15.05.20 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನಿಮ್ಮ
ಮುಖವು ಈಗ ಸ್ವರ್ಗದ ಕಡೆಯಿದೆ, ನೀವು ನರಕದಿಂದ ದೂರವಾಗಿ ಸ್ವರ್ಗದ ಕಡೆ ಹೋಗುತ್ತಿದ್ದೀರಿ,
ಆದ್ದರಿಂದ ಬುದ್ಧಿಯೋಗವನ್ನು ನರಕದಿಂದ ತೆಗೆದು ಬಿಡಿ”
ಪ್ರಶ್ನೆ:
ಎಲ್ಲದಕ್ಕಿಂತ
ಸೂಕ್ಷ್ಮ ಮತ್ತು ಉನ್ನತ ಗುರಿ ಯಾವುದು, ಅದನ್ನು ಯಾರು ಪಾರು ಮಾಡಬಲ್ಲರು?
ಉತ್ತರ:
ನೀವು ಮಕ್ಕಳು ಸ್ವರ್ಗದ ಕಡೆ ಮುಖ ಮಾಡುತ್ತೀರಿ, ಮಾಯೆಯು ನರಕದ ಕಡೆ ತಿರುಗಿಸುತ್ತದೆ, ಗುರಿಯನ್ನು
ಪಾರು ಮಾಡಲು ನಷ್ಟಮೋಹಿಗಳಾಗಬೇಕಾಗುತ್ತದೆ. ನಿಶ್ಚಯ ಮತ್ತು ಸಾಹಸದ ಆಧಾರದ ಮೇಲೆ ಅದನ್ನು ಪಾರು
ಮಾಡಬಲ್ಲಿರಿ. ವಿಕಾರಗಳು ಮಧ್ಯದಲ್ಲಿರುತ್ತಾ ನಿರ್ವಿಕಾರಿ ಹಂಸಗಳಾಗುವುದೇ ಪರಿಶ್ರಮವಿದೆ.
ಗೀತೆ:
ನಿರ್ಬಲನೊಂದಿಗೆ
ಬಲಶಾಲಿಯ ಯುದ್ಧ...............
ಓಂ ಶಾಂತಿ.
ಯಾರು ಬುದ್ಧಿವಂತ ಮಕ್ಕಳಿದ್ದಾರೆಯೋ ಅವರು ಇದರ ಅರ್ಥವನ್ನು ಬಹಳ ಚೆನ್ನಾಗಿ ತಿಳಿದುಕೊಳ್ಳುತ್ತಾರೆ.
ಯಾರ ಬುದ್ಧಿಯೋಗವು ಶಾಂತಿಧಾಮ ಮತ್ತು ಸ್ವರ್ಗದ ಕಡೆಯಿದೆಯೋ ಅವರಿಗೇ ಬಿರುಗಾಳಿಗಳು ಬರುತ್ತವೆ.
ತಂದೆಯಂತೂ ಈಗ ನಿಮ್ಮ ಮುಖವನ್ನು ತಿರುಗಿಸುತ್ತಾರೆ. ಅಜ್ಞಾನ ಕಾಲದಲ್ಲಿಯೂ ಸಹ ಹಳೆಯ ಮನೆಯಿಂದ
ಮುಖವನ್ನು ತಿರುಗಿಸುತ್ತಾರೆ ಮತ್ತು ಯಾವಾಗ ಹೊಸ ಮನೆಯು ತಯಾರಾಗುವುದೋ ಎಂದು ಹೊಸ ಮನೆಯನ್ನು ನೆನಪು
ಮಾಡುತ್ತಿರುತ್ತಾರೆ. ಈಗ ನೀವು ಮಕ್ಕಳಿಗೂ ಗಮನದಲ್ಲಿದೆ - ಯಾವಾಗ ನಮ್ಮ ಸ್ವರ್ಗದ
ಸ್ಥಾಪನೆಯಾಗುವುದೋ ನಂತರ ಸುಖಧಾಮದಲ್ಲಿ ಬರುತ್ತೇವೆಯೋ! ಈ ದುಃಖಧಾಮದಿಂದಂತೂ ಎಲ್ಲರೂ ಹೋಗಬೇಕಾಗಿದೆ.
ಇಡೀ ಸೃಷ್ಟಿಯ ಮನುಷ್ಯ ಮಾತ್ರರಿಗೆ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಈಗ ಸ್ವರ್ಗದ ದ್ವಾರವು
ತೆರೆಯುತ್ತಿದೆ. ಈಗ ನಿಮ್ಮ ಬುದ್ಧಿಯೋಗವು ಸ್ವರ್ಗದ ಕಡೆ ಹೋಗಬೇಕು. ಸ್ವರ್ಗದಲ್ಲಿ ಹೋಗುವವರಿಗೆ
ಪವಿತ್ರರೆಂದು ಹೇಳಲಾಗುತ್ತದೆ. ನರಕದಲ್ಲಿ ಇರುವವರಿಗೆ ಅಪವಿತ್ರರೆಂದು ಹೇಳಲಾಗುತ್ತದೆ. ಗೃಹಸ್ಥ
ವ್ಯವಹಾರದಲ್ಲಿದ್ದರೂ ಬುದ್ಧಿಯೋಗವನ್ನು ಸ್ವರ್ಗದ ಕಡೆ ಇರಬೇಕಾಗಿದೆ. ತಿಳಿದುಕೊಳ್ಳಿ, ತಂದೆಯ
ಬುದ್ಧಿಯೋಗವು ಸ್ವರ್ಗದ ಕಡೆ ಮತ್ತು ಮಕ್ಕಳ ಬುದ್ಧಿಯೋಗ ನರಕದ ಕಡೆ ಇದ್ದರೆ ಇಬ್ಬರೂ ಒಂದೇ
ಮನೆಯಲ್ಲಿ ಇರಲು ಹೇಗೆ ಸಾಧ್ಯ. ಹಂಸ ಮತ್ತು ಕೊಕ್ಕರೆಯು ಒಟ್ಟಿಗೆ ಇರಲು ಸಾಧ್ಯವಿಲ್ಲ. ಬಹಳ
ಕಷ್ಟವಾಗುತ್ತದೆ. ಅವರು ಬುದ್ಧಿಯೋಗವು ಪಂಚ ವಿಕಾರಗಳ ಕಡೆ ಇರುತ್ತದೆ. ತಂದೆಯು ಸ್ವರ್ಗದ ಕಡೆ
ಹೋಗುವವರು, ಮಕ್ಕಳು ನರಕದ ಕಡೆ ಹೋಗುವವರು, ಇಬ್ಬರೂ ಒಟ್ಟಿಗೆ ಇರಲು ಸಾಧ್ಯವಿಲ್ಲ, ಉನ್ನತ
ಗುರಿಯಾಗಿದೆ. ತಂದೆಯು ನೋಡುತ್ತಾರೆ - ನನ್ನ ಮಕ್ಕಳ ಮುಖವು ನರಕದ ಕಡೆಯಿದೆ. ನರಕದಲ್ಲಿ ಹೋಗದ ವಿನಃ
ಅವರಿಗೆ ಇರಲು ಸಾಧ್ಯವಾಗುವುದಿಲ್ಲ ಅಂದಮೇಲೆ ಏನು ಮಾಡಬೇಕು! ಅವಶ್ಯವಾಗಿ ಮನೆಯಲ್ಲಿ ಜಗಳವೂ
ನಡೆಯುವುದು, ಮಕ್ಕಳು ವಿವಾಹ ಮಾಡಿಕೊಳ್ಳುವುದೇ ಇರುವುದು ಒಂದು ಜ್ಞಾನವೇ.... ಎಂದು ಹೇಳುತ್ತಾರೆ.
ಗೃಹಸ್ಥ ವ್ಯವಹಾರದಲ್ಲಿ ಇರುವವರು ಅನೇಕರಿದ್ದಾರಲ್ಲವೆ. ಮಕ್ಕಳ ಮುಖವು ನರಕದ ಕಡೆಯಿದೆ. ನರಕದಲ್ಲಿ
ಹೋಗಬೇಕೆಂದು ಅವರು ಇಚ್ಛಿಸುತ್ತಾರೆ. ನರಕದ ಕಡೆ ಬುದ್ಧಿಯೋಗವನ್ನಿಡಬೇಡಿ ಎಂದು ತಂದೆಯು
ಹೇಳುತ್ತಾರೆ. ಆದರೆ ಮಕ್ಕಳು ತಂದೆಯ ಮಾತನ್ನೇ ಕೇಳುವುದಿಲ್ಲ. ಅಂದಾಗ ಏನು ಮಾಡಬೇಕು? ಇದರಲ್ಲಿ
ಬಹಳ ನಷ್ಟಮೋಹ ಸ್ಥಿತಿಯಿರಬೇಕು. ಇದೆಲ್ಲದರ ಜ್ಞಾನವು ಆತ್ಮದಲ್ಲಿದೆ. ತಂದೆಯ ಆತ್ಮವು ಹೇಳುತ್ತದೆ
- ಇವರನ್ನು ನಾನು ರಚಿಸಿದ್ದೇನೆ, ನನ್ನ ಮಾತನ್ನೇ ಕೇಳುವುದಿಲ್ಲ. ಕೆಲವರಂತೂ ಬ್ರಾಹ್ಮಣರಾಗಿದ್ದರೂ
ಸಹ ನರಕದ ಕಡೆಯೇ ಹೊರಟು ಹೋಗುತ್ತದೆ ಅಂದಾಗ ಅವರು ಒಮ್ಮೆಲೆ ರಸಾತಳದಲ್ಲಿ ಹೊರಟು ಹೋಗುತ್ತಾರೆ.
ಮಕ್ಕಳಿಗೆ ತಿಳಿಸಲಾಗಿದೆ - ಇದು ಜ್ಞಾನ ಸಾಗರನ ಸಭೆಯಾಗಿದೆ. ಭಕ್ತಿಮಾರ್ಗದಲ್ಲಿ ಇಂದ್ರ ಸಭೆಯ
ಗಾಯನವಿದೆ. ಪುಕರಾಜ ಪರಿ, ನೀಲಂ ಪರಿ, ಮಾಣಿಕ್ಪರಿ... ಬಹಳಷ್ಟು ಹೆಸರುಗಳನ್ನಿಡಲಾಗಿದೆ ಏಕೆಂದರೆ
ಜ್ಞಾನ ನರ್ತನ ಮಾಡುತ್ತಾರಲ್ಲವೆ. ಭಿನ್ನ-ಭಿನ್ನ ಪ್ರಕಾರದ ಪರಿಗಳಿದ್ದಾರಲ್ಲವೆ. ಅವರು ಪವಿತ್ರರು
ಬೇಕು. ಒಂದುವೇಳೆ ಯಾರಾದರೂ ಅಪವಿತ್ರರನ್ನು ಕರೆ ತಂದರೆ ಶಿಕ್ಷೆಯಾಗುವುದು. ಇದರಲ್ಲಿ ಬಹಳಷ್ಟು
ಪಾವನರು ಬೇಕು. ಇದು ಬಹಳ ಉನ್ನತ ಗುರಿಯಾಗಿದೆ ಆದ್ದರಿಂದ ವೃಕ್ಷವು ಬೇಗ ಬೇಗನೆ ವೃದ್ಧಿ
ಹೊಂದುವುದಿಲ್ಲ. ತಂದೆಯು ಯಾವ ಜ್ಞಾನವನ್ನು ಕೊಡುತ್ತಾರೆಯೋ ಅದನ್ನು ಯಾರೂ ಅರಿತುಕೊಂಡಿಲ್ಲ.
ಶಾಸ್ತ್ರಗಳಲ್ಲಿಯೂ ಈ ಜ್ಞಾನವಿಲ್ಲ ಆದ್ದರಿಂದ ಸ್ವಲ್ಪ ನಿಶ್ಚಯವಾಯಿತೆಂದರೆ ಮಾಯೆಯು ಒಮ್ಮೆಲೆ
ಪೆಟ್ಟನ್ನು ಕೊಟ್ಟು ಬೀಳಿಸುತ್ತದೆ. ಬಿರುಗಾಳಿಯಲ್ಲವೆ. ಈ ಚಿಕ್ಕ ದೀಪವನ್ನು ಬಿರುಗಾಳಿಯು ಒಂದೇ
ಏಟಿನಿಂದ ಬೀಳಿಸುತ್ತದೆ. ಅನ್ಯರು ವಿಕಾರದಲ್ಲಿ ಬೀಳುತ್ತಿರುವುದನ್ನು ನೋಡಿ ತಾನೂ ಬೀಳುತ್ತಾರೆ.
ಇದರಲ್ಲಿ ಬಹಳ ತಿಳಿದುಕೊಳ್ಳುವ ಬುದ್ಧಿಯಿರಬೇಕು. ಅಬಲೆಯರ ಮೇಲೆ ಹತ್ಯಾಚಾರವಾಯಿತೆಂದು ಗಾಯನವಿದೆ.
ತಂದೆಯು ತಿಳಿಸುತ್ತಾರೆ - ಮಕ್ಕಳೇ, ಕಾಮ ಮಹಾಶತ್ರುವಾಗಿದೆ. ಇದರ ಪ್ರತಿ ನಿಮಗೆ ಬಹಳ ತಿರಸ್ಕಾರವು
ಬರಬೇಕು. ತಂದೆಯು ಈಗ ಬಹಳ ತಿರಸ್ಕಾರವನ್ನು ತರಿಸುತ್ತಾರೆ. ಮೊದಲು ಈ ಮಾತಿರಲಿಲ್ಲ. ನರಕವಂತೂ ಈಗಲೇ
ಇದೆಯಲ್ಲವೆ. ದ್ರೌಪದಿಯು ಕರೆದಳು, ಇದು ಈಗಿನ ಮಾತಾಗಿದೆ. ಎಷ್ಟು ಚೆನ್ನಾಗಿ ತಿಳಿಸಿಕೊಡಲಾಗುತ್ತದೆ,
ಆದರೂ ಸಹ ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲ.
ಗೇಟ್ ವೇ ಟು ಹೆವೆನ್ (ಸ್ವರ್ಗಕ್ಕೆ ದಾರಿ) ಈ ಗೋಲದ ಚಿತ್ರವು ಬಹಳ ಚೆನ್ನಾಗಿದೆ. ಗೋಲದ
ಚಿತ್ರದಿಂದ ಬಹಳ ಚೆನ್ನಾಗಿ ಅರಿತುಕೊಳ್ಳುತ್ತಾರೆ. ಏಣಿಯ ಚಿತ್ರದಿಂದಲೂ ಈ ಗೋಲದ ಚಿತ್ರದಿಂದ
ತಿಳಿದುಕೊಳ್ಳುವಷ್ಟು ತಿಳಿದುಕೊಳ್ಳುವುದಿಲ್ಲ. ದಿನ-ಪ್ರತಿದಿನ ನವೀನತೆಯು ಬರುತ್ತಾ ಹೋಗುತ್ತದೆ.
ತಂದೆಯು ತಿಳಿಸುತ್ತಾರೆ - ಇಂದು ನಿಮಗೆ ಸಂಪೂರ್ಣ ಹೊಸ ಸಲಹೆಯನ್ನು ಕೊಡುತ್ತೇನೆ. ಮೊದಲೇ ಎಲ್ಲಾ
ಸಲಹೆಗಳು ಸಿಗುವುದಿಲ್ಲ, ಇದು ಎಂತಹ ಪ್ರಪಂಚವಾಗಿದೆ, ಇದರಲ್ಲಿ ಎಷ್ಟೊಂದು ದುಃಖವಿದೆ! ಮಕ್ಕಳಲ್ಲಿ
ಎಷ್ಟು ಮೋಹವಿರುತ್ತದೆ, ಮಗನು ಶರೀರ ಬಿಟ್ಟರೆ ಒಮ್ಮೆಲೆ ಹಾಸಿಗೆಯನ್ನು ಹಿಡಿಯುತ್ತಾರೆ. ಬಹಳ
ದುಃಖವಿದೆ. ಸಾಹುಕಾರರೆಲ್ಲರೂ ಸುಖಿಯಾಗಿದ್ದಾರೆಂದಲ್ಲ. ಅನೇಕ ಪ್ರಕಾರದ ರೋಗಗಳಿರುತ್ತವೆ ಮತ್ತು
ಆಸ್ಪತ್ರೆಗಳಲ್ಲಿರುತ್ತಾರೆ. ಬಡವರು ಸಾಮಾನ್ಯ ವಾರ್ಡ್ನಲ್ಲಿರುತ್ತಾರೆ, ಸಾಹುಕಾರರಿಗೆ ಬೇರೆಯಾಗಿ
ವಿಶೇಷ ಕೋಣೆಯು ಸಿಗುತ್ತದೆ. ಅಷ್ಟೇ ಆದರೆ ದುಃಖವಂತೂ ಸಾಹುಕಾರರಿಗೆಷ್ಟೇ ಬಡವರಿಗೂ ಆಗುತ್ತದೆ.
ಕೇವಲ ಅವರಿಗೆ ಸ್ಥಾನವಷ್ಟೇ ಒಳ್ಳೆಯದು ಸಿಗುತ್ತದೆ, ಒಳ್ಳೆಯ ಸಂಭಾಲನೆಯಾಗುತ್ತದೆ. ಈಗ ನೀವು
ಮಕ್ಕಳು ತಿಳಿದುಕೊಂಡಿದ್ದೀರಿ - ತಂದೆಯು ನಮಗೆ ಓದಿಸುತ್ತಿದ್ದಾರೆ, ತಂದೆಯು ಅನೇಕ ಬಾರಿ
ಓದಿಸಿದ್ದಾರೆ, ತಮ್ಮ ಹೃದಯದಿಂದ ಕೇಳಿಕೊಳ್ಳಬೇಕು - ನಾನು ಓದುತ್ತೇನೆಯೇ ಅಥವಾ ಇಲ್ಲವೆ? ಎಷ್ಟು
ಮಂದಿಗೆ ಓದಿಸುತ್ತೇನೆ? ಒಂದುವೇಳೆ ಓದಿಸಲಿಲ್ಲವೆಂದರೆ ಪದವಿಯೇನು ಸಿಗುವುದು? ಪ್ರತಿನಿತ್ಯವೂ
ರಾತ್ರಿ ತಮ್ಮ ಚಾರ್ಟನ್ನು ನೋಡಿಕೊಳ್ಳಿ - ಇಂದು ಯಾರಿಗೂ ದುಃಖವನ್ನು ಕೊಡಲಿಲ್ಲವೆ? ಶ್ರೀಮತವು
ಹೇಳುತ್ತದೆ - ಯಾರಿಗೂ ದುಃಖವನ್ನು ಕೊಡಬೇಡಿ ಮತ್ತು ಎಲ್ಲರಿಗೂ ಮಾರ್ಗವನ್ನು ತಿಳಿಸಿ. ಯಾರು ನಮ್ಮ
ಕುಲದವರಾಗಿರುವರೋ ಅವರಿಗೆ ಬಹುಬೇಗನೆ ಅರ್ಥವಾಗುವುದು. ಈ ಜ್ಞಾನಾಮೃತವು ನಿಲ್ಲಲು ಬುದ್ಧಿಯು
ಚಿನ್ನದ ಪಾತ್ರೆಯಾಗಬೇಕು. ಹೇಗೆ ಸಿಂಹದ ಹಾಲಿಗಾಗಿ ಚಿನ್ನದ ಪಾತ್ರೆಯು ಬೇಕೆಂದು ಹೇಳಲಾಗುತ್ತದೆ
ಏಕೆಂದರೆ ಅದರ ಹಾಲು ಬಹಳ ಪ್ರಬಲವಾಗಿರುತ್ತದೆ. ಅದಕ್ಕೆ ಮಕ್ಕಳಲ್ಲಿ ಮೋಹವಿರುತ್ತದೆ, ಯಾರನ್ನಾದರೂ
ನೋಡಿದರೆ ಒಮ್ಮೆಲೆ ಮೇಲೆ ಬೀಳುತ್ತದೆ. ನನ್ನ ಮರಿಗಳನ್ನು ಯಾರೂ ಸಾಯಿಸಬಾರದೆಂದು ತಿಳಿಯುತ್ತದೆ.
ಇಲ್ಲಿಯೂ ಸಹ ಅನೇಕರಿದ್ದಾರೆ, ಕೆಲವರಿಗೆ ಪತಿ, ಮಕ್ಕಳು ಮೊದಲಾದವರಲ್ಲಿ ಬಹಳ ಮೋಹವಿರುತ್ತದೆ. ಈಗ
ಮಕ್ಕಳು ತಿಳಿದುಕೊಂಡಿದ್ದೀರಿ - ಸ್ವರ್ಗದ ಬಾಗಿಲು, ಕೃಷ್ಣನ ಬಾಗಿಲು ತೆರೆಯುತ್ತದೆ. ಕೃಷ್ಣನ
ಚಿತ್ರದಲ್ಲಿ ಬಹಳ ಸ್ಪಷ್ಟವಾಗಿ ಬರೆಯಲ್ಪಟ್ಟಿದೆ. ಈ ಯುದ್ಧದ ನಂತರ ಸ್ವರ್ಗದ ಬಾಗಿಲುಗಳು
ತೆರೆಯುತ್ತವೆ. ಅಲ್ಲಿ ಕೆಲವರೇ ಮನುಷ್ಯರಿರುತ್ತಾರೆ ಉಳಿದವರೆಲ್ಲರೂ ಮುಕ್ತಿಧಾಮಕ್ಕೆ ಹೊರಟು
ಹೋಗುತ್ತಾರೆ, ಬಹಳ ಶಿಕ್ಷೆಗಳನ್ನನುಭವಿಸಬೇಕಾಗುತ್ತದೆ. ಯಾವುದೆಲ್ಲಾ ಪಾಪ ಕರ್ಮಗಳನ್ನು
ಮಾಡಿದ್ದೀರೋ ಒಂದೊಂದು ಜನ್ಮದ ಪಾಪವನ್ನು ಸಾಕ್ಷಾತ್ಕಾರ ಮಾಡಿಸುತ್ತಾರೆ, ಶಿಕ್ಷೆಗಳನ್ನು
ಅನುಭವಿಸುತ್ತಾ ಇರುತ್ತೀರಿ. ನಂತರ ಬಹಳ ಕನಿಷ್ಠ ಪದವಿಯನ್ನು ಪಡೆಯುತ್ತೀರಿ. ನೆನಪಿನಲ್ಲಿರದೇ
ಇರುವ ಕಾರಣ ವಿಕರ್ಮ ವಿನಾಶವಾಗುವುದಿಲ್ಲ.
ಕೆಲವು ಮಕ್ಕಳು ಮುರುಳಿಯನ್ನೇ ತಪ್ಪಿಸಿ ಬಿಡುತ್ತಾರೆ. ಅನೇಕರು ಇದರಲ್ಲಿ
ನಿರ್ಲಕ್ಷ್ಯರಾಗಿರುತ್ತಾರೆ. ನಾವು ಓದಲಿಲ್ಲವೆಂದರೇನು, ನಾವಂತೂ ಪಾರಾಗಿ ಬಿಟ್ಟಿದ್ದೇವೆಂದು
ತಿಳಿಯುತ್ತಾರೆ. ಮುರುಳಿಯನ್ನು ನಿರ್ಲಕ್ಷ್ಯ ಮಾಡುತ್ತಾರೆ. ಇಂತಹ ದೇಹಾಭಿಮಾನಿಗಳು ಅನೇಕರಿದ್ದಾರೆ,
ಅವರು ತಮ್ಮದೇ ನಷ್ಟವನ್ನುಂಟು ಮಾಡಿಕೊಳ್ಳುತ್ತಾರೆ. ತಂದೆಗೆ ತಿಳಿದಿದೆ ಆದ್ದರಿಂದಲೇ ಇಲ್ಲಿ
ಬಂದಾಗಲೂ ಸಹ ಕೇಳುತ್ತೇನೆ, ಅನೇಕರು ಮುರುಳಿಯನ್ನು ಓದಿರುವುದೇ ಇಲ್ಲ. ಅದರಲ್ಲಿ ಯಾವ ಒಳ್ಳೆಯ
ಜ್ಞಾನದ ಅಂಶಗಳಿವೆಯೋ ಗೊತ್ತಿಲ್ಲ. ತಂದೆಯಿಂದ ಪ್ರತಿನಿತ್ಯವೂ ಒಳ್ಳೊಳ್ಳೆಯ ವಿಚಾರಗಳು
ಸಿಗುತ್ತಿರುತ್ತವೆ. ಹೀಗೂ ಅನೇಕರು ಸೇವಾಕೇಂದ್ರಗಳಿಗೆ ಬರುತ್ತಾರೆ ಆದರೆ ಧಾರಣೆಯೂ ಇಲ್ಲ, ಜ್ಞಾನವೂ
ಇಲ್ಲ. ಶ್ರೀಮತದನುಸಾರ ನಡೆಯಲಿಲ್ಲವೆಂದರೆ ಪದವಿಯು ಸಿಗುವುದೇ? ಸತ್ಯ ತಂದೆ, ಸತ್ಯ ಶಿಕ್ಷಕನ
ನಿಂದನೆ ಮಾಡಿಸುವುದರಿಂದ ಎಂದಿಗೂ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಆದರೆ ಎಲ್ಲರೂ
ರಾಜರಾಗುವುದಿಲ್ಲ, ಪ್ರಜೆಗಳೂ ಆಗುತ್ತಾರೆ. ನಂಬರ್ವಾರ್ ಪದವಿಗಳಿರುತ್ತವೆಯಲ್ಲವೆ. ಎಲ್ಲವೂ
ನೆನಪಿನ ಮೇಲೆ ಆಧಾರಿತವಾಗಿದೆ. ಯಾವ ತಂದೆಯಿಂದ ವಿಶ್ವದ ರಾಜ್ಯವು ಸಿಗುತ್ತದೆಯೋ ಅವರನ್ನೇ ನೆನಪು
ಮಾಡುವುದಿಲ್ಲ. ಅದೃಷ್ಟದಲ್ಲಿಲ್ಲವೆಂದರೆ ಪುರುಷಾರ್ಥವನ್ನೇನು ಮಾಡುತ್ತಾರೆ! ತಂದೆಯು
ತಿಳಿಸುತ್ತಾರೆ - ನೆನಪಿನ ಯಾತ್ರೆಯಿಂದಲೇ ಪಾಪಗಳು ಭಸ್ಮವಾಗುತ್ತವೆ ಅಂದಾಗ ಪುರುಷಾರ್ಥವನ್ನು
ಮಾಡಬೇಕಲ್ಲವೆ. ಆಹಾರ-ಪಾನೀಯಗಳನ್ನು ಸೇವಿಸಬೇಡಿ ಎಂದು ಹೇಳುವುದಿಲ್ಲ. ಇದೇನೂ ಹಠಯೋಗವಲ್ಲ.
ನಡೆಯುತ್ತಾ-ತಿರುಗಾಡುತ್ತಾ ಎಲ್ಲಾ ಕಾರ್ಯಗಳನ್ನು ಮಾಡುತ್ತಾ ಹೇಗೆ ಪ್ರಿಯತಮೆಯು ಪ್ರಿಯತಮನನ್ನು
ನೆನಪು ಮಾಡುವಳೋ ಅದೇರೀತಿ ನೆನಪಿನಲ್ಲಿರಿ. ಅವರಿಗೆ ನಾಮ-ರೂಪದ ಪ್ರೀತಿಯಿರುತ್ತದೆ. ಈ
ಲಕ್ಷ್ಮೀ-ನಾರಾಯಣರು ಹೇಗೆ ವಿಶ್ವದ ಮಾಲೀಕರಾದರು? ಇದು ಯಾರಿಗೂ ತಿಳಿದಿಲ್ಲ. ಇದು ನೆನ್ನೆಯ
ಮಾತಾಗಿದೆಯೆಂದು ನೀವು ಹೇಳುತ್ತೀರಿ. ದೇವತೆಗಳು ರಾಜ್ಯ ಮಾಡುತ್ತಿದ್ದರು. ಮನುಷ್ಯರು ಲಕ್ಷಾಂತರ
ವರ್ಷಗಳೆಂದು ಹೇಳಿ ಬಿಡುತ್ತಾರೆ. ಮಾಯೆಯು ಮನುಷ್ಯರನ್ನು ಕಲ್ಲು ಬುದ್ಧಿಯವರನ್ನಾಗಿ ಮಾಡಿದೆ.
ನೀವೀಗ ಕಲ್ಲು ಬುದ್ಧಿಯವರಿಂದ ಪಾರಸ ಬುದ್ಧಿಯವರಾಗುತ್ತಿದ್ದೀರಿ. ಪಾರಸನಾಥನ ಮಂದಿರವೂ ಇದೆ ಆದರೆ
ಅವರು ಯಾರೆಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಮನುಷ್ಯರು ಸಂಪೂರ್ಣ ಘೋರ ಅಂಧಕಾರದಲ್ಲಿದ್ದಾರೆ.
ಈಗ ತಂದೆಯು ಎಷ್ಟು ಒಳ್ಳೊಳ್ಳೆಯ ಮಾತುಗಳನ್ನು ತಿಳಿಸುತ್ತಾರೆ ಆದರೆ ಇವು ಕುಳಿತುಕೊಳ್ಳುವುದು
ಪ್ರತಿಯೊಬ್ಬರ ಬುದ್ಧಿಯ ಮೇಲೆ ಆಧಾರಿತವಾಗಿದೆ. ಓದಿಸುವವರು ಒಬ್ಬರೇ ಆಗಿದ್ದಾರೆ, ಓದುವವರು
ಅನೇಕರಾಗಿದ್ದಾರೆ. ಗಲ್ಲಿ-ಗಲ್ಲಿಯಲ್ಲಿ ನಿಮ್ಮ ಶಾಲೆಯು ತೆರೆಯುವುದು. ಗೇಟ್ ವೇ ಟು ಹೆವೆನ್. ನಾವು
ನರಕದಲ್ಲಿದ್ದೇವೆಂದು ತಿಳಿದುಕೊಂಡಿರುವ ಮನುಷ್ಯರು ಒಬ್ಬರೂ ಇಲ್ಲ. ತಂದೆಯು ತಿಳಿಸುತ್ತಾರೆ -
ಎಲ್ಲರೂ ಪೂಜಾರಿಗಳಾಗಿದ್ದಾರೆ, ಪೂಜ್ಯರು ಸತ್ಯಯುಗದಲ್ಲಿಯೇ ಇರುತ್ತಾರೆ. ಪೂಜಾರಿಗಳು
ಕಲಿಯುಗದಲ್ಲಿದ್ದಾರೆ. ಇದನ್ನು ಮನುಷ್ಯರು ಭಗವಂತನೇ ಪೂಜ್ಯ, ಭಗವಂತನೇ ಪೂಜಾರಿಯಾಗುತ್ತಾರೆಂದು
ತಿಳಿಯುತ್ತಾರೆ. ತಾವೇ ಭಗವಂತನಾಗಿದ್ದೀರಿ, ತಾವೇ ಇವೆಲ್ಲಾ ಆಟವನ್ನು ಮಾಡುತ್ತೀರಿ. ನೀವೂ ಭಗವಂತ,
ನಾವೂ ಭಗವಂತನೆಂದು ತಿಳಿಯುತ್ತಾರೆ. ಏನನ್ನೂ ತಿಳಿದುಕೊಂಡಿಲ್ಲ. ಇದು ರಾವಣ ರಾಜ್ಯವಾಗಿದೆ. ನೀವು
ಹೇಗಿದ್ದಿರಿ, ಈಗ ಏನಾಗುತ್ತೀರಿ! ಮಕ್ಕಳಿಗೆ ಬಹಳ ನಶೆಯಿರಬೇಕು. ತಂದೆಯು ಕೇವಲ ಇಷ್ಟನ್ನೇ
ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ನೀವು ಪುಣ್ಯಾತ್ಮರಾಗಿ ಬಿಡುತ್ತೀರಿ. ತಂದೆಯು
ಮಕ್ಕಳಿಗೆ ಪುಣ್ಯಾತ್ಮರಾಗುವ ಯುಕ್ತಿಯನ್ನು ತಿಳಿಸುತ್ತಾರೆ - ಮಕ್ಕಳೇ, ಈಗ ಹಳೆಯ ಪ್ರಪಂಚದ
ಅಂತಿಮವಾಗಿದೆ. ನಾನೀಗ ಡೈರೆಕ್ಟ್ ಬಂದಿದ್ದೇನೆ. ಇದು ಕೊನೆಯ ದಾನವಾಗಿದೆ ಆದ್ದರಿಂದ ಒಮ್ಮೆಲೆ
ಸಮರ್ಪಣೆಯಾಗಿ ಬಿಡಿ. ಬಾಬಾ ಇದೆಲ್ಲವೂ ತಮ್ಮದಾಗಿದೆ, ತಂದೆಯಂತೂ ನಿಮಗೆ ಕೊಡುವುದಕ್ಕಾಗಿಯೇ
ನಿಮ್ಮಿಂದ ಸಮರ್ಪಣೆ ಮಾಡಿಸುತ್ತಾರೆ. ನಿಮ್ಮದೇನಾದರೂ ಭವಿಷ್ಯಕ್ಕಾಗಿ ಪ್ರಾಲಬ್ಧವಾಗಬೇಕೆ?
ಮನುಷ್ಯರು ಈಶ್ವರಾರ್ಥವಾಗಿ ದಾನ-ಪುಣ್ಯವನ್ನು ಮಾಡುತ್ತಾರೆ. ಅದು ಪರೋಕ್ಷವಾಗಿದೆ. ಅದರ ಫಲವು
ಇನ್ನೊಂದು ಜನ್ಮದಲ್ಲಿ ಸಿಗುತ್ತದೆ. ಇದೂ ಸಹ ನಾಟಕದಲ್ಲಿ ನಿಗಧಿಯಾಗಿದೆ. ಈಗಂತೂ ನಾನು
ಪ್ರತ್ಯಕ್ಷದಲ್ಲಿದ್ದೇನೆ. ಈಗ ನೀವೇನನ್ನು ಮಾಡುತ್ತೀರೋ ಅದಕ್ಕೆ ಪ್ರತಿಯಾಗಿ ಪದಮ ಗುಣದಷ್ಟು
ಸಿಗುವುದು. ಸತ್ಯಯುಗದಲ್ಲಿ ದಾನ-ಪುಣ್ಯ ಮೊದಲಾದವುಗಳ ಮಾತಿಲ್ಲ. ಇಲ್ಲಿ ಯಾರ ಬಳಿಯಾದರೂ ಹಣವಿದ್ದರೆ
ಹೋಗಿ ಸೇವಾಕೇಂದ್ರಗಳನ್ನು ತೆರೆಯಿರಿ, ಪ್ರದರ್ಶನಿಯನ್ನಿಡಿ ಎಂದು ತಂದೆಯು ತಿಳಿಸುತ್ತಾರೆ.
ಬಡವರಾಗಿದ್ದರೆ ತಮ್ಮ ಮನೆಯಲ್ಲಿಯೇ ಕೇವಲ ಗೇಟ್ ವೇ ಟು ಹೆವೆನ್ ಎಂಬ ಬೋರ್ಡನ್ನು ಹಾಕಿರಿ ಎಂದು
ಹೇಳುತ್ತಾರೆ. ಸ್ವರ್ಗ ಮತ್ತು ನರಕವಿದೆಯಲ್ಲವೆ. ನಾವೀಗ ನರಕವಾಸಿಗಳಾಗಿದ್ದೇವೆ ಎಂಬುದನ್ನೂ ಸಹ
ಯಾರೂ ತಿಳಿದುಕೊಳ್ಳುವುದಿಲ್ಲ. ಒಂದುವೇಳೆ ಅವರು ಸ್ವರ್ಗಕ್ಕೆ ಹೋಗಿದ್ದರೆ ಮತ್ತೆ ಅವರನ್ನು
ನರಕದಲ್ಲೇಕೆ ಕರೆಯುತ್ತೀರಿ. ಸ್ವರ್ಗದಲ್ಲಿ ಯಾರೂ ಸಹ ಸ್ವರ್ಗಸ್ಥರಾದರೆಂದು ಹೇಳುತ್ತಿರಲಿಲ್ಲ.
ಅವರಿರುವುದೇ ಸ್ವರ್ಗದಲ್ಲಿ ಅಂದಾಗ ಪುನರ್ಜನ್ಮವೂ ಸಹ ಸ್ವರ್ಗದಲ್ಲಿಯೇ ಸಿಗುತ್ತದೆ, ಇಲ್ಲಿ
ಪುನರ್ಜನ್ಮವು ನರಕದಲ್ಲಿಯೇ ಸಿಗುತ್ತದೆ. ಈ ಮಾತುಗಳನ್ನೂ ಸಹ ನೀವು ತಿಳಿಸಬಹುದು. ಭಗವಾನುವಾಚ -
ನನ್ನೊಬ್ಬನನ್ನೇ ನೆನಪು ಮಾಡಿ ಏಕೆಂದರೆ ನಾನೇ ಪತಿತ-ಪಾವನನಾಗಿದ್ದೇನೆ, ನನ್ನನ್ನು ನೆನಪು
ಮಾಡುವುದರಿಂದ ನೀವು ಪೂಜಾರಿಗಳಿಂದ ಪೂಜ್ಯರಾಗಿ ಬಿಡುತ್ತೀರಿ. ಭಲೆ ಸ್ವರ್ಗದಲ್ಲಿ ಎಲ್ಲರೂ
ಸುಖಿಯಾಗಿರುತ್ತಾರೆ ಆದರೆ ಪದವಿಯಲ್ಲಿ ಅಂತರವಿರುತ್ತದೆ. ಬಹಳ ಉನ್ನತವಾದ ಗುರಿಯಾಗಿದೆ.
ಕುಮಾರಿಯರಿಗಂತೂ ಸರ್ವೀಸಿನ ಬಹಳ ಉಮ್ಮಂಗ ಬರಬೇಕು. ನಾವು ಭಾರತವನ್ನು ಸ್ವರ್ಗವನ್ನಾಗಿ ಮಾಡಿ
ತೋರಿಸುತ್ತೇವೆ. ಯಾರು 21 ಕುಲದ ಉದ್ಧಾರ ಮಾಡುವರೋ ಅರ್ಥಾತ್ 21 ಜನ್ಮಗಳಿಗಾಗಿ ಉದ್ಧಾರ ಮಾಡಬಲ್ಲರೋ
ಅವರೇ ಕುಮಾರಿಯಾಗಿದ್ದಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಈ ಹಳೆಯ
ಪ್ರಪಂಚದ ಅಂತ್ಯವಾಗಿದೆ, ತಂದೆಯು ಡೈರೆಕ್ಟ್ ಬಂದಿದ್ದಾರೆ ಅಂದಮೇಲೆ ಒಮ್ಮೆಲೆ ಸಮರ್ಪಣೆಯಾಗಿ
ಬಿಡಬೇಕಾಗಿದೆ. ಬಾಬಾ ಇದೆಲ್ಲವೂ ತಮ್ಮದೇ ಆಗಿದೆ.... ಈ ಯುಕ್ತಿಯಿಂದ ಪುಣ್ಯಾತ್ಮರಾಗಿ ಬಿಡುತ್ತೀರಿ.
2. ಮುರುಳಿಯನ್ನೆಂದೂ
ತಪ್ಪಿಸಬಾರದು, ಮುರುಳಿಯಲ್ಲಿ ನಿರ್ಲಕ್ಷ್ಯವಿರಬಾರದು. ನಾವು ಓದಲಿಲ್ಲವೆಂದರೆ ಏನಾಯಿತು, ನಾವಂತೂ
ಪಾರಾಗಿ ಬಿಟ್ಟಿದ್ದೇವೆಂದಲ್ಲ - ಇದು ದೇಹಾಭಿಮಾನವಾಗಿದೆ. ಮುರುಳಿಯನ್ನು ಅವಶ್ಯವಾಗಿ ಓದಬೇಕಾಗಿದೆ.
ವರದಾನ:
ನಿಶ್ಚಯದ ಆಧಾರದ
ಮೇಲೆ ವಿಜಯಿ ರತ್ನ ಆಗಿ ಸರ್ವರ ಪ್ರತಿ ಮಾಸ್ಟರ್ ಆಶ್ರಯದಾತ ಭವ.
ನಿಶ್ಚಯ ಬುದ್ಧಿ ಮಕ್ಕಳು
ವಿಜಯಿಯಾಗಿರುವ ಕಾರಣ ಸದಾ ಖುಶಿಯಲ್ಲಿ ನಾಟ್ಯವಾಡುತ್ತಾರೆ. ಅವರು ತಮ್ಮ ವಿಜಯದ ವರ್ಣನೆ
ಮಾಡುವುದಿಲ್ಲ ಆದರೆ ವಿಜಯಿಯಾದ ಕಾರಣ ಅವರು ಬೇರೆಯವರಿಗೂ ಸಹ ಸಾಹಸವನ್ನು ಹೆಚ್ಚಿಸುತ್ತಾರೆ.
ಯಾರನ್ನೂ ಕೆಳಗೆ ಬೀಳಿಸುವಂತಹ ಕೆಲಸ ಮಾಡುವುದಿಲ್ಲ. ಆದರೆ ತಂದೆ ಸಮಾನ ಮಾಸ್ಟರ್
ಆಶ್ರಯದಾತರಾಗುತ್ತಾರೆ ಅರ್ಥಾತ್ ಕೆಳಗೆ ಬಿದ್ದಿರುವವರನ್ನು ಮೇಲೆ ಎತ್ತುತ್ತಾರೆ. ವ್ಯರ್ಥದಿಂದ ಸದಾ
ದೂರವಿರುತ್ತಾರೆ. ವ್ಯರ್ಥದಿಂದ ದೂರ ಸರಿಯುವುದೇ ವಿಜಯಿಗಳಾಗುವುದಾಗಿದೆ. ಈ ರೀತಿಯ ವಿಜಯಿ ಮಕ್ಕಳು
ಸರ್ವರಿಗೂ ಮಾಸ್ಟರ್ ಆಶ್ರಯದಾತರಾಗಿ ಬಿಡುತ್ತಾರೆ.
ಸ್ಲೋಗನ್:
ನಿಸ್ವಾರ್ಥ ಮತ್ತು
ನಿರ್ವಿಕಲ್ಪ ಸ್ಥಿತಿಯಿಂದ ಸೇವೆ ಮಾಡುವಂತಹವರೇ ಸಫಲತಾ ಮೂರ್ತಿಗಳು.