09.07.20 Morning Kannada Murli Om Shanti
BapDada Madhuban
ಮಧುರ ಮಕ್ಕಳೇ - ಸಮಯವು
ಸಿಕ್ಕಿದರೆ ಏಕಾಂತದಲ್ಲಿ ವಿಚಾರ ಸಾಗರ ಮಂಥನ ಮಾಡಿ, ಯಾವ ಜ್ಞಾನ ಬಿಂದುಗಳನ್ನು ಕೇಳುತ್ತೀರೋ
ಅದನ್ನು ರಿವೈಜ್ ಮಾಡಿಕೊಳ್ಳಿ.
ಪ್ರಶ್ನೆ:
ನಿಮ್ಮ ನೆನಪಿನ
ಯಾತ್ರೆಯು ಯಾವಾಗ ಪೂರ್ಣವಾಗುವುದು?
ಉತ್ತರ:
ಯಾವಾಗ ನಿಮ್ಮ ಯಾವುದೇ ಕರ್ಮೇಂದ್ರಿಯಗಳು ಮೋಸ ಮಾಡುವುದಿಲ್ಲವೋ ಕರ್ಮಾತೀತ ಸ್ಥಿತಿಯಾಗುವುದೋ ಆಗ
ನೆನಪಿನ ಯಾತ್ರೆಯು ಮುಕ್ತಾಯವಾಗುವುದು. ನೀವೀಗ ಸಂಪೂರ್ಣ ಪುರುಷಾರ್ಥ ಮಾಡಬೇಕು,
ನಿರಾಶಾವಾಧಿಗಳಾಗಬಾರದು, ಸರ್ವೀಸಿನಲ್ಲಿ ತತ್ಪರರಾಗಿರಬೇಕಾಗಿದೆ.
ಓಂ ಶಾಂತಿ.
ಮಧುರಾತಿ ಮಧುರ ಮಕ್ಕಳೇ ಆತ್ಮಾಭಿಮಾನಿಗಳಾಗಿ ಕುಳಿತುಕೊಂಡಿದ್ದೀರಾ? ಮಕ್ಕಳು ತಿಳಿಯುತ್ತಾರೆ -
ಅರ್ಧಕಲ್ಪ ನಾವು ದೇಹಾಭಿಮಾನಿಗಳಾಗಿದ್ದೆವು, ಈಗ ದೇಹೀ-ಅಭಿಮಾನಿಯಾಗಿರಲು ಪರಿಶ್ರಮ ಪಡಬೇಕಾಗುತ್ತದೆ.
ತಂದೆಯು ಬಂದು ತಿಳಿಸುತ್ತಾರೆ - ತಮ್ಮನ್ನು ಆತ್ಮವೆಂದು ತಿಳಿದು ಕುಳಿತುಕೊಳ್ಳಿ, ಆಗಲೇ ತಂದೆಯ
ನೆನಪು ಬರುವುದು. ಇಲ್ಲದಿದ್ದರೆ ಮರೆತು ಹೋಗುತ್ತೀರಿ. ನೆನಪೇ ಮಾಡದಿದ್ದರೆ ಯಾತ್ರೆಯನ್ನು ಹೇಗೆ
ಮಾಡುವಿರಿ! ಪಾಪಗಳು ಹೇಗೆ ಕಳೆಯುತ್ತವೆ! ಇನ್ನೂ ನಷ್ಟವುಂಟಾಗುವುದು. ಇದು ಮುಖ್ಯ ಮಾತಾಗಿದೆ.
ಇದನ್ನು ಪದೇ-ಪದೇ ನೆನಪು ಮಾಡಿಕೊಳ್ಳಿ, ಉಳಿದಂತೆ ತಂದೆಯು ಅನೇಕ ಪ್ರಕಾರದ ಯುಕ್ತಿಗಳನ್ನು
ತಿಳಿಸುತ್ತಾರೆ. ಸರಿ ಯಾವುದು, ತಪ್ಪು ಯಾವುದು ಎಂಬುದನ್ನೂ ತಿಳಿಸುತ್ತಾರೆ. ತಂದೆಯಂತೂ ಜ್ಞಾನ
ಸಾಗರನಾಗಿದ್ದಾರೆ. ಭಕ್ತಿಯು ಗೊತ್ತಿದೆ, ಮಕ್ಕಳು ಭಕ್ತಿಯಲ್ಲಿ ಏನೇನು ಮಾಡಬೇಕಾಗುತ್ತದೆ. ಈ ಯಜ್ಞ,
ತಪ ಇತ್ಯಾದಿಗಳನ್ನು ಮಾಡುವುದೆಲ್ಲವೂ ಭಕ್ತಿಮಾರ್ಗವೆಂದು ತಿಳಿಸುತ್ತಾರೆ. ಭಲೆ ಅಲ್ಲಿ ತಂದೆಯ
ಮಹಿಮೆ ಮಾಡುತ್ತಾರೆ ಆದರೆ ಉಲ್ಟಾ. ವಾಸ್ತವದಲ್ಲಿ ಕೃಷ್ಣನ ಮಹಿಮೆಯನ್ನೂ ಸಹ ಪೂರ್ಣವಾಗಿ
ಅರಿತುಕೊಂಡಿಲ್ಲ. ಪ್ರತಿಯೊಂದು ಮಾತನ್ನು ತಿಳಿದುಕೊಳ್ಳಬೇಕಲ್ಲವೆ. ಹೇಗೆ ಕೃಷ್ಣನನ್ನು
ವೈಕುಂಠನಾಥನೆಂದು ಹೇಳಲಾಗುತ್ತದೆ, ಇದಕ್ಕೆ ತಂದೆಯು ಕೇಳುತ್ತಾರೆ - ಮಕ್ಕಳೇ, ಕೃಷ್ಣನಿಗೆ
ತ್ರಿಲೋಕಿನಾಥನೆಂದು ಹೇಳಲಾಗುತ್ತದೆಯೇ? ತ್ರಿಲೋಕಿನಾಥನೆಂದು ಗಾಯನ ಮಾಡುತ್ತಾರಲ್ಲವೆ.
ತ್ರಿಲೋಕಿನಾಥ ಅರ್ಥಾತ್ ಮೂರು ಲೋಕ ಮೂಲವತನ, ಸೂಕ್ಷ್ಮವತನ, ಸ್ಥೂಲವತನ. ನೀವು ಮಕ್ಕಳಿಗೆ
ತಿಳಿಸಲಾಗಿದೆ - ನೀವು ಬ್ರಹ್ಮಾಂಡಕ್ಕೂ ಮಾಲೀಕರಾಗಿದ್ದೀರಿ. ನಾನು ಬ್ರಹ್ಮಾಂಡದ ಮಾಲೀಕನೆಂದು
ಕೃಷ್ಣನು ತಿಳಿದುಕೊಂಡಿರುವನೇ? ಇಲ್ಲ. ಕೃಷ್ಣನಂತೂ ವೈಕುಂಠದಲ್ಲಿದ್ದನು. ಸ್ವರ್ಗದ ಹೊಸ
ಪ್ರಪಂಚಕ್ಕೆ ವೈಕುಂಠವೆಂದು ಹೇಳಲಾಗುತ್ತದೆ ಅಂದಾಗ ವಾಸ್ತವದಲ್ಲಿ ತ್ರಿಲೋಕಿನಾಥರು ಯಾರೂ ಇಲ್ಲ.
ತಂದೆಯು ಸತ್ಯ ಮಾತುಗಳನ್ನು ತಿಳಿಸುತ್ತಾರೆ – ಮೂರೂ ಲೋಕಗಳಂತೂ ಇದೆ, ಬ್ರಹ್ಮಾಂಡದ ಮಾಲೀಕರು ಶಿವ
ತಂದೆಯಾಗಿದ್ದಾರೆ, ನೀವೂ ಆಗಿದ್ದೀರಿ. ಸೂಕ್ಷ್ಮವತನದ ಮಾತಂತೂ ಇಲ್ಲ. ಸ್ಥೂಲ ವತನದಲ್ಲಿ ಅವರು
ಮಾಲೀಕರಲ್ಲ. ಸ್ವರ್ಗಕ್ಕಾಗಲಿ, ನರಕದ ಮಾಲೀಕರೂ ಅಲ್ಲ, ಕೃಷ್ಣನು ಸ್ವರ್ಗದ ಮಾಲೀಕನಾಗಿದ್ದಾನೆ.
ನರಕದ ಮಾಲೀಕನು ರಾವಣನಾಗಿದ್ದಾನೆ. ಇದಕ್ಕೆ ರಾವಣ ರಾಜ್ಯ, ಆಸುರೀ ರಾಜ್ಯವೆಂದು ಹೇಳಲಾಗುತ್ತದೆ. ಈ
ಮಾತನ್ನು ಮನುಷ್ಯರೂ ಹೇಳುತ್ತಾರೆ ಆದರೆ ತಿಳಿದುಕೊಂಡಿಲ್ಲ. ನೀವು ಮಕ್ಕಳಿಗೆ ತಂದೆಯು
ತಿಳಿಸುತ್ತಾರೆ - ರಾವಣನಿಗೆ 10 ತಲೆಗಳನ್ನು ತೋರಿಸುತ್ತಾರೆ. ಸ್ತ್ರೀಯ ಐದು ವಿಕಾರಗಳು, ಪುರುಷನದು
ಐದು ವಿಕಾರಗಳು. ಐದು ವಿಕಾರಗಳಂತೂ ಈಗ ಎಲ್ಲರಲ್ಲಿಯೂ ಇದೆ, ಎಲ್ಲರೂ ರಾವಣ ರಾಜ್ಯದಲ್ಲಿದ್ದಾರೆ.
ನೀವೀಗ ಶ್ರೇಷ್ಠಾಚಾರಿಗಳಾಗುತ್ತಿದ್ದೀರಿ. ತಂದೆಯು ಬಂದು ಶ್ರೇಷ್ಠಾಚಾರಿ ಪ್ರಪಂಚವನ್ನು ಸ್ಥಾಪನೆ
ಮಾಡುತ್ತಾರೆ. ಏಕಾಂತದಲ್ಲಿ ಕುಳಿತುಕೊಂಡಾಗ ಈ ರೀತಿಯ ವಿಚಾರ ಸಾಗರ ಮಂಥನ ನಡೆಯುವುದು. ಆ ಲೌಕಿಕ
ವಿದ್ಯೆಗಾಗಿಯೂ ಸಹ ವಿದ್ಯಾರ್ಥಿಗಳು ಏಕಾಂತದಲ್ಲಿ ಕುಳಿತು ಓದುತ್ತಾರೆ. ನಿಮಗೆ ಯಾವುದೇ
ಪುಸ್ತಕಗಳನ್ನಂತೂ ಓದುವ ಅವಶ್ಯಕತೆಯಿಲ್ಲ. ಹಾ! ನೀವು ಜ್ಞಾನ ಬಿಂದುಗಳನ್ನು ಬರೆದುಕೊಳ್ಳುತ್ತೀರಿ.
ಕೇವಲ ಇದನ್ನು ರಿವೈಜ್ ಮಾಡಿಕೊಳ್ಳಬೇಕು, ಇವು ತಿಳಿದುಕೊಳ್ಳುವ ಗುಹ್ಯ ಮಾತುಗಳಾಗಿವೆ. ತಂದೆಯು
ತಿಳಿಸುತ್ತಾರಲ್ಲವೆ - ಇಂದು ನಿಮಗೆ ಅತಿ ಗುಹ್ಯವಾದ ಹೊಸ-ಹೊಸ ವಿಚಾರಗಳನ್ನು ತಿಳಿಸುತ್ತೇನೆ.
ಲಕ್ಷ್ಮೀ-ನಾರಾಯಣರು ಪಾರಸ ಪುರಿಯ ಮಾಲೀಕರಾಗಿದ್ದಾರೆ. ವಿಷ್ಣುವು ಪಾರಸ ಪುರಿಯ ಮಾಲೀಕನೆಂದು
ಹೇಳುವುದಿಲ್ಲ. ವಿಷ್ಣುವೇ ಲಕ್ಷ್ಮೀ-ನಾರಾಯಣರೆಂಬುದನ್ನೂ ಸಹ ತಿಳಿದುಕೊಂಡಿಲ್ಲ. ಈಗ ನೀವು ಸಾರ
ರೂಪದಲ್ಲಿ ಗುರಿ-ಧ್ಯೇಯವನ್ನು ತಿಳಿಸಿಕೊಡುತ್ತೀರಿ. ಬ್ರಹ್ಮ-ಸರಸ್ವತಿಯೂ ಸಹ ಪರಸ್ಪರ ದಂಪತಿಗಳಲ್ಲ.
ಇವರಂತೂ ಪ್ರಜಾಪಿತ ಬ್ರಹ್ಮನಲ್ಲವೆ ಅಂದಾಗ ಪ್ರಜಾಪಿತ ಬ್ರಹ್ಮನಿಗೆ ಗ್ರೇಟ್ ಗ್ರೇಟ್ ಗ್ರಾಂಡ್
ಫಾದರ್ ಎಂದು ಹೇಳಬಹುದು. ಶಿವ ತಂದೆಗಂತೂ ಕೇವಲ ತಂದೆಯೆಂದು ಹೇಳುತ್ತಾರೆ. ಉಳಿದೆಲ್ಲರೂ
ಸಹೋದರರಾಗಿದ್ದಾರೆ. ಇಷ್ಟೊಂದು ಮಂದಿ ಬ್ರಹ್ಮನ ಮಕ್ಕಳಿದ್ದಾರೆ. ನಾವು ಭಗವಂತನ ಮಕ್ಕಳು
ಸಹೋದರರೆಂದು ಎಲ್ಲರಿಗೂ ತಿಳಿದಿದೆ. ಆದರೆ ಅವರು ನಿರಾಕಾರಿ ಪ್ರಪಂಚದಲ್ಲಿ ಮಾತ್ರ. ನೀವೀಗ
ಬ್ರಾಹ್ಮಣರಾಗಿದ್ದೀರಿ, ಹೊಸ ಪ್ರಪಂಚವೆಂದು ಸತ್ಯಯುಗಕ್ಕೆ ಹೇಳಲಾಗುತ್ತದೆ. ಈಗಿನ ಸಮಯಕ್ಕೆ
ಪುರುಷೋತ್ತಮ ಸಂಗಮಯುಗವೆಂದು ಕರೆಯಲಾಗುತ್ತದೆ. ಸತ್ಯಯುಗದಲ್ಲಿ ಪುರುಷೋತ್ತಮರೇ ಇರುತ್ತಾರೆ, ಇವು
ಬಹಳ ಅದ್ಭುತವಾದ ಮಾತುಗಳಾಗಿವೆ. ನೀವು ಹೊಸ ಪ್ರಪಂಚಕ್ಕಾಗಿ ತಯಾರಾಗುತ್ತಿದ್ದೀರಿ. ಈ ಸಮಯದಲ್ಲಿಯೇ
ನೀವು ಪುರುಷೋತ್ತಮರಾಗುತ್ತೀರಿ. ನಾವು ಲಕ್ಷ್ಮೀ-ನಾರಾಯಣರಾಗುತ್ತೇವೆಂದು ಹೇಳುತ್ತಾರೆ. ಇವರು
ಎಲ್ಲರಿಗಿಂತ ಉತ್ತಮ ಪುರುಷರಾಗಿದ್ದಾರೆ, ಅವರನ್ನು ದೇವತೆಗಳೆಂದು ಹೇಳಲಾಗುತ್ತದೆ. ಉತ್ತಮರಿಗಿಂತಲೂ
ಉತ್ತಮರು ನಂಬರ್ವನ್ ಲಕ್ಷ್ಮೀ-ನಾರಾಯಣರಾಗಿದ್ದಾರೆ ಮತ್ತೆ ನೀವು ಮಕ್ಕಳು ನಂಬರ್ವಾರ್ ಆಗುತ್ತೀರಿ.
ಸೂರ್ಯವಂಶಿ ಮನೆತನದವರಿಗೆ ಉತ್ತಮರೆಂದು ಹೇಳುತ್ತಾರೆ. ನಂಬರ್ವನ್ ಅಲ್ಲವೆ. ನಿಧಾನ-ನಿಧಾನವಾಗಿ
ಕಲೆಗಳು ಕಡಿಮೆಯಾಗುತ್ತದೆ.
ನೀವು ಮಕ್ಕಳೀಗ ಹೊಸ ಪ್ರಪಂಚದ ಮುಹೂರ್ತಮಾಡುತ್ತೀರಿ. ಹೇಗೆ ಹೊಸ ಮನೆಯು ತಯಾರಾದಾಗ ಮಕ್ಕಳು
ಖುಷಿಯಾಗುತ್ತಾರೆ, ಮುಹೂರ್ತ ಮಾಡುತ್ತಾರೆ. ನೀವು ಮಕ್ಕಳೂ ಸಹ ಹೊಸ ಪ್ರಪಂಚವನ್ನು ನೋಡಿ
ಖುಷಿಯಾಗುತ್ತೀರಿ, ಮುಹೂರ್ತ ಮಾಡುತ್ತೀರಿ. ಚಿನ್ನದ ಪುಷ್ಫಗಳ ಮಳೆಯಾಗುತ್ತದೆ ಎಂದು
ಬರೆಯಲ್ಪಟ್ಟಿದೆ. ನೀವು ಮಕ್ಕಳಿಗೆ ಖುಷಿಯ ನಶೆಯೇರಬೇಕು! ನಿಮಗೆ ಸುಖ ಮತ್ತು ಶಾಂತಿ ಎರಡೂ
ಸಿಗುತ್ತದೆ, ಇಷ್ಟೊಂದು ಸುಖ ಮತ್ತು ಶಾಂತಿ ಪಡೆಯುವವರು ಬೇರೆ ಯಾರೂ ಇಲ್ಲ. ಅನ್ಯ ಧರ್ಮದವರು
ಬರುತ್ತಾರೆಂದರೆ ಆಗ ದ್ವೈತವಾಗಿ ಬಿಡುತ್ತದೆ. ನಾವು ಪುರುಷಾರ್ಥ ಮಾಡಿ ಶ್ರೇಷ್ಠ ಪದವಿಯನ್ನು
ಪಡೆಯಬೇಕೆಂದು ನೀವು ಮಕ್ಕಳಿಗೆ ಅಪಾರ ಖುಷಿಯಿದೆ. ಅದೃಷ್ಟದಲ್ಲಿದ್ದರೆ ಸಿಗುವುದು,
ತೇರ್ಗಡೆಯಾಗುವುದಿದ್ದರೆ ಆಗುತ್ತೇವೆ ಎಂದಲ್ಲ. ಪ್ರತಿಯೊಂದು ಮಾತಿನಲ್ಲಿ ಅವಶ್ಯವಾಗಿ ಪುರುಷಾರ್ಥ
ಮಾಡಬೇಕು. ಪುರುಷಾರ್ಥವನ್ನು ಮಾಡದೇ ಇದ್ದರೆ ಅದೃಷ್ಟದಲ್ಲಿ ಏನಿರುವುದೋ ಅದಾಗುವುದೆಂದು
ಹೇಳುತ್ತಾರೆ ನಂತರ ಪುರುಷಾರ್ಥ ಮಾಡುವುದೇ ನಿಂತು ಹೋಗುತ್ತದೆ. ತಂದೆಯು ತಿಳಿಸುತ್ತಾರೆ - ನೀವು
ಮಾತೆಯರನ್ನು ಎಷ್ಟು ಶ್ರೇಷ್ಠರನ್ನಾಗಿ ಮಾಡುತ್ತೇನೆ, ಎಲ್ಲಾ ಸ್ಥಾನಗಳಲ್ಲಿ ಮಹಿಳೆಯರಿಗೆ
ಸ್ಥಾನವಿದೆ, ವಿದೇಶದಲ್ಲಿಯೂ ಗೌರವವಿದೆ. ಇಲ್ಲಂತೂ ಹೆಣ್ಣು ಮಗುವಿಗೆ ಜನ್ಮ ಕೊಡುತ್ತಾರೆಂದರೆ
ಮಂಚವನ್ನು ತಲೆ ಕೆಳಕು ಮಾಡಿ ಬಿಡುತ್ತಾರೆ, ಪ್ರಪಂಚವೇ ಕೊಳಕಾಗಿದೆ. ಈ ಸಮಯದಲ್ಲಿ ನೀವು ಮಕ್ಕಳು
ತಿಳಿದುಕೊಂಡಿದ್ದೀರಿ - ಭಾರತವು ಹೇಗಿತ್ತು, ಈಗ ಏನಾಗಿದೆ. ಮನುಷ್ಯರು ಎಲ್ಲವನ್ನೂ ಮರೆತು
ಬಿಟ್ಟಿದ್ದಾರೆ, ಕೇವಲ ಶಾಂತಿ-ಶಾಂತಿ ಎಂದು ಬೇಡುತ್ತಿರುತ್ತಾರೆ. ವಿಶ್ವದಲ್ಲಿ ಶಾಂತಿಯು ಬೇಕೆಂದು
ಬಯಸುತ್ತಾರೆ. ನೀವು ಈ ಲಕ್ಷ್ಮೀ-ನಾರಾಯಣರನ್ನು ತೋರಿಸಿ, ಇವರ ರಾಜ್ಯವಿದ್ದಾಗ ಪವಿತ್ರತೆ,
ಸುಖ-ಶಾಂತಿಯು ಇತ್ತು. ನಿಮಗೆ ಇಂತಹ ರಾಜ್ಯವು ಬೇಕಲ್ಲವೆ. ಮೂಲವತನದಲ್ಲಂತೂ ವಿಶ್ವ ಶಾಂತಿಯು
ಬೇಕೆಂದು ಹೇಳುವುದಿಲ್ಲ. ವಿಶ್ವ ಶಾಂತಿಯು ಇಲ್ಲಿಯೇ ಬೇಕಲ್ಲವೆ. ದೇವತೆಗಳ ರಾಜ್ಯವು ಇಡೀ
ವಿಶ್ವದಲ್ಲಿತ್ತು, ಮೂಲವತನವು ಆತ್ಮಗಳ ಪ್ರಪಂಚವಾಗಿತ್ತು. ಆತ್ಮಗಳ ಪ್ರಪಂಚವು ಇದೆಯೆಂಬುದನ್ನು
ಮನುಷ್ಯರು ತಿಳಿದುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ - ನಾನು ನಿಮ್ಮನ್ನು ಶ್ರೇಷ್ಠ
ಪುರುಷೋತ್ತಮರನ್ನಾಗಿ ಮಾಡುತ್ತೇನೆ, ಇದು ತಿಳಿದುಕೊಳ್ಳುವ ಮಾತುಗಳಾಗಿವೆ. ಭಗವಂತನು
ಬಂದಿದ್ದಾರೆಂದು ಡಂಗುರವನ್ನು ಸಾರುವುದಲ್ಲ, ಇದನ್ನು ಯಾರೂ ಒಪ್ಪುವುದಿಲ್ಲ. ಹೀಗೆ ಮಾಡಿದರೆ ಇನ್ನೂ
ನಿಂದನೆಗೊಳಗಾಗುವಿರಿ ಮತ್ತು ನಿಂದನೆ ಮಾಡಿಸುವಿರಿ. ಈ ಬಿ.ಕೆ.ಗಳು ತಮ್ಮ ಬಾಬಾರವರನ್ನು
ಭಗವಂತನೆಂದು ಹೇಳುತ್ತಾರೆಂದು ಹೇಳಿ ಬಿಡುತ್ತಾರೆ. ಈ ರೀತಿಯಲ್ಲಿ ಸರ್ವೀಸ್ ಆಗುವುದಿಲ್ಲ. ತಂದೆಯು
ಯುಕ್ತಿಯನ್ನು ತಿಳಿಸುತ್ತಿರುತ್ತಾರೆ. ಕೋಣೆಯಲ್ಲಿ 8-10 ಚಿತ್ರಗಳನ್ನು ಗೋಡೆಗೆ ಬಹಳ ಚೆನ್ನಾಗಿ
ತಗುಲಿ ಹಾಕಿರಿ ಮತ್ತು ಹೊರಗೆ ಬರೆಯಿರಿ - ಬೇಹದ್ದಿನ ತಂದೆಯಿಂದ ಬೇಹದ್ದಿನ ಸುಖದ ಆಸ್ತಿಯನ್ನು
ಪಡೆಯಬೇಕೋ ಅಥವಾ ಮನುಷ್ಯರಿಂದ ದೇವತೆಗಳಾಗಲು ಬನ್ನಿ, ನಾವು ಅದನ್ನು ತಿಳಿಸುತ್ತೇವೆ. ಹೀಗೆ ಅನೇಕರು
ಬರತೊಡಗುತ್ತಾರೆ, ತಾವಾಗಿಯೇ ಬರುತ್ತಾರೆ. ವಿಶ್ವದಲ್ಲಿ ಶಾಂತಿಯಂತೂ ಇತ್ತಲ್ಲವೆ. ಈಗ ಎಷ್ಟೊಂದು
ಧರ್ಮಗಳಿವೆ, ತಮೋಪ್ರಧಾನ ಪ್ರಪಂಚದಲ್ಲಿ ಶಾಂತಿ ಸ್ಥಾಪನೆಯಾಗಲು ಹೇಗೆ ಸಾಧ್ಯ? ವಿಶ್ವ ಶಾಂತಿಯನ್ನು
ಭಗವಂತನೇ ಸ್ಥಾಪಿಸಲು ಸಾಧ್ಯ. ಶಿವ ತಂದೆಯು ಬರುತ್ತಾರೆಂದರೆ ಏನನ್ನಾದರೂ ಉಡುಗೊರೆಯನ್ನು
ತರುತ್ತಾರಲ್ಲವೆ. ಒಬ್ಬರೇ ತಂದೆಯಾಗಿದ್ದಾರೆ, ಅವರು ಬಹಳ ದೂರದಿಂದ ಬರುತ್ತಾರೆ ಮತ್ತು ಒಂದೇ ಬಾರಿ
ಬರುತ್ತಾರೆ. ಇಷ್ಟು ದೊಡ್ಡ ತಂದೆಯು 5000 ವರ್ಷಗಳ ನಂತರ ಬರುತ್ತಾರೆ. ಯಾತ್ರೆಯಿಂದ
ಹಿಂದಿರುಗುವಾಗ ಮಕ್ಕಳಿಗಾಗಿ ಉಡುಗೊರೆಯನ್ನು ತೆಗೆದುಕೊಂಡು ಬರುತ್ತಾರಲ್ಲವೆ. ಸ್ತ್ರೀಗೆ ಪತಿಯು,
ಮಕ್ಕಳಿಗೆ ತಂದೆಯಂತೂ ಆಗುತ್ತಾರಲ್ಲವೆ. ನಂತರ ತಾತ, ಮುತ್ತಾತನಾಗುತ್ತಾರೆ. ಇವರಿಗೆ ನೀವು
ತಂದೆಯೆಂದು ಹೇಳುತ್ತೀರಿ ಮತ್ತೆ ತಾತನೂ ಆಗುವರು. ಗ್ರೇಟ್ ಗ್ರೇಟ್ ಗ್ರಾಂಡ್ ಫಾದರ್ ಆಗುವರು,
ವಂಶಾವಳಿಯಲ್ಲವೆ. ಆಡಂ ಆದಿ ದೇವನೆಂದು ಹೆಸರಿದೆ ಆದರೆ ಮನುಷ್ಯರು ತಿಳಿದುಕೊಂಡಿಲ್ಲ. ನೀವು
ಮಕ್ಕಳಿಗೆ ತಂದೆಯು ತಿಳಿಸುತ್ತಾರೆ - ತಂದೆಯ ಮೂಲಕ ನೀವು ಸೃಷ್ಟಿಚಕ್ರದ ಚರಿತ್ರೆ-ಭೂಗೋಳವನ್ನು
ಅರಿತುಕೊಂಡು ಚಕ್ರವರ್ತಿ ರಾಜರಾಗುತ್ತೀರಿ. ತಂದೆಯು ಎಷ್ಟು ಪ್ರೀತಿ ಮತ್ತು ರುಚಿಯಿಂದ
ಓದಿಸುತ್ತಾರೆ ಅಂದಾಗ ಅಷ್ಟು ರುಚಿಯಿಂದ ಓದಬೇಕಲ್ಲವೆ. ಬೆಳಗಿನ ಸಮಯದಲ್ಲಂತೂ ಎಲ್ಲರೂ
ಬಿಡುವಾಗಿರುತ್ತಾರೆ. ಬೆಳಗಿನ ತರಗತಿಯು ಕೇವಲ ಅರ್ಧ-ಮುಕ್ಕಾಲು ಗಂಟೆಯ ಸಮಯ ಇರುತ್ತದೆ. ಆದ್ದರಿಂದ
ಕೇವಲ ಮುರುಳಿಯನ್ನು ಕೇಳಿ ಹೊರಟು ಹೋಗಿ. ನೆನಪನ್ನಂತೂ ನೀವು ಎಲ್ಲಿಯಾದರೂ ಮಾಡಬಲ್ಲಿರಿ.
ಭಾನುವಾರದ ದಿನವಂತೂ ರಜೆಯಿರುವುದು. ಅಂದು ಮುಂಜಾನೆ 2-3 ಗಂಟೆಗೆ ಎದ್ದು ನೆನಪಿನಲ್ಲಿ ಕುಳಿತುಬಿಡಿ.
ದಿನದ ಸಂಪಾದನೆಯನ್ನು ಮಾಡಿಕೊಳ್ಳಿ. ಪೂರ್ಣ ಜೋಳಿಗೆಯನ್ನು ತುಂಬಿಸಿಕೊಳ್ಳಿ, ಸಮಯವಂತೂ
ಸಿಗುತ್ತದೆಯಲ್ಲವೆ. ಮಾಯೆಯ ಬಿರುಗಾಳಿಗಳು ಬರುವುದರಿಂದ ನೆನಪು ಮಾಡಲು ಸಾಧ್ಯವಾಗುವುದಿಲ್ಲ.
ತಂದೆಯು ಬಹಳ ಸಹಜವಾಗಿ ತಿಳಿಸಿಕೊಡುತ್ತಾರೆ. ಭಕ್ತಿಮಾರ್ಗದಲ್ಲಿ ಎಷ್ಟೊಂದು ಸತ್ಸಂಗಗಳಿಗೆ
ಹೋಗುತ್ತಾರೆ. ಕೃಷ್ಣನ ಮಂದಿರದಲ್ಲಿ ನಂತರ ಶ್ರೀನಾಥನ ಮಂದಿರದಲ್ಲಿ ಮತ್ತೆ ಇನ್ನ್ಯಾರದೋ ಮಂದಿರಕ್ಕೆ
ಹೋಗುತ್ತಾರೆ. ಯಾತ್ರೆಯಲ್ಲಿಯೂ ಸಹ ಎಷ್ಟೊಂದು ವ್ಯಭಿಚಾರಿಯಾಗುತ್ತಾರೆ. ಇಷ್ಟೊಂದು ಕಷ್ಟವನ್ನೂ
ತೆಗೆದುಕೊಳ್ಳುತ್ತಾರೆ ಆದರೆ ಲಾಭವೇನೂ ಇಲ್ಲ. ನಾಟಕದಲ್ಲಿ ಇದೂ ಸಹ ನಿಗಧಿಯಾಗಿದೆ ಮತ್ತೆ ಕಲ್ಪದ
ನಂತರವೂ ಆಗುವುದು. ನೀವಾತ್ಮಗಳಲ್ಲಿ ಪಾತ್ರವು ತುಂಬಲ್ಪಟ್ಟಿದೆ. ಸತ್ಯಯುಗ, ತ್ರೇತಾಯುಗದಲ್ಲಿ ಯಾವ
ಪಾತ್ರವನ್ನು ಕಲ್ಪದ ಹಿಂದೆ ಅಭಿನಯಿಸಿದ್ದೀರೋ ಅದನ್ನೇ ಅಭಿನಯಿಸುತ್ತೀರಿ. ಮಂಧಬುದ್ಧಿಯವರು ಇದನ್ನೂ
ಸಹ ತಿಳಿದುಕೊಳ್ಳುವುದಿಲ್ಲ. ಯಾರು ಸೂಕ್ಷ್ಮಬುದ್ಧಿಯವರಿದ್ದಾರೆಯೋ ಅವರೇ ಚೆನ್ನಾಗಿ ತಿಳಿದುಕೊಂಡು
ಅನ್ಯರಿಗೂ ತಿಳಿಸಿಕೊಡುತ್ತಾರೆ. ಈ ಅನಾದಿ ನಾಟಕವು ಮಾಡಲ್ಪಟ್ಟಿದೆ ಎಂಬುದು ಅವರಿಗೆ ಆಂತರ್ಯದಲ್ಲಿ
ಭಾಸವಾಗುತ್ತದೆ. ಇದು ಬೇಹದ್ದಿನ ನಾಟಕವೆಂಬುದನ್ನು ಪ್ರಪಂಚದಲ್ಲಿ ಯಾರೂ ತಿಳಿದುಕೊಂಡಿಲ್ಲ. ಇದನ್ನು
ತಿಳಿದುಕೊಳ್ಳುವುದರಲ್ಲಿ ಸಮಯ ಹಿಡಿಸುತ್ತದೆ. ಪ್ರತಿಯೊಂದು ಮಾತನ್ನು ವಿಸ್ತಾರವಾಗಿ ತಿಳಿಸಿ.
ಮತ್ತೆ ಹೇಳಲಾಗುತ್ತದೆ - ಮುಖ್ಯವಾದುದು ನೆನಪಿನ ಯಾತ್ರೆಯಾಗಿದೆ. ಸೆಕೆಂಡಿನಲ್ಲಿ ಜೀವನ್ಮುಕ್ತಿ
ಎಂದು ಗಾಯನವಿದೆ ಮತ್ತು ಇದೂ ಗಾಯನವಿದೆ – ಜ್ಞಾನ ಸಾಗರನಾಗಿದ್ದಾರೆ, ಇಡೀ ಸಾಗರವನ್ನು
ಶಾಹಿಯನ್ನಾಗಿ ಮಾಡಿಕೊಂಡು ಗಿಡ ಮರಗಳನ್ನು ಲೇಖನಿಯನ್ನಾಗಿ ಮಾಡಿ, ಆಕಾಶ-ಭೂಮಿಯನ್ನು ಕಾಗದವನ್ನಾಗಿ
ಮಾಡಿಕೊಂಡರೂ ಸಹ ಜ್ಞಾನಸಾಗರನ ಮಹಿಮೆಯನ್ನು ಮುಗಿಸಲು ಸಾಧ್ಯವಿಲ್ಲ. ಆರಂಭದಿಂದ ಹಿಡಿದು ನೀವು
ಎಷ್ಟೊಂದು ಬರೆಯುತ್ತಾ ಬಂದಿದ್ದೀರಿ. ಬಹಳಷ್ಟು ಕಾಗದಗಳಾಗಿ ಬಿಡುವುದು. ನೀವೇನೂ
ಅಲೆದಾಡಬೇಕಾಗಿಲ್ಲ. ಮುಖ್ಯವಾದವರು ತಂದೆಯಾಗಿದ್ದಾರೆ, ತಂದೆಯನ್ನು ನೆನಪು ಮಾಡಬೇಕಾಗಿದೆ. ಇಲ್ಲಿಯೂ
ಸಹ ನೀವು ಶಿವ ತಂದೆಯ ಬಳಿ ಬರುತ್ತೀರಿ. ಶಿವ ತಂದೆಯು ಇವರಲ್ಲಿ ಪ್ರವೇಶ ಮಾಡಿ ನಿಮಗೆ ಎಷ್ಟು
ಪ್ರೀತಿಯಿಂದ ಓದಿಸುತ್ತಾರೆ! ಯಾವುದೇ ಹೆಗ್ಗಳಿಕೆಯಿಲ್ಲ. ತಂದೆಯು ತಿಳಿಸುತ್ತಾರೆ - ನಾನು ಹಳೆಯ
ಶರೀರದಲ್ಲಿ ಬರುತ್ತೇನೆ, ಹೇಗೆ ಸಾಧಾರಣವಾಗಿ ಬಂದು ತಂದೆಯು ಓದಿಸುತ್ತಾರೆ, ಯಾವುದೇ ಅಹಂಕಾರವಿಲ್ಲ.
ತಂದೆಯು ತಿಳಿಸುತ್ತಾರೆ - ನೀವು ನನಗೆ ಪತಿತ ಪ್ರಪಂಚ, ಪತಿತ ಶರೀರದಲ್ಲಿ ಬಂದು ನಮಗೆ ಶಿಕ್ಷಣ ಕೊಡಿ
ಎಂದು ಹೇಳುತ್ತೀರಿ. ಸತ್ಯಯುಗದಲ್ಲಿ ಬಂದು ವಜ್ರ-ವೈಡೂರ್ಯಗಳಲ್ಲಿ ಬಂದು ಕುಳಿತುಕೊಳ್ಳಿ,
ಭೋಜನವನ್ನು ಸ್ವೀಕರಿಸಿ ಎಂದು ಕರೆಯುವುದಿಲ್ಲ. ಶಿವ ತಂದೆಯಂತೂ ಭೋಜನ ಮಾಡುವುದಿಲ್ಲ. ಮೊದಲಂತೂ
ಬಂದು ಭೋಜನವನ್ನು ಸ್ವೀಕರಿಸಿ ಎಂದು ಕರೆಸುತ್ತಿದ್ದರು. 36 ಪ್ರಕಾರದ ಭೋಜನವನ್ನು
ತಿನ್ನಿಸುತ್ತಿದ್ದರು, ಇದು ಪುನಃ ಆಗುವುದು. ಇದನ್ನು ಚರಿತ್ರೆಯೆಂದು ಹೇಳಬಹುದು. ಕೃಷ್ಣನ
ಚರಿತ್ರೆಯೇನಿದೆ? ಕೃಷ್ಣನಂತೂ ಸತ್ಯಯುಗದ ರಾಜಕುಮಾರನಾಗಿದ್ದಾನೆ, ಅವನಿಗೆ ಪತಿತ-ಪಾವನನೆಂದು
ಹೇಳಲಾಗುವುದಿಲ್ಲ. ಸತ್ಯಯುಗದಲ್ಲಿ ಇವರು ವಿಶ್ವದ ಮಾಲೀಕರು ಹೇಗಾಗಿದ್ದಾರೆ ಎಂಬುದನ್ನೂ ಸಹ ಈಗ
ನೀವು ತಿಳಿದುಕೊಂಡಿದ್ದೀರಿ. ಮನುಷ್ಯರಂತೂ ಸಂಪೂರ್ಣ ಅಂಧಕಾರದಲ್ಲಿದ್ದಾರೆ. ನೀವೀಗ ಸಂಪೂರ್ಣ
ಪ್ರಕಾಶತೆಯಲ್ಲಿ ಬಂದಿದ್ದೀರಿ. ತಂದೆಯು ಬಂದು ರಾತ್ರಿಯನ್ನು ದಿನವನ್ನಾಗಿ ಮಾಡಿಬಿಡುತ್ತಾರೆ.
ಅರ್ಧಕಲ್ಪ ನೀವು ರಾಜ್ಯಭಾರ ಮಾಡುತ್ತೀರಿ ಅಂದಮೇಲೆ ಎಷ್ಟೊಂದು ಖುಷಿಯಿರಬೇಕು!
ಯಾವಾಗ ನಿಮ್ಮ ಯಾವುದೇ ಕರ್ಮೇಂದ್ರಿಯಗಳು ಮೋಸ ಮಾಡುವುದಿಲ್ಲವೋ ಆಗ ನಿಮ್ಮ ನೆನಪಿನ ಯಾತ್ರೆಯು
ಕೊನೆಯಾಗುವುದು. ಕರ್ಮಾತೀತ ಸ್ಥಿತಿಯಾದಾಗ ನಿಮ್ಮ ನೆನಪಿನ ಯಾತ್ರೆಯು ಮುಕ್ತಾಯವಾಗುವುದು. ಈಗಿನ್ನೂ
ಮುಕ್ತಾಯವಾಗಿಲ್ಲ. ನೀವೀಗ ಸಂಪೂರ್ಣ ಪುರುಷಾರ್ಥ ಮಾಡಬೇಕಾಗಿದೆ, ನಿರಾಶಾವಾದಿಗಳಾಗಬಾರದು. ಸೇವೆ,
ಸೇವೆ, ಸೇವೆ. ತಂದೆಯೂ ಸಹ ಬಂದು ವೃದ್ಧ ಶರೀರದಿಂದ ಸೇವೆ ಮಾಡುತ್ತಿದ್ದಾರಲ್ಲವೆ. ತಂದೆಯು
ಮಾಡಿ-ಮಾಡಿಸುವವರಾಗಿದ್ದಾರೆ. ಇದನ್ನು ಮಾಡಿಸಬೇಕು, ಈ ಮನೆಯನ್ನು ಕಟ್ಟಿಸಬೇಕೆಂದು ಮಕ್ಕಳಿಗಾಗಿ
ಎಷ್ಟೊಂದು ಚಿಂತೆಯಿರುತ್ತದೆ. ಹೇಗೆ ಲೌಕಿಕ ತಂದೆಗೆ ಹದ್ದಿನ ವಿಚಾರಗಳಿರುತ್ತವೆ ಹಾಗೆಯೇ
ಪಾರಲೌಕಿಕ ತಂದೆಗೆ ಬೇಹದ್ದಿನ ವಿಚಾರವಿರುತ್ತದೆ. ನೀವು ಮಕ್ಕಳೇ ಸರ್ವೀಸ್ ಮಾಡಬೇಕಾಗಿದೆ.
ದಿನ-ಪ್ರತಿದಿನ ಬಹಳ ಸಹಜವಾಗುತ್ತಾ ಹೋಗುತ್ತದೆ. ಎಷ್ಟು ವಿನಾಶಕ್ಕೆ ಸಮೀಪ ಬರುತ್ತೀರೋ ಅಷ್ಟು
ಶಕ್ತಿಯು ತುಂಬುತ್ತಾ ಹೋಗುವುದು. ಕೊನೆಯಲ್ಲಿ ಭೀಷ್ಮ ಪಿತಾಮಹ ಮೊದಲಾದವರಿಗೂ ಬಾಣವು ನಾಟಿತೆಂದು
ಗಾಯನವಿದೆ. ಈಗ ಬಾಣವು ನಾಟಿದರೆ ಬಹಳ ಏರುಪೇರಾಗಿ ಬಿಡುವುದು. ಇಲ್ಲಿ ಎಷ್ಟೊಂದು ಜನಸಂದಣಿಯಾಗುವುದು,
ಮಾತೇ ಕೇಳಬೇಡಿ! ತಲೆ ಕೆರೆದುಕೊಳ್ಳುವುದಕ್ಕೂ ಬಿಡುವಿಲ್ಲವೆಂದು ಹೇಳುತ್ತಾರಲ್ಲವೆ. ಈ ರೀತಿಯೇನೂ
ಇಲ್ಲ, ಆದರೆ ಬಹಳ ಜನಸಂದಣಿಯಾದರೆ ಈ ರೀತಿ ಹೇಳಲಾಗುತ್ತದೆ. ಯಾವಾಗ ಇಂತಹವರಿಗೆ ಬಾಣವು ನಾಟುವುದೋ
ಆಗ ನಿಮ್ಮ ಪ್ರಭಾವ ಬೀರುವುದು. ಎಲ್ಲಾ ಮಕ್ಕಳಿಗೆ ತಂದೆಯ ಪರಿಚಯವಂತೂ ಸಿಗಲೇಬೇಕಾಗಿದೆ.
ಮೂರು ಹೆಜ್ಜೆಗಳಷ್ಟು ಭೂಮಿಯಲ್ಲಿಯೂ ಈ ಅವಿನಾಶಿ ಆಸ್ಪತ್ರೆ ಹಾಗೂ ಈಶ್ವರೀಯ ವಿಶ್ವ ವಿದ್ಯಾಲಯವನ್ನು
ತೆರೆಯಬಹುದು. ಹಣವಿಲ್ಲದಿದ್ದರೂ ಪರವಾಗಿಲ್ಲ, ಚಿತ್ರಗಳಂತೂ ನಿಮಗೆ ಸಿಗುತ್ತದೆ. ಸೇವೆಯಲ್ಲಿ
ಮಾನ-ಅಪಮಾನ, ಸುಖ-ದುಃಖ, ಚಳಿ-ಬಿಸಿಲು ಎಲ್ಲವನ್ನೂ ಸಹನೆ ಮಾಡಬೇಕಾಗುತ್ತದೆ. ಅನ್ಯರನ್ನು ವಜ್ರ
ಸಮಾನರನ್ನಾಗಿ ಮಾಡುವುದು ಕಡಿಮೆ ಮಾತೇನು! ತಂದೆಯು ಎಂದಾದರೂ ಸುಸ್ತಾಗುತ್ತಾರೆಯೇ? ನೀವೇಕೆ
ಸುಸ್ತಾಗುತ್ತೀರಿ?
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು-ಪ್ರೀತಿ
ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಬೆಳಗಿನ ಸಮಯ
ಅರ್ಧ-ಮುಕ್ಕಾಲು ಗಂಟೆ ಬಹಳ ಪ್ರೀತಿಯಿಂದ ಹಾಗೂ ರುಚಿಯಿಂದ ವಿದ್ಯೆಯನ್ನು ಓದಬೇಕಾಗಿದೆ. ತಂದೆಯ
ನೆನಪಿನಲ್ಲಿರಬೇಕು, ಎಲ್ಲಾ ಕರ್ಮೇಂದ್ರಿಯಗಳು ವಶದಲ್ಲಿ ಬರುವಂತೆ ನೆನಪಿನ ಅಭ್ಯಾಸವಿರಲಿ.
2. ಸರ್ವೀಸಿನಲ್ಲಿ ಸುಖ-ದುಃಖ, ಮಾನ-ಅಪಮಾನ, ಚಳಿ-ಬಿಸಿಲು ಎಲ್ಲವನ್ನೂ ಸಹನೆ ಮಾಡಬೇಕಾಗಿದೆ. ಎಂದೂ
ಸರ್ವೀಸಿನಲ್ಲಿ ಸುಸ್ತಾಗಬಾರದು. ಮೂರು ಹೆಜ್ಜೆಗಳಷ್ಟು ಭೂಮಿಯಲ್ಲಿಯೂ ಆಸ್ಪತ್ರೆ ಹಾಗೂ ವಿಶ್ವ
ವಿದ್ಯಾಲಯವನ್ನು ತೆರೆದು ವಜ್ರ ಸಮಾನರನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ.
ವರದಾನ:
ಸರ್ವಶಕ್ತಿಗಳ
ಲೈಟ್ ಮುಖಾಂತರ ಆತ್ಮರಿಗೆ ಮಾರ್ಗ ತೋರಿಸುವಂತಹ ಚೈತನ್ಯ ಲೈಟ್ಹೌಸ್ ಭವ.
ನಾನು ಆತ್ಮ ವಿಶ್ವ
ಕಲ್ಯಾಣದ ಸೇವೆಗಾಗಿ ಪರಂಧಾಮದಿಂದ ಅವತರಿತನಾಗಿದ್ದೇನೆ ಎಂದು ನೀವು ಸದಾ ಸ್ಮೃತಿಯಲ್ಲಿದ್ದಾಗ, ನೀವು
ಯಾವ ಸಂಕಲ್ಪ ಮಾಡುವಿರಿ, ಮಾತನಾಡುವಿರಿ ಅದರಲ್ಲಿ ವಿಶ್ವ ಕಲ್ಯಾಣ ಸಮಾವೇಶವಾಗಿರುವುದು. ಮತ್ತು ಇದೇ
ಸ್ಮೃತಿ ಲೈಟ್ಹೌಸ್ನ ಕಾರ್ಯ ಮಾಡುವುದು. ಹೇಗೆ ಆ ಲೈಟ್ ಹೌಸ್ನಿಂದ ಒಂದೇ ಬಣ್ಣದ ಲೈಟ್ ಹೊರ ಬರುವುದು
ಅದೇರೀತಿ ತಾವು ಚೈತನ್ಯ ಲೈಟ್ಹೌಸ್ ಮುಖಾಂತರ ಸರ್ವಶಕ್ತಿಗಳ ಲೈಟ್ ಆತ್ಮರಿಗೆ ಪ್ರತಿ ಹೆಜ್ಜೆಯಲ್ಲಿ
ಮಾರ್ಗ ತೋರಿಸುವಂತಹ ಕಾರ್ಯ ಮಾಡುತ್ತಿರುವುದು.
ಸ್ಲೋಗನ್:
ಸ್ನೇಹ ಮತ್ತು ಸಹಯೋಗದ
ಜೊತೆ ಶಕ್ತಿರೂಪ ಆಗಿ ಆಗ ರಾಜಧಾನಿಯಲ್ಲಿ ಮುಂದಿನ ನಂಬರ್ ಸಿಕ್ಕಿ ಬಿಡುವುದು.