02.03.21 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನಿಮಗೆ
ಸದ್ಗತಿಯ ಎಲ್ಲದಕ್ಕಿಂತ ಭಿನ್ನವಾದ ಮತ ಸಿಕ್ಕಿದೆ - ದೇಹದ ಎಲ್ಲಾ ಧರ್ಮಗಳನ್ನು ತ್ಯಜಿಸಿ,
ಆತ್ಮಾಭಿಮಾನಿಯಾಗಿರಿ ನನ್ನೊಬ್ಬನನ್ನೇ ನೆನಪು ಮಾಡಿ”
ಪ್ರಶ್ನೆ:
ಯಾರು
ಪರಮಾತ್ಮನನ್ನು ನಾಮ-ರೂಪದಿಂದ ಭಿನ್ನವೆಂದು ಹೇಳುವರೋ ಅವರೊಂದಿಗೆ ನೀವು ಯಾವ ಯನ್ನು ಕೇಳುವಿರಿ?
ಉತ್ತರ:
ಅವರೊಂದಿಗೆ ಕೇಳಿರಿ - ಗೀತೆಯಲ್ಲಿ ತೋರಿಸುತ್ತಾರೆ, ಅರ್ಜುನನನಿಗೆ ಅಖಂಡ ಜ್ಯೋತಿ ಸ್ವರೂಪದ
ಸಾಕ್ಷಾತ್ಕಾರವಾಯಿತು. ಅರ್ಜುನನು ನಾನು ಸಹನೆ ಮಾಡಲು ಸಾಧ್ಯವಿಲ್ಲ, ಸಾಕು ಮಾಡಿ ಎಂದನು ಅಂದಮೇಲೆ
ಮತ್ತೆ ನಾಮ-ರೂಪದಿಂದ ಭಿನ್ನವೆಂದು ಹೇಗೆ ಹೇಳುತ್ತೀರಿ! ತಂದೆಯು ತಿಳಿಸುತ್ತಾರೆ - ನಾನು ನಿಮ್ಮ
ತಂದೆಯಾಗಿದ್ದೇನೆ, ತಂದೆಯ ರೂಪವನ್ನು ನೋಡಿ ಮಕ್ಕಳು ಖುಷಿಯಾಗುವರು. ನಾನು ಸಹನೆ ಮಾಡಲು
ಸಾಧ್ಯವಿಲ್ಲವೆಂದು ಅವರು ಹೇಳಲು ಸಾಧ್ಯವೇ!
ಓಂ ಶಾಂತಿ.
ಭಕ್ತರು ಹೇಳುತ್ತಾರೆ - ನಾವು ಬಹಳ ಕಂಗಾಲರಾಗಿದ್ದೇವೆ. ಹೇ ತಂದೆಯೇ ನಮ್ಮೆಲ್ಲರ ಜೋಳಿಗೆಯನ್ನು
ತುಂಬಿಸಿ. ಜನ್ಮ-ಜನ್ಮಗಳಿಂದಲೂ ಭಕ್ತರು ಹಾಡುತ್ತಿರುತ್ತಾರೆ, ಸತ್ಯಯುಗದಲ್ಲಿ ಭಕ್ತಿಯಿರುವುದಿಲ್ಲ.
ಅಲ್ಲಿ ಪಾವನ ದೇವಿ-ದೇವತೆಗಳಿರುತ್ತಾರೆ. ಭಕ್ತರಿಗೆಂದೂ ದೇವತೆಯೆಂದು ಹೇಳಲಾಗುವುದಿಲ್ಲ. ಯಾರು
ಸ್ವರ್ಗವಾಸಿ ದೇವಿ-ದೇವತೆಗಳಾಗುವರೋ ಅವರೇ ನಂತರ ಪುನರ್ಜನ್ಮವನ್ನು
ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ನರಕವಾಸಿಗಳು, ಪೂಜಾರಿಗಳು, ಭಕ್ತರು ಕಂಗಾಲರಾಗುತ್ತಾರೆ.
ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ - ತಂದೆಯನ್ನು ಯಾರೊಬ್ಬರೂ ಅರಿತುಕೊಂಡಿಲ್ಲ. ಸ್ವಯಂ
ತಂದೆಯೇ ಬಂದು ತಮ್ಮ ಪರಿಚಯವನ್ನು ಕೊಡುವರು. ಭಗವಂತನಿಗೇ ತಂದೆಯೆಂದು ಹೇಳಲಾಗುತ್ತದೆ. ಎಲ್ಲಾ
ಭಕ್ತರಿಗೆ ಒಬ್ಬರೇ ಭಗವಂತನಿರುತ್ತಾರೆ, ಉಳಿದೆಲ್ಲರೂ ಭಕ್ತರಾಗಿದ್ದಾರೆ. ಚರ್ಚ್ ಮೊದಲಾದುವುಗಳಿಗೆ
ಹೋಗುತ್ತಾರೆಂದರೆ ಅವಶ್ಯವಾಗಿ ಭಕ್ತರಾದರಲ್ಲವೆ. ಈ ಸಮಯದಲ್ಲಿ ಎಲ್ಲರೂ ಪತಿತ,
ತಮೋಪ್ರಧಾನವಾಗಿದ್ದಾರೆ ಆದ್ದರಿಂದ ಹೇ ಪತಿತರನ್ನು ಪಾವನ ಮಾಡುವ ತಂದೆಯೇ ಬನ್ನಿ. ನಾವು ಭಕ್ತರ
ಜೋಳಿಗೆಯನ್ನು ತುಂಬಿಸಿ ಎಂದು ಕರೆಯುತ್ತಾರೆ. ಭಕ್ತರು ಭಗವಂತನಿಂದ ಹಣವನ್ನು ಬೇಡುತ್ತಾರೆ. ನೀವು
ಮಕ್ಕಳು ಏನು ಬೇಡುತ್ತೀರಿ? ತಂದೆಯೇ ನಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡಿ ಎಂದು ನೀವು
ಹೇಳುತ್ತೀರಿ. ಅಲ್ಲಂತೂ ಅಪಾರ ಧನವಿರುತ್ತದೆ. ವಜ್ರ ವೈಡೂರ್ಯಗಳ ಮಹಲುಗಳಿರುತ್ತವೆ. ನೀವೀಗ
ತಿಳಿದುಕೊಂಡಿದ್ದೀರಿ - ಭಗವಂತನ ಮೂಲಕ ನಾವು ರಾಜ್ಯಭಾಗ್ಯವನ್ನು ಪಡೆಯುತ್ತಿದ್ದೇವೆ, ಇದು
ಸತ್ಯವಾದ ಗೀತೆಯಾಗಿದೆ, ಆ ಗೀತೆಯಲ್ಲ. ಅವರಂತೂ ಪುಸ್ತಕ ಇತ್ಯಾದಿಗಳನ್ನು ಭಕ್ತಿಮಾರ್ಗಕ್ಕಾಗಿ
ಮಾಡಿಸಿದ್ದಾರೆ. ಅವರಿಗೆ ಭಗವಂತನು ಜ್ಞಾನವನ್ನು ಕೊಡಲಿಲ್ಲ. ಭಗವಂತನು ಈ ಸಮಯದಲ್ಲಿಯೇ ನರನಿಂದ
ನಾರಾಯಣರನ್ನಾಗಿ ಮಾಡಲು ರಾಜಯೋಗವನ್ನು ಕಲಿಸುತ್ತಾರೆ. ರಾಜನ ಜೊತೆ ಪ್ರಜೆಗಳೂ ಅವಶ್ಯವಾಗಿ ಇರುವರು.
ಕೇವಲ ಲಕ್ಷ್ಮೀ-ನಾರಾಯಣರೇ ಆಗುವುದಿಲ್ಲ, ಇಡೀ ರಾಜಧಾನಿಯೇ ತಯಾರಾಗುತ್ತದೆ. ಭಗವಂತ ಯಾರೆಂಬುದನ್ನು
ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ಮತ್ತ್ಯಾವ ಮನುಷ್ಯ ಮಾತ್ರರೂ ತಿಳಿದುಕೊಂಡಿಲ್ಲ. ತಂದೆಯು
ತಿಳಿಸುತ್ತಾರೆ - ಓ ಗಾಡ್ ಫಾದರ್ ಎಂದು ನೀವು ಹೇಳುತ್ತೀರಿ ಅಂದಮೇಲೆ ತಿಳಿಸಿ, ನಿಮ್ಮ ತಂದೆಯು
ನಾಮ-ರೂಪ, ದೇಶ, ಕಾಲವು ಏನಾಗಿದೆ? ಭಗವಂತನನ್ನಾಗಲಿ, ಅವರ ರಚನೆಯನ್ನಾಗಲಿ ಅರಿತುಕೊಂಡಿಲ್ಲ,
ತಂದೆಯು ಬಂದು ತಿಳಿಸುತ್ತಾರೆ. ಕಲ್ಪ-ಕಲ್ಪದ ಸಂಗಮದಲ್ಲಿ ಬರುತ್ತೇನೆ. ಇಡೀ ರಚನೆಯ
ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ನಾನು “ರಚಯಿತ'' ನು ಬಂದು ತಿಳಿಸುತ್ತೇನೆ. ಅವರು ನಾಮ-ರೂಪದಿಂದ
ಭಿನ್ನವಾಗಿದ್ದಾರೆ, ಬರಲು ಸಾಧ್ಯವಿಲ್ಲವೆಂದು ಕೆಲವರು ಹೇಳುತ್ತಾರೆ ಆದರೆ ನೀವು
ತಿಳಿದುಕೊಂಡಿದ್ದೀರಿ - ತಂದೆಯು ಬಂದಿದ್ದಾರೆ, ನಿರಾಕಾರನ ಶಿವ ಜಯಂತಿಯ ಗಾಯನವಿದೆ ಮತ್ತು ಕೃಷ್ಣ
ಜಯಂತಿಯ ಗಾಯನವೂ ಇದೆ. ಈಗ ಶಿವ ಜಯಂತಿಯು ಯಾವಾಗ ಆಗುತ್ತದೆ ಎಂಬುದು ತಿಳಿದಿರಬೇಕಲ್ಲವೆ. ಹೇಗೆ
ಕ್ರಿಸ್ತನ ಜನ್ಮವು ಯಾವಾಗ ಆಯಿತು? ಕ್ರಿಶ್ಚಿಯನ್ ಧರ್ಮವು ಯಾವಾಗ ಆಯಿತು ಎಂಬುದು
ಕ್ರಿಶ್ಚಿಯನ್ನರಿಗೆ ತಿಳಿದಿದೆ. ಇದಂತೂ ಭಾರತದ ಮಾತಾಗಿದೆ ಅಂದಾಗ ಭಗವಂತನು ಭಾರತದ ಜೋಳಿಗೆಯನ್ನು
ಯಾವಾಗ ತುಂಬಿಸುತ್ತಾರೆ? ಹೇ ಭಗವಂತನೇ, ಜೋಳಿಗೆಯನ್ನು ತುಂಬಿಸಿ, ಸದ್ಗತಿಯಲ್ಲಿ ಕರೆದುಕೊಂಡು ಹೋಗು
ಏಕೆಂದರೆ ನಾವು ದುರ್ಗತಿಯಲ್ಲಿದ್ದೇವೆ, ತಮೋಪ್ರಧಾನರಾಗಿದ್ದೇವೆ ಎಂದು ಭಕ್ತರು ಕೂಗುತ್ತಾರೆ.
ಆತ್ಮವೇ ಶರೀರದ ಜೊತೆ ಅನುಭವಿಸುತ್ತದೆ. ಆತ್ಮವು ನಿರ್ಲೇಪವೆಂದು ಕೆಲವರು ಮನುಷ್ಯರು, ಸಾಧು-ಸಂತರು
ಹೇಳುತ್ತಾರೆ. ಮತ್ತೆ ಇದನ್ನೂ ಹೇಳುತ್ತಾರೆ - ಒಳ್ಳೆಯ ಅಥವಾ ಕೆಟ್ಟ ಸಂಸ್ಕಾರವು
ಆತ್ಮದಲ್ಲಿರುತ್ತದೆ, ಅದರ ಆಧಾರದ ಮೇಲೆ ಆತ್ಮವು ಜನ್ಮ ಪಡೆಯುತ್ತದೆ. ಮತ್ತೆ ಆತ್ಮವು
ನಿರ್ಲೇಪವೆಂದು ಹೇಳಿ ಬಿಡುತ್ತಾರೆ. ಇದನ್ನು ಅರ್ಥ ಮಾಡಿಸಿಲು ಯಾರೂ ಬುದ್ಧಿವಂತ ಮನುಷ್ಯರಿಲ್ಲ.
ಅವರಲ್ಲಿಯೂ ಅನೇಕ ಮತಗಳಿವೆ. ಯಾರು ಮನೆಯಿಂದ ಮುನಿಸಿಕೊಂಡು ಹೋಗುವರೋ ಅವರು ಶಾಸ್ತ್ರಗಳನ್ನು
ರಚಿಸುತ್ತಾರೆ. ಶ್ರೀಮತ್ಭಗವದ್ಗೀತೆಯು ಒಂದೇ ಆಗಿದೆ. ವ್ಯಾಸನು ಯಾವ ಶ್ಲೋಕ ಇತ್ಯಾದಿಗಳನ್ನು
ರಚಿಸಿದರೋ ಅದೇನೂ ಭಗವಂತನು ತಿಳಿಸಿರುವುದಲ್ಲ. ಭಗವಂತ ನಿರಾಕಾರ ಯಾರು ಜ್ಞಾನ ಸಾಗರನಾಗಿದ್ದಾರೆಯೋ
ಅವರು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ - ಭಗವಂತನು ಒಬ್ಬರೇ ಆಗಿದ್ದಾರೆ, ಇದು ಭಾರತವಾಸಿಗಳಿಗೆ
ತಿಳಿದಿಲ್ಲ. ಈಶ್ವರನ ಗತಿಮತವು ಭಿನ್ನವೆಂದು ಹಾಡುತ್ತಾರೆ ಅಂದಮೇಲೆ ಯಾವ ಗತಿ ಮತವು ಭಿನ್ನವಾಗಿದೆ.
ಈಶ್ವರನ ಗತಿಮತವು ಭಿನ್ನವಾಗಿದೆ ಎಂದು ಯಾರು ಹೇಳಿದರು? ಆತ್ಮವು ಹೇಳುತ್ತದೆ - ಅದರ ಸದ್ಗತಿಗಾಗಿ
ಯಾವ ಮತವಿದೆಯೋ ಅದಕ್ಕೆ ಶ್ರೀಮತವೆಂದು ಹೇಳಲಾಗುತ್ತದೆ. ಕಲ್ಪ-ಕಲ್ಪವೂ ಬಂದು ನಿಮಗೆ ತಿಳಿಸುತ್ತೇನೆ
- ಮನ್ಮನಾಭವ. ದೇಹದ ಎಲ್ಲಾ ಧರ್ಮಗಳನ್ನು ತ್ಯಜಿಸಿ ಆತ್ಮಾಭಿಮಾನಿಯಾಗಿ ನನ್ನೊಬ್ಬನನ್ನೇ ನೆನಪು
ಮಾಡಿರಿ. ನೀವೀಗ ಮನುಷ್ಯರಿಂದ ದೇವತೆಗಳಾಗುತ್ತಿದ್ದೀರಿ. ಈ ರಾಜಯೋಗದ ಗುರಿ-ಧ್ಯೇಯವೇ ಆಗಿದೆ -
ಲಕ್ಷ್ಮೀ-ನಾರಾಯಣರಾಗುವುದು. ವಿದ್ಯೆಯಿಂದ ಯಾರೂ ರಾಜರಾಗುವುದಿಲ್ಲ, ಇಂತಹ ಯಾವುದೇ ಶಾಲೆಯಿಲ್ಲ.
ಗೀತೆಯಲ್ಲಿಯೇ ಇದೆ, ನೀವು ಮಕ್ಕಳಿಗೆ ರಾಜಯೋಗವನ್ನು ಕಲಿಸುತ್ತೇನೆ, ಯಾವಾಗ ಯಾವುದೇ ರಾಜನ
ರಾಜ್ಯವಿರುವುದಿಲ್ಲವೋ ಆಗ ನಾನು ಬರುತ್ತೇನೆ. ನನ್ನನ್ನು ಯಾರೊಬ್ಬರೂ ತಿಳಿದುಕೊಂಡಿಲ್ಲ. ತಂದೆಯು
ತಿಳಿಸುತ್ತಾರೆ - ನೀವು ಮಕ್ಕಳು ಇಷ್ಟು ದೊಡ್ಡ ಲಿಂಗ ರೂಪದಲ್ಲಿ ತೋರಿಸಿದ್ದೀರಿ ಆದರೆ ಇದೇನೂ
ನನ್ನ ರೂಪವಲ್ಲ. ಅಖಂಡ ಜ್ಯೋತಿ ರೂಪ ಪರಮಾತ್ಮನು ತೇಜೋಮಯನಾಗಿದ್ದಾರೆ. ಅರ್ಜುನನು ನೋಡಿ ನಾನು ಸಹನೆ
ಮಾಡಲು ಸಾಧ್ಯವಿಲ್ಲ, ಸಾಕು ಮಾಡಿ ಎಂದನು ಎಂದು ಹೇಳುತ್ತಾರೆ. ಅರೆ! ಮಕ್ಕಳು ತಂದೆಯ ರೂಪವನ್ನೇ
ನೋಡಿ ಸಹನೆ ಮಾಡದಿರಲು ಸಾಧ್ಯವೇ! ಮಕ್ಕಳಂತೂ ತಂದೆಯನ್ನು ನೋಡಿ ಖುಷಿ ಪಡುವರಲ್ಲವೆ. ತಂದೆಯು
ತಿಳಿಸುತ್ತಾರೆ - ನನಗೇನೂ ಇಂತಹ ಭಯಂಕರ ರೂಪವಿಲ್ಲ. ನಾನು ಪರಮಾತ್ಮನಾಗಿದ್ದೇನೆ ಅರ್ಥಾತ್ ಅತಿ
ದೂರ ಇರುವಂತಹ ಪರಮ ಆತ್ಮ ಅಂದರೆ ಪರಮಾತ್ಮನಾಗಿದ್ದೇನೆ. ಅವರು ಮನುಷ್ಯ ಸೃಷ್ಟಿಯ ಬೀಜ
ರೂಪನಾಗಿದ್ದಾರೆ ಎಂದು ಹಾಡುತ್ತಾರೆ. ಭಕ್ತರು ಅವರ ಮಹಿಮೆ ಹಾಡುತ್ತಾರೆ. ಸತ್ಯ-ತ್ರೇತಾಯುಗದಲ್ಲಿ
ಯಾರೂ ಮಹಿಮೆ ಮಾಡುವುದಿಲ್ಲ ಏಕೆಂದರೆ ಅಲ್ಲಿ ಸುಖ ಇರುತ್ತದೆ. ದುಃಖದಲ್ಲಿ ಎಲ್ಲರೂ ಸ್ಮರಿಸುವರು,
ಸುಖದಲ್ಲಿ ಯಾರೂ ಮಾಡುವುದಿಲ್ಲವೆಂದು ಹಾಡುತ್ತಾರೆ ಆದರೆ ಇದರ ಅರ್ಥವನ್ನು ಯಾರೂ ತಿಳಿದುಕೊಂಡಿಲ್ಲ.
ಕೇವಲ ಗಿಳಿಯಂತೆ ಹಾಡುತ್ತಿರುತ್ತಾರೆ. ಯಾವಾಗ ಸುಖವಿರುತ್ತದೆ, ಯಾವಾಗ ದುಃಖವಾಗುತ್ತದೆ, ಇದು
ಭಾರತದ ಮಾತೇ ಅಲ್ಲವೆ. 5000 ವರ್ಷಗಳ ಮೊದಲು ಸ್ವರ್ಗವಿತ್ತು, ನಂತರ ತ್ರೇತಾದಲ್ಲಿ ಎರಡು ಕಲೆಗಳು
ಕಡಿಮೆಯಾಯಿತು. ಸತ್ಯ-ತ್ರೇತಾಯುಗದಲ್ಲಿ ದುಃಖದ ಹೆಸರಿರುವುದಿಲ್ಲ, ಅದು ಸುಖಧಾಮವಾಗಿದೆ.
ಸ್ವರ್ಗವೆಂದು ಹೇಳಿದೊಡನೆಯೇ ಬಾಯಿ ಸಿಹಿಯಾಗುತ್ತದೆ. ಸ್ವರ್ಗದಲ್ಲಿ ದುಃಖವೆಲ್ಲಿಂದ ಬರುವುದು!
ಅಲ್ಲಿಯೂ ಸಹ ಕಂಸ, ಜರಾಸಂಧ ಮೊದಲಾದವರಿದ್ದರೆಂದು ಹೇಳುತ್ತಾರೆ ಆದರೆ ಇದು ಸಾಧ್ಯವಿಲ್ಲ.
ನಾವು ನೌಧಾಭಕ್ತಿ ಮಾಡಿದರೆ ಸಾಕ್ಷಾತ್ಕಾರವಾಗುತ್ತದೆ. ಸಾಕ್ಷಾತ್ಕಾರವಾಯಿತೆಂದರೆ ನಮಗೆ ಭಗವಂತ
ಸಿಕ್ಕಿದರೆಂದು ಭಕ್ತರು ತಿಳಿದುಕೊಳ್ಳುತ್ತಾರೆ. ಲಕ್ಷ್ಮಿಯ ಪೂಜೆ ಮಾಡಿ ಅವರ ದರ್ಶನವಾಯಿತೆಂದರೆ
ನಾವಂತೂ ಪಾರಾಗಿ ಬಿಟ್ಟೆವು ಎಂದು ಹೇಳಿ ಖುಷಿಯಾಗಿ ಬಿಡುತ್ತಾರೆ ಆದರೆ ಏನೂ ಇಲ್ಲ. ಅಲ್ಪಕಾಲಕ್ಕಾಗಿ
ಸುಖ ಸಿಗುತ್ತದೆ, ದರ್ಶನವಾಯಿತು ಅಷ್ಟೇ. ಇದರಿಂದ ಮುಕ್ತಿ-ಜೀವನ್ಮುಕ್ತಿ ಪಡೆದುಕೊಂಡರು ಎಂದಲ್ಲ.
ತಂದೆಯು ಏಣಿಯ ಚಿತ್ರದಲ್ಲಿಯೂ ತಿಳಿಸಿದ್ದಾರೆ - ಭಾರತವು ಬಹಳ ಶ್ರೇಷ್ಠವಾಗಿತ್ತು, ಭಗವಂತನು ಸರ್ವ
ಶ್ರೇಷ್ಠನಾಗಿದ್ದಾರೆ. ಭಾರತದಲ್ಲಿ ಈ ಲಕ್ಷ್ಮೀ-ನಾರಾಯಣರದು ಶ್ರೇಷ್ಠಾತಿ ಶ್ರೇಷ್ಠ ಆಸ್ತಿಯಾಗಿದೆ.
ಆಗ ಸ್ವರ್ಗವಿತ್ತು, ಸತೋಪ್ರಧಾನರಾಗಿದ್ದರು ನಂತರ ಕಲಿಯುಗದ ಅಂತಿಮದಲ್ಲಿ ಎಲ್ಲರೂ
ತಮೋಪ್ರಧಾನರಾಗುತ್ತಾರೆ. ನಾವು ಸಂಪೂರ್ಣ ಪತಿತರಾಗಿ ಬಿಟ್ಟಿದ್ದೇವೆ ಎಂದು ಕರೆಯುತ್ತಾರೆ. ತಂದೆಯು
ತಿಳಿಸುತ್ತಾರೆ - ನಾನು ಕಲ್ಪದ ಸಂಗಮಯುಗದಲ್ಲಿ ನಿಮಗೆ ರಾಜಯೋಗವನ್ನು ಕಲಿಸಲು ಬರುತ್ತೇನೆ. ನಾನು
ಹೇಗಿದ್ದೇನೆ, ಯಾರಾಗಿದ್ದೇನೆ ಎಂಬುದನ್ನು ಯಥಾರ್ಥವಾಗಿ ಯಾರೂ ತಿಳಿದುಕೊಂಡಿಲ್ಲ. ನಿಮ್ಮಲ್ಲಿಯೂ
ನಂಬರ್ವಾರ್ ಪುರುಷಾರ್ಥದನುಸಾರ ತಿಳಿದುಕೊಂಡಿದ್ದಾರೆ. ಏಣಿಯ ಚಿತ್ರವನ್ನು ತೋರಿಸಬೇಕಾಗಿದೆ, ಇದು
ಭಾರತದ ಏಣಿಯಾಗಿದೆ. ಸತ್ಯಯುಗದಲ್ಲಿ ದೇವಿ-ದೇವತೆಗಳಿದ್ದರು, 5000 ವರ್ಷಗಳ ಮೊದಲು ಭಾರತವು
ಹೀಗಿತ್ತು. ಶಾಸ್ತ್ರಗಳಲ್ಲಿ ಕಲ್ಪವು ಲಕ್ಷಾಂತರ ವರ್ಷಗಳೆಂದು ಬರೆದಿದ್ದಾರೆ. ತಂದೆಯು
ತಿಳಿಸುತ್ತಾರೆ - ಕಲ್ಪವು 5000 ವರ್ಷಗಳಾಗಿದೆ, ಲಕ್ಷಾಂತರ ವರ್ಷಗಳಲ್ಲ. ಸತ್ಯ-ತ್ರೇತಾಯುಗವು ಹೊಸ
ಪ್ರಪಂಚ, ದ್ವಾಪರ-ಕಲಿಯುಗವು ಹಳೆಯ ಪ್ರಪಂಚ. ಅರ್ಧ-ಅರ್ಧ ಭಾಗವಿದೆಯಲ್ಲವೆ. ಹೊಸ ಪ್ರಪಂಚದಲ್ಲಿ
ನೀವು ಭಾರತವಾಸಿಗಳಿದ್ದಿರಿ, ಕೃಷ್ಣನು ಸತ್ಯಯುಗದ ರಾಜಕುಮಾರನಾಗಿದ್ದಾನೆ. ಕೃಷ್ಣನ ಆ ರೂಪವನ್ನು
ದಿವ್ಯ ದೃಷ್ಟಿಯ ವಿನಃ ನೋಡಲು ಸಾಧ್ಯವಿಲ್ಲ. ಚೈತನ್ಯ ರೂಪದಿಂದಂತೂ ಕೃಷ್ಣನು ಸತ್ಯಯುಗದಲ್ಲಿದ್ದನು,
ಮತ್ತೆಂದೂ ಆ ರೂಪವು ಸಿಗಲು ಸಾಧ್ಯವಿಲ್ಲ. ನಂತರ ನಾಮ, ರೂಪ, ದೇಶ, ಕಾಲವು ಬದಲಾಗುತ್ತದೆ. 84
ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ, 84 ಜನ್ಮಗಳಲ್ಲಿ 84 ಮಂದಿ ತಂದೆ-ತಾಯಿಯರು ಸಿಗುತ್ತಾರೆ.
ಭಿನ್ನ-ಭಿನ್ನ ನಾಮ, ರೂಪ, ಕರ್ತವ್ಯವಿರುತ್ತದೆ. ಇದು ಭಾರತದ್ದೇ ಏಣಿಯಾಗಿದೆ. ನೀವೀಗ ಬ್ರಾಹ್ಮಣ
ಕುಲ ಭೂಷಣರಾಗಿದ್ದೀರಿ. ತಂದೆಯು ಕಲ್ಪದ ಮೊದಲೂ ಸಹ ಬಂದು ನಿಮ್ಮನ್ನು ದೇವಿ-ದೇವತೆಗಳನ್ನಾಗಿ
ಮಾಡಿದ್ದರು, ಅಲ್ಲಿ ನೀವು ಸರ್ವೋತ್ತಮ ಕರ್ಮ ಮಾಡುತ್ತಿದ್ದಿರಿ, 21 ಜನ್ಮಗಳವರೆಗೆ ನೀವು ಸದಾ
ಸುಖಿಯಾಗಿದ್ದಿರಿ. ಮತ್ತೆ ನಿಮ್ಮನ್ನು ಈ ದುರ್ಗತಿಯಲ್ಲಿ ಯಾರು ತಂದರು? ನಾನು ಕಲ್ಪದ ಮೊದಲೂ ನಿಮಗೆ
ಸದ್ಗತಿ ನೀಡಿದ್ದೆನು, ನಂತರ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ ಇಳಿಯಬೇಕಾಗಿದೆ.
ಸೂರ್ಯವಂಶದಲ್ಲಿ 8 ಜನ್ಮಗಳು, ಚಂದ್ರವಂಶದಲ್ಲಿ 12 ಜನ್ಮಗಳು ಹೀಗೆ ಇಳಿಯುತ್ತಾ ಬಂದಿದ್ದೀರಿ. ನೀವೇ
ಪೂಜ್ಯ ದೇವತೆಗಳಾಗಿದ್ದಿರಿ, ನೀವೇ ಪೂಜಾರಿ ಪತಿತರಾಗಿದ್ದೀರಿ. ಭಾರತವು ಈಗ ಕಂಗಾಲಾಗಿದೆ.
ಭಗವಾನುವಾಚ - ನೀವು 100% ಪವಿತ್ರರು, ಸಾಹುಕಾರರಾಗಿದ್ದಿರಿ. ಯಾವುದೇ ರೋಗ, ದುಃಖದ ಮಾತಿರಲಿಲ್ಲ,
ಸುಖಧಾಮವಾಗಿತ್ತು ಅದಕ್ಕೆ ಭಗವಂತನ ಹೂದೋಟವೆಂದು ಹೇಳುತ್ತಾರೆ. ಭಗವಂತನು ಹೂದೋಟವನ್ನು ಸ್ಥಾಪನೆ
ಮಾಡಿದರು, ಯಾರು ದೇವಿ-ದೇವತೆಗಳಾಗಿದ್ದರೋ ಅವರು ಈಗ ಮುಳ್ಳುಗಳಾಗಿದ್ದಾರೆ. ಈಗ ಅರಣ್ಯವಾಗಿ
ಬಿಟ್ಟಿದೆ. ಅರಣ್ಯದಲ್ಲಿ ಮುಳ್ಳುಗಳಿರುತ್ತವೆ, ತಂದೆಯು ತಿಳಿಸುತ್ತಾರೆ - ಕಾಮ ಮಹಾಶತ್ರುವಾಗಿದೆ,
ಇದರ ಮೇಲೆ ಜಯ ಗಳಿಸಿ, ಇದೇ ನಿಮಗೆ ಆದಿ-ಮಧ್ಯ-ಅಂತ್ಯ ದುಃಖ ಕೊಟ್ಟಿದೆ. ಒಬ್ಬರು ಇನ್ನೊಬ್ಬರ ಮೇಲೆ
ಕಾಮದ ಕಟಾರಿಯನ್ನು ನಡೆಸುವುದು. ಎಲ್ಲದಕ್ಕಿಂತ ದೊಡ್ಡ ಪಾಪವಾಗಿದೆ. ತಂದೆಯು ಕುಳಿತು ತಮ್ಮ ಪರಿಚಯ
ಕೊಡುತ್ತಾರೆ - ನಾನು ಪರಮಧಾಮದಲ್ಲಿರುವ ಪರಮಾತ್ಮನಾಗಿದ್ದೇನೆ. ನನಗೆ ಸೃಷ್ಟಿಯ ಬೀಜರೂಪ ಪರಮ
ಆತ್ಮನೆಂದು ಹೇಳುತ್ತಾರೆ, ನಾನು ಎಲ್ಲರ ತಂದೆಯಾಗಿದ್ದೇನೆ. ಹೇ ಪರಮಪಿತ ಪರಮಾತ್ಮ ಎಂದು ಎಲ್ಲಾ
ಆತ್ಮರು ತಂದೆಯನ್ನು ಕೂಗುತ್ತಾರೆ. ಹೇಗೆ ನಿಮ್ಮ ಆತ್ಮವು ನಕ್ಷತ್ರ ಮಾದರಿಯಾಗಿದೆಯೋ ಹಾಗೆಯೇ ತಂದೆ
ಪರಮಾತ್ಮನೂ ಸಹ ನಕ್ಷತ್ರವಾಗಿದ್ದಾರೆ. ಚಿಕ್ಕದು ಅಥವಾ ದೊಡ್ಡ ಗಾತ್ರದಲ್ಲಿಲ್ಲ. ತಂದೆಯು
ತಿಳಿಸುತ್ತಾರೆ - ನಾನು ಅಂಗುಷ್ಟಾಕಾರದಲ್ಲಿಯೂ ಇಲ್ಲ, ನಿಮ್ಮೆಲ್ಲರ ತಂದೆಯಾಗಿದ್ದೇನೆ. ನಾನು ಪರಮ
ಆತ್ಮನಾಗಿದ್ದೇನೆ. ಅವರಿಗೆ ಪರಮ ಆತ್ಮ, ಜ್ಞಾನ ಪೂರ್ಣನೆಂದು ಹೇಳಲಾಗುತ್ತದೆ. ತಂದೆಯು
ತಿಳಿಸುತ್ತಾರೆ - ನಾನು ಜ್ಞಾನ ಪೂರ್ಣ, ಮನುಷ್ಯ ಸೃಷ್ಟಿ ವೃಕ್ಷದ ಬೀಜರೂಪನಾಗಿದ್ದೇನೆ. ಪರಮಾತ್ಮನು
ಸತ್ಚಿತ್ಆನಂದ ಸ್ವರೂಪನಾಗಿದ್ದಾರೆ, ಜ್ಞಾನ ಸಾಗರ, ಸುಖದ ಸಾಗರನಾಗಿದ್ದಾರೆಂದು ನನಗೆ ಭಕ್ತರು
ಹೇಳುತ್ತಾರೆ. ಎಷ್ಟೊಂದು ಮಹಿಮೆಯಿದೆ! ಒಂದುವೇಳೆ ನಾಮ, ರೂಪ, ದೇಶ, ಕಾಲವೇ ಇಲ್ಲವೆಂದರೆ ಯಾರನ್ನು
ಕರೆಯುತ್ತಾರೆ! ಸಾಧು-ಸಂತ ಮೊದಲಾದವರೆಲ್ಲರೂ ನಿಮಗೆ ಭಕ್ತಿಮಾರ್ಗದ ಶಾಸ್ತ್ರಗಳನ್ನೇ ತಿಳಿಸುತ್ತಾರೆ.
ನಾನು ಬಂದು ನಿಮಗೆ ರಾಜಯೋಗವನ್ನು ಕಲಿಸುತ್ತೇನೆ.
ತಂದೆಯು ತಿಳಿಸುತ್ತಾರೆ - ನೀವು ಪತಿತ-ಪಾವನನೆಂದು ಜ್ಞಾನ ಸಾಗರ ತಂದೆಯಾದ ನನಗೆ ಹೇಳುತ್ತೀರಿ,
ನೀವೂ ಸಹ ಮಾ||ಜ್ಞಾನ ಸಾಗರರಾಗುತ್ತೀರಿ. ಜ್ಞಾನದಿಂದ ಸದ್ಗತಿ ಸಿಗುತ್ತದೆ. ಭಾರತಕ್ಕೆ
ಸದ್ಗತಿಯನ್ನು ತಂದೆಯೇ ನೀಡುತ್ತಾರೆ. ಸರ್ವರ ಸದ್ಗತಿದಾತನು ಒಬ್ಬರೇ ಆಗಿದ್ದಾರೆ ಅಂದಮೇಲೆ ಮತ್ತೆ
ಸರ್ವರ ದುರ್ಗತಿಯನ್ನು ಯಾರು ಮಾಡುತ್ತಾರೆ? ರಾವಣ. ಈಗ ನಿಮಗೆ ಇದನ್ನು ಯಾರು ತಿಳಿಸುತ್ತಿದ್ದಾರೆ?
ಇವರು ಪರಮಾತ್ಮನಾಗಿದ್ದಾರೆ. ಆತ್ಮವಂತೂ ಒಂದು ನಕ್ಷತ್ರದಂತೆ ಅತಿ ಸೂಕ್ಷ್ಮವಾಗಿದೆ. ಪರಮಾತ್ಮನೂ
ಸಹ ಡ್ರಾಮಾದಲ್ಲಿ ಪಾತ್ರವನ್ನಭಿನಯಿಸುತ್ತಾರೆ. ರಚಯಿತ, ನಿರ್ದೇಶಕ, ಮುಖ್ಯ ಪಾತ್ರಧಾರಿಯಾಗಿದ್ದಾರೆ.
ತಂದೆಯು ತಿಳಿಸುತ್ತಾರೆ – ಶ್ರೇಷ್ಠಾತಿ ಶ್ರೇಷ್ಠ ಪಾತ್ರಧಾರಿ ಯಾರು? ಶ್ರೇಷ್ಠಾತಿ ಶ್ರೇಷ್ಠ
ಭಗವಂತ. ಯಾರ ಜೊತೆಯಲ್ಲಿ ನೀವಾತ್ಮರೆಲ್ಲರೂ ಇರುತ್ತೀರಿ, ಪರಮಾತ್ಮನು ಎಲ್ಲರನ್ನೂ ಕಳುಹಿಸುತ್ತಾರೆ
ಎಂದು ಹೇಳುತ್ತಾರೆ. ಇದೂ ಸಹ ತಿಳಿದುಕೊಳ್ಳುವ ಮಾತಾಗಿದೆ. ಡ್ರಾಮ ಅನಾದಿಯಾಗಿ ಮಾಡಲ್ಪಟ್ಟಿದೆ.
ತಂದೆಯು ತಿಳಿಸುತ್ತಾರೆ - ನೀವು ನನಗೆ ಜ್ಞಾನ ಸಾಗರ, ಇಡೀ ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು
ಅರಿತಿರುವವರೆಂದು ಹೇಳುತ್ತೀರಿ. ಈಗ ಯಾವ ಶಾಸ್ತ್ರ ಇತ್ಯಾದಿಗಳನ್ನು ಓದುತ್ತೀರೋ ಇದನ್ನು ತಂದೆಯು
ತಿಳಿದುಕೊಂಡಿದ್ದಾರೆ. ತಂದೆಯು ತಿಳಿಸುತ್ತಾರೆ - ನಾನು ಪ್ರಜಾಪಿತ ಬ್ರಹ್ಮನ ಮೂಲಕ ಎಲ್ಲಾ
ಶಾಸ್ತ್ರಗಳ ಸಾರವನ್ನು ತಿಳಿಸುತ್ತೇನೆ. ವಿಷ್ಣುವಿನ ನಾಭಿಯಿಂದ ಬ್ರಹ್ಮನು ಬಂದನೆಂದು
ತೋರಿಸುತ್ತಾರೆ ಅಂದಾಗ ಎಲ್ಲಿ ಬಂದನು? ಮನುಷ್ಯರಂತೂ ಅವಶ್ಯವಾಗಿ ಇಲ್ಲಿಯೇ ಇರುತ್ತಾರಲ್ಲವೆ. ಇವರ
ನಾಭಿಯಿಂದ ಬ್ರಹ್ಮನು ಬಂದನು, ಮತ್ತೆ ಭಗವಂತನು ಕುಳಿತು ಇವರ ಮೂಲಕ ಎಲ್ಲಾ ವೇದಶಾಸ್ತ್ರಗಳ
ಸಾರವನ್ನು ತಿಳಿಸಿದರು. ತಮ್ಮ ನಾಮ, ರೂಪ, ದೇಶ, ಕಾಲವನ್ನೂ ತಿಳಿಸಿದ್ದಾರೆ. ಮನುಷ್ಯ ಸೃಷ್ಟಿಯ
ಬೀಜ ರೂಪನಲ್ಲವೆ. ಈ ವೃಕ್ಷದ ಉತ್ಪತ್ತಿ, ಪಾಲನೆ, ವಿನಾಶವು ಹೇಗಾಗುತ್ತದೆ ಎಂಬುದನ್ನು ಯಾರೂ
ಅರಿತುಕೊಂಡಿಲ್ಲ. ಇದಕ್ಕೆ ವಿಭಿನ್ನವಾದ ವೃಕ್ಷವೆಂದು ಹೇಳಲಾಗುತ್ತದೆ. ಎಲ್ಲರೂ ನಂಬರ್ವಾರ್ ತಮ್ಮ
ಸಮಯದಲ್ಲಿ ಬರುತ್ತಾರೆ. ಮೊಟ್ಟ ಮೊದಲನೆಯದಾಗಿ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡಿಸುತ್ತೇನೆ
ಏಕೆಂದರೆ ಆ ಧರ್ಮವು ಈಗಿಲ್ಲ. ಎಷ್ಟೊಂದು ತುಚ್ಛ ಬುದ್ಧಿಯವರಾಗಿ ಬಿಟ್ಟಿದ್ದಾರೆ. ದೇವತೆಗಳ,
ಲಕ್ಷ್ಮೀ-ನಾರಾಯಣರ ಪೂಜೆ ಮಾಡುತ್ತಾರೆ ಆದರೆ ಅವರ ರಾಜ್ಯವು ಸೃಷ್ಟಿಯಲ್ಲಿ ಯಾವಾಗ ಇತ್ತೆಂಬುದನ್ನು
ತಿಳಿದುಕೊಂಡಿಲ್ಲ. ಈಗ ಭಾರತದ ಆ ದೇವತಾ ಧರ್ಮವೇ ಇಲ್ಲ. ಕೇವಲ ಚಿತ್ರಗಳು ಉಳಿದುಕೊಂಡಿವೆ.
ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಮಾII ಜ್ಞಾನ
ಸಾಗರರಾಗಿ ಪತಿತರಿಂದ ಪಾವನರನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ. ತಂದೆಯು ಯಾವ ಎಲ್ಲಾ ವೇದ
ಶಾಸ್ತ್ರಗಳ ಸಾರವನ್ನು ತಿಳಿಸಿದ್ದಾರೆಯೋ ಅದನ್ನು ಬುದ್ಧಿಯಲ್ಲಿಟ್ಟುಕೊಂಡು ಸದಾ
ಹರ್ಷಿತರಾಗಿರಬೇಕಾಗಿದೆ.
2. ಪ್ರತೀ ಹೆಜ್ಜೆಯಲ್ಲಿ ಒಬ್ಬ ತಂದೆಯ ಶ್ರೀಮತವನ್ನು ಪಾಲನೆ ಮಾಡಬೇಕಾಗಿದೆ. ದೇಹದ ಎಲ್ಲಾ
ಧರ್ಮಗಳನ್ನು ತ್ಯಜಿಸಿ ಆತ್ಮಾಭಿಮಾನಿಯಾಗುವ ಪರಿಶ್ರಮ ಪಡಬೇಕಾಗಿದೆ.
ವರದಾನ:
ತಮ್ಮ ದಿವ್ಯ,
ಅಲೌಕಿಕ ಜನ್ಮದ ಸ್ಮೃತಿಯ ಮುಖಾಂತರ ಮರ್ಯಾದೆಯ ಗೆರೆಯ ಒಳಗೆ ಇರುವಂತಹವರು ಮರ್ಯಾದಾ ಪುರುಷೋತ್ತಮ
ಭವ.
ಹೇಗೆ ಪ್ರತಿ ಕುಲದಲ್ಲಿ
ಮರ್ಯಾದೆಯ ಗೆರೆ ಇರುತ್ತದೆ, ಹಾಗೆಯೆ ಬ್ರಾಹ್ಮಣ ಕುಲದ ಮರ್ಯಾದೆಯ ಗೆರೆ ಇದೆ, ಬ್ರಾಹ್ಮಣ ಅರ್ಥಾತ್
ದಿವ್ಯ ಮತ್ತು ಅಲೌಕಿಕ ಜನ್ಮ ಪಡೆದವರು ಮರ್ಯಾದಾ ಪುರುಷೋತ್ತಮ. ಅವರು ಎಂದೂ ಸಹ ಸಂಕಲ್ಪದಲ್ಲಿಯೂ
ಸಹ ಯಾವುದೇ ಆಕರ್ಷಣೆಗೆ ಒಳಗಾಗಿ ಮರ್ಯಾದೆಯ ಉಲ್ಲಂಘನೆ ಮಾಡಲು ಸಾಧ್ಯವಿಲ್ಲ. ಯಾರು ಮರ್ಯಾದೆಯ
ಗೆರೆಯನ್ನು ಸಂಕಲ್ಪದಲ್ಲಿಯಾದರೂ ಸಹ ಉಲ್ಲಂಘನೆ ಮಾಡುತ್ತಾರೆ ಅವರು ತಂದೆಯ ಆಶ್ರಯದ ಅನುಭವ
ಮಾಡಲಾಗುವುದಿಲ್ಲ. ಮಕ್ಕಳ ಬದಲಾಗಿ ಬೇಡುವ ಭಕ್ತರಾಗಿ ಬಿಡುತ್ತಾರೆ. ಬ್ರಾಹ್ಮಣ ಅರ್ಥಾತ್ ಕೂಗುವುದು,
ಬೇಡುವುದು ಸಮಾಪ್ತಿ, ಎಂದೂ ಸಹ ಪ್ರಕೃತಿ ಅಥವಾ ಮಾಯೆಗೆ ಮೋಹಿತರಾಗುವುದಿಲ್ಲ, ಅವರು ಸದಾ ತಂದೆಯ
ಕಿರೀಟವಾಗಿರುತ್ತಾರೆ.
ಸ್ಲೋಗನ್:
ಶಾಂತಿ ದೂತರಾಗಿ ತಮ್ಮ
ತಪಸ್ಸಿನ ಮುಖಾಂತರ ವಿಶ್ವದಲ್ಲಿ ಶಾಂತಿಯ ಕಿರಣಗಳನ್ನು ಹರಡಿ.