜಾಪಿತ ಬ್ರಹ್ಮನಂತೂ ಇಲ್ಲಿಯೇ
ಇರಬೇಕು, ಈ ಮಾತುಗಳು ಯಾವುದೇ ಶಾಸ್ತ್ರಗಳಲಿಲ್ಲ. ತಂದೆಯು ತಿಳಿಸುತ್ತಾರೆ - ನಾನು ಈ (ಬ್ರಹ್ಮಾ)
ಶರೀರದಲ್ಲಿ ಪ್ರವೇಶ ಮಾಡಿ ಇವರ ಮೂಲಕ ನಾನು ತಿಳಿಸುತ್ತೇನೆ. ಇವರನ್ನು ತನ್ನವರನ್ನಾಗಿ
ಮಾಡಿಕೊಳ್ಳುತ್ತೇನೆ. ಇವರ ಬಹಳ ಜನ್ಮಗಳ ಅಂತಿಮದಲ್ಲಿ ಬರುತ್ತೇನೆ. ಇವರೂ ಸಹ ಪಂಚ ವಿಕಾರಗಳ
ಸನ್ಯಾಸ ಮಾಡುತ್ತಾರೆ. ಸನ್ಯಾಸ ಮಾಡುವವರಿಗೆ ಯೋಗಿ, ಋಷಿಗಳೆಂದು ಹೇಳಲಾಗುತ್ತದೆ. ನೀವೀಗ ರಾಜ
ಋಷಿಗಳಾಗಿದ್ದೀರಿ. ಪಂಚ ವಿಕಾರಗಳ ಸನ್ಯಾಸವನ್ನು ಮಾಡಿದ್ದೀರಿ ಆದ್ದರಿಂದ ಹೆಸರು ಬದಲಾಗುತ್ತದೆ.
ನೀವಂತೂ ರಾಜಯೋಗಿಗಳಾಗಿದ್ದೀರಿ, ಪ್ರತಿಜ್ಞೆ ಮಾಡುತ್ತೀರಿ. ಆ ಸನ್ಯಾಸಿಗಳಾದರೂ ಮನೆ-ಮಠವನ್ನು
ಬಿಟ್ಟು ಹೊರಟು ಹೋಗುತ್ತಾರೆ. ಇಲ್ಲಂತೂ ಸ್ತ್ರೀ-ಪುರುಷರು ಒಟ್ಟಿಗೆ ಇರುತ್ತೀರಿ, ನಾವೆಂದೂ
ವಿಕಾರದಲ್ಲಿ ಹೋಗುವುದಿಲ್ಲವೆಂದು ಪ್ರತಿಜ್ಞೆ ಮಾಡುತ್ತೀರಿ. ಮೂಲ ಮಾತೇ ವಿಕಾರದ್ದಾಗಿದೆ.
ನೀವು ಮಕ್ಕಳಿಗೆ ತಿಳಿದಿದೆ, ಶಿವ ತಂದೆಯು ರಚಯಿತನಾಗಿದ್ದಾರೆ. ಅವರು ಹೊಸ ರಚನೆಯನ್ನು
ರಚಿಸುತ್ತಾರೆ. ಅವರು ಬೀಜರೂಪ, ಸತ್-ಚಿತ್-ಆನಂದ ಸಾಗರ, ಜ್ಞಾನ ಸಾಗರನಾಗಿದ್ದಾರೆ. ಸ್ಥಾಪನೆ,
ವಿನಾಶ, ಪಾಲನೆ ಹೇಗೆ ಮಾಡುತ್ತಾರೆ, ಇದು ತಂದೆಗೇ ಗೊತ್ತಿದೆ ಮನುಷ್ಯರಿಗೆ ಗೊತ್ತಿಲ್ಲ. ನೀವು
ಬಿ.ಕೆ.ಗಳಂತೂ ಪ್ರಪಂಚದ ವಿನಾಶ ಮಾಡುತ್ತೀರಿ ಎಂದು ತಟ್ಟನೆ ಹೇಳಿ ಬಿಡುತ್ತಾರೆ. ಒಳ್ಳೆಯದು.
ನಿಮ್ಮ ಬಾಯಲ್ಲಿ ಗುಲಾಬ್ ಜಾಮೂನ್, ಇವರಂತೂ ವಿನಾಶಕ್ಕಾಗಿ ನಿಮಿತ್ತರಾಗಿದ್ದಾರೆ,
ಶಾಸ್ತ್ರಗಳನ್ನಾಗಲಿ, ಭಕ್ತಿಯನ್ನಾಗಲಿ, ಗುರುಗಳನ್ನಾಗಲಿ ಒಪ್ಪುವುದಿಲ್ಲ. ಕೇವಲ ತಮ್ಮ
ದಾದಾರವರನ್ನು ಒಪ್ಪುತ್ತಾರೆಂದು ಹೇಳುತ್ತಾರೆ. ಆದರೆ ಸ್ವಯಂ ತಂದೆಯು ತಿಳಿಸುತ್ತಾರೆ - ಇವರದೂ
ಪತಿತ ಶರೀರವಾಗಿದೆ, ನಾನು ಇವರಲ್ಲಿ ಪ್ರವೇಶ ಮಾಡಿದ್ದೇನೆ. ಪತಿತ ಪ್ರಪಂಚದಲ್ಲಿ ಯಾರೂ
ಪಾವನರಿರುವುದಿಲ್ಲ. ಮನುಷ್ಯರು ಹೇಳಿಕೆ-ಕೇಳಿಕೆ ಮಾತುಗಳನ್ನು ಕೇಳಿಸಿಕೊಂಡು ಅದನ್ನೇ ಹೇಳಿ
ಬಿಡುತ್ತಾರೆ. ಇಂತಹ ಹೇಳಿಕೆ-ಕೇಳಿಕೆಯ ಮಾತುಗಳಿಂದಲೇ ಭಾರತವು ದುರ್ಗತಿಯನ್ನು ಹೊಂದಿದೆ.
ಆದ್ದರಿಂದ ತಂದೆಯು ಬಂದು ಸತ್ಯವನ್ನು ತಿಳಿಸಿ ಎಲ್ಲರ ಸದ್ಗತಿ ಮಾಡುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ತಂದೆಯಿಂದ
ಸುಖದ ಆಸ್ತಿಯನ್ನು ತೆಗೆದುಕೊಂಡು ಸುಖದ ದೇವತೆಗಳಾಗಬೇಕಾಗಿದೆ. ಎಲ್ಲರಿಗೆ ಸುಖ ಕೊಡಬೇಕಾಗಿದೆ.
ರಾಜ ಋಷಿಗಳಾಗಲು ಸರ್ವ ವಿಕಾರಗಳ ಸನ್ಯಾಸ ಮಾಡಬೇಕಾಗಿದೆ.
2. ವಿದ್ಯೆಯೇ ಸತ್ಯವಾದ ಟಾನಿಕ್ ಆಗಿದೆ, ಸದ್ಗತಿಗಾಗಿ ಹೇಳಿಕೆ-ಕೇಳಿಕೆ ಮಾತುಗಳನ್ನು ಬಿಟ್ಟು
ಶ್ರೀಮತದಂತೆ ನಡೆಯಬೇಕಾಗಿದೆ. ಒಬ್ಬ ತಂದೆಯಿಂದಲೇ ಕೇಳಬೇಕಾಗಿದೆ. ಮೋಹಜೀತರಾಗಬೇಕಾಗಿದೆ.
ವರದಾನ:
ಸದಾ
ಸ್ವಮಾನದಲ್ಲಿ ಸ್ಥಿತರಾಗಿರುತ್ತಾ ನಿರ್ಮಾನ ಸ್ಥಿತಿಯ ಮುಖಾಂತರ ಸರ್ವರಿಗೆ ಸಮ್ಮಾನ ಕೊಡುವಂತಹ
ಮಾನನೀಯ, ಪೂಜ್ಯನೀಯ ಭವ.
ತಂದೆಯ ಮಹಿಮೆ ಏನಾಗಿದೆ
ಅದೇ ನಿಮ್ಮ ಸ್ವಮಾನವಾಗಿದೆ, ಸ್ವಮಾನದಲ್ಲಿ ಸ್ಥಿತರಾಗಿದ್ದಾಗ ನಿರ್ಮಾನರಾಗಿ ಬಿಡುವಿರಿ, ನಂತರ
ಸರ್ವರಿಂದ ಸ್ವತಃವಾಗಿ ಮಾನ್ಯತೆ ಸಿಗುತ್ತಿರುವುದು. ಮಾನ್ಯತೆ ಬೇಡುವುದರಿಂದ ಸಿಗುವುದಿಲ್ಲ ಆದರೆ
ಸಮ್ಮಾನ ಕೊಡುವುದರಿಂದ, ಸ್ವಮಾನದಲ್ಲಿ ಸ್ಥಿತರಾಗುವುದರಿಂದ, ಮಾನದ ತ್ಯಾಗ ಮಾಡುವುದರಿಂದ ಸರ್ವರಿಗೆ
ಮಾನನೀಯ, ಪೂಜ್ಯನೀಯ ಮಾಡುವುದರಿಂದ ಭಾಗ್ಯ ಪ್ರಾಪ್ತಿಯಾಗುವುದು ಏಕೆಂದರೆ ಸಮ್ಮಾನ ಕೊಡುವುದು,
ಕೊಡುವುದಲ್ಲ ತೆಗೆದುಕೊಳ್ಳುವುದು.
ಸ್ಲೋಗನ್:
ತಿಳಿದಿರುವವರ (ಜಾನನ್ಹಾರ್)
ಜೊತೆ ಮಾಡುವವರಾಗಿ(ಕರನ್ಹಾರ್ ಆಗಿ) ಅಸಮರ್ಥ ಆತ್ಮರಿಗೆ ಅನುಭೂತಿಯ ಪ್ರಸಾದವನ್ನು ಹಂಚುತ್ತಾ
ನಡೆಯಿರಿ.