18.09.20         Morning Kannada Murli       Om Shanti           BapDada Madhuban


"ಮಧುರ ಮಕ್ಕಳೇ - ನೀವು ವಿಶ್ವದಲ್ಲಿ ಶಾಂತಿಯನ್ನು ಸ್ಥಾಪನೆ ಮಾಡಲು ನಿಮಿತ್ತರಾಗಿದ್ದೀರಿ, ಆದ್ದರಿಂದ ನೀವೆಂದೂ ಅಶಾಂತರಾಗಬಾರದು".

ಪ್ರಶ್ನೆ:
ತಂದೆಯು ಯಾವ ಮಕ್ಕಳನ್ನು ಆಜ್ಞಾಕಾರಿಗಳೆಂದು ಹೇಳುತ್ತಾರೆ?

ಉತ್ತರ:
ತಂದೆಯ ಮುಖ್ಯ ಆದೇಶವಾಗಿದೆ - ಮಕ್ಕಳೇ, ಅಮೃತವೇಳೆ ಎದ್ದು ತಂದೆಯನ್ನು ನೆನಪು ಮಾಡಿ, ಯಾರು ಈ ಮುಖ್ಯ ಆದೇಶವನ್ನು ಪಾಲನೆ ಮಾಡುತ್ತಾರೆ, ಬೆಳಗ್ಗೆ-ಬೆಳಗ್ಗೆ ಸ್ನಾನ ಇತ್ಯಾದಿಗಳನ್ನು ಮುಗಿಸಿ ಫ್ರೆಷ್ ಆಗಿ ಸಮಯಕ್ಕೆ ಸರಿಯಾಗಿ ನೆನಪಿನ ಯಾತ್ರೆಯಲ್ಲಿರುವರೋ ಅಂತಹವರಿಗೆ ತಂದೆಯು ಸುಪುತ್ರರು ಅಥವಾ ಆಜ್ಞಾಕಾರಿಗಳೆಂದು ಹೇಳುತ್ತಾರೆ. ಅವರೇ ಹೋಗಿ ರಾಜರಾಗುತ್ತಾರೆ. ಕುಪುತ್ರರು ಕಸ ಗುಡಿಸುವವರಾಗುತ್ತಾರೆ.

ಓಂ ಶಾಂತಿ.
ಇದರ ಅರ್ಥವನ್ನಂತೂ ಮಕ್ಕಳಿಗೆ ತಿಳಿಸಿದ್ದೇನೆ. ಓಂ ಎಂದರೆ ನಾನು ಆತ್ಮನಾಗಿದ್ದೇನೆ. ನಾವು ಜೀವಾತ್ಮರಾಗಿದ್ದೇವೆ ಮತ್ತು ಎಲ್ಲಾ ಆತ್ಮಗಳ ತಂದೆಯು ಒಬ್ಬರೇ ಆಗಿದ್ದಾರೆ ಎಂಬ ಮಾತನ್ನು ಎಲ್ಲರೂ ಹೇಳುತ್ತಾರೆ. ಶರೀರಗಳಿಗೆ ಬೇರೆ-ಬೇರೆ ತಂದೆಯರಿರುತ್ತಾರೆ, ಇದೂ ಸಹ ಮಕ್ಕಳ ಬುದ್ಧಿಯಲ್ಲಿದೆ. ಲೌಕಿಕ ತಂದೆಯಿಂದ ಮಿತವಾದ ಪಾರಲೌಕಿಕ ತಂದೆಯಿಂದ ಅಪರಿಮಿತ ಆಸ್ತಿಯು ಸಿಗುತ್ತದೆ. ವಿಶ್ವದಲ್ಲಿ ಶಾಂತಿ ಸ್ಥಾಪನೆಯಾಗಬೇಕೆಂದು ಮನುಷ್ಯರು ಈ ಸಮಯದಲ್ಲಿ ಬಯಸುತ್ತಾರೆ. ಒಂದುವೇಳೆ ಚಿತ್ರಗಳಲ್ಲಿ ತಿಳಿಸುವುದಾದರೆ ಶಾಂತಿಗಾಗಿ ಕಲಿಯುಗದ ಅಂತ್ಯ, ಸತ್ಯಯುಗದ ಆದಿಯ ಸಂಗಮದಲ್ಲಿ ಕರೆದುಕೊಂಡು ಬರಬೇಕು. ಈ ಸತ್ಯಯುಗವು ಹೊಸ ಪ್ರಪಂಚವಾಗಿದೆ, ಅದರಲ್ಲಿ ಒಂದು ಧರ್ಮವಿದ್ದಾಗ ಸುಖ, ಶಾಂತಿ, ಪವಿತ್ರತೆಯಿರುತ್ತದೆ, ಅದಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ಇದನ್ನಂತೂ ಎಲ್ಲರೂ ಒಪ್ಪುತ್ತಾರೆ. ಹೊಸ ಪ್ರಪಂಚದಲ್ಲಿ ಸುಖವಿದೆ, ದುಃಖವಿರಲು ಸಾಧ್ಯವಿಲ್ಲ. ಯಾರಿಗಾದರೂ ಬಹಳ ಸಹಜವಾಗಿ ತಿಳಿಸಬಹುದು. ಶಾಂತಿ ಮತ್ತು ಅಶಾಂತಿಯ ಮಾತು ಇಲ್ಲಿನ ವಿಶ್ವದಲ್ಲಿಯೇ ನಡೆಯುತ್ತದೆ, ಅದಂತೂ ನಿರ್ವಾಣಧಾಮವಾಗಿದೆ. ಅಲ್ಲಿ ಶಾಂತಿ, ಅಶಾಂತಿಯ ಪ್ರಶ್ನೆಯೇ ಬರುವುದಿಲ್ಲ. ಮಕ್ಕಳು ಭಾಷಣ ಮಾಡುವಾಗ ಮೊಟ್ಟ ಮೊದಲಿಗೆ ವಿಶ್ವದಲ್ಲಿ ಶಾಂತಿಯ ಮಾತನ್ನು ತೆಗೆದುಕೊಳ್ಳಬೇಕು. ಮನುಷ್ಯರು ಶಾಂತಿಗಾಗಿ ಬಹಳ ಪ್ರಯಾಸ ಮಾಡುತ್ತಾರೆ. ಅವರಿಗೆ ಬಹುಮಾನವೂ ಸಿಗುತ್ತಿರುತ್ತದೆ. ವಾಸ್ತವದಲ್ಲಿ ಇದರಲ್ಲಿ ಬಹಳ ತಲೆ ಕೆಡಿಸಿಕೊಳ್ಳುವ ಮಾತಿಲ್ಲ. ತಂದೆಯು ತಿಳಿಸುತ್ತಾರೆ - ಕೇವಲ ತಮ್ಮ ಸ್ವಧರ್ಮದಲ್ಲಿ ಸ್ಥಿತರಾಗಿ, ಆಗ ವಿಕರ್ಮಗಳು ವಿನಾಶವಾಗುತ್ತವೆ. ಸ್ವಧರ್ಮದಲ್ಲಿ ಸ್ಥಿತರಾದರೆ ಶಾಂತಿ ಸ್ಥಾಪನೆಯಾಗಿ ಬಿಡುವುದು. ನೀವು ಸದಾ ಶಾಂತಿ ಸಾಗರ ತಂದೆಯ ಮಕ್ಕಳಾಗಿದ್ದೀರಿ. ಅವರಿಂದ ಈ ಆಸ್ತಿಯು ಸಿಗುತ್ತದೆ ಅದಕ್ಕೆ ಮೋಕ್ಷವೆಂದು ಹೇಳುವುದಿಲ್ಲ. ಮೋಕ್ಷವು ಭಗವಂತನಿಗೂ ಸಹ ಸಿಗಲು ಸಾಧ್ಯವಿಲ್ಲ. ಭಗವಂತನೂ ಸಹ ಪಾತ್ರದಲ್ಲಿ ಅವಶ್ಯವಾಗಿ ಬರಬೇಕಾಗಿದೆ. ತಂದೆಯು ತಿಳಿಸುತ್ತಾರೆ - ಕಲ್ಪ-ಕಲ್ಪವೂ ಕಲ್ಪದ ಸಂಗಮಯುಗದಲ್ಲಿ ನಾನು ಬರುತ್ತೇನೆ. ಹೀಗೆ ಭಗವಂತನಿಗೂ ಮೋಕ್ಷವಿಲ್ಲ ಅಂದಮೇಲೆ ಮನುಷ್ಯರು ಹೇಗೆ ಮೋಕ್ಷವನ್ನು ಪಡೆಯಲು ಸಾಧ್ಯ? ಇವು ಇಡೀ ದಿನ ವಿಚಾರ ಸಾಗರ ಮಂಥನ ಮಾಡುವ ಮಾತುಗಳಾಗಿವೆ. ತಂದೆಯು ನೀವು ಮಕ್ಕಳಿಗೇ ತಿಳಿಸುತ್ತಾರೆ - ನೀವು ಮಕ್ಕಳಿಗೆ ತಿಳಿಸಿಕೊಡುವ ಬಹಳ ಅಭ್ಯಾಸವಿದೆ, ನೀವೆಲ್ಲಾ ಬ್ರಾಹ್ಮಣರೇ ತಿಳಿದುಕೊಳ್ಳುತ್ತೀರಿ - ನೀವೇ ವಿಚಾರ ಸಾಗರ ಮಂಥನ ಮಾಡಬೇಕಾಗಿದೆ. ನೀವು ಮಕ್ಕಳು ಸೇವೆಯಲ್ಲಿದ್ದೀರಿ ಎಂದು ತಂದೆಯು ಹೇಳುತ್ತಾರೆ. ನಿಮಗಂತೂ ಬಹಳ ತಿಳಿಸಿಕೊಡಬೇಕಾಗುತ್ತದೆ. ದಿನ-ರಾತ್ರಿ ಮಕ್ಕಳು ಸರ್ವೀಸಿನಲ್ಲಿರುತ್ತಾರೆ. ಮ್ಯೂಸಿಯಂನಲ್ಲಿ ಇಡೀ ದಿನ ಬರುತ್ತಲೇ ಇರುತ್ತಾರೆ. ರಾತ್ರಿಗೆ ರಾತ್ರಿ 10-11 ಗಂಟೆಯವರೆಗೂ ಸಹ ಕೆಲವೊಂದೆಡೆ ಬರುತ್ತಾರೆ. ಇನ್ನೂ ಕೆಲವೊಂದು ಕಡೆ ಬೆಳಗ್ಗೆ 4 ಗಂಟೆಯಿಂದಲೂ ಸೇವೆ ಮಾಡಲು ತೊಡಗುತ್ತಾರೆ. ಇಲ್ಲಂತೂ ಇದು ಮನೆಯಾಗಿದೆ, ಯಾವಾಗ ಬೇಕೋ ಆಗ ಕುಳಿತುಕೊಳ್ಳಬಹುದು. ಹೊರಗಿನ ಸೇವಾಕೇಂದ್ರಗಳಲ್ಲಿ ದೂರ-ದೂರದಿಂದ ಬರುತ್ತಾರೆ ಆದ್ದರಿಂದ ಸಮಯವನ್ನು ನಿಗಧಿಪಡಿಸಲಾಗುತ್ತದೆ. ಇಲ್ಲಾದರೆ ನೀವು ಮಕ್ಕಳು ಯಾವ ಸಮಯದಲ್ಲಿ ಬೇಕಾದರೂ ಏಳಬಹುದು ಆದರೆ ಇಂತಹ ಸಮಯದಲ್ಲಂತೂ ಓದಬಾರದು, ಯಾವಾಗ ಎದ್ದು ತೂಕಡಿಸುವಂತಾಗಬಾರದು ಆದ್ದರಿಂದ ಮುಂಜಾನೆಯ ಸಮಯವನ್ನು ಇಡಲಾಗುವುದು. ಸ್ನಾನ ಇತ್ಯಾದಿಗಳನ್ನು ಮುಗಿಸಿ ಸಮಯದಲ್ಲಿ ಬಂದು ತಲುಪುವುದಿಲ್ಲವೆಂದರೆ ಅಂತಹವರಿಗೆ ಆಜ್ಞಾಕಾರಿಗಳೆಂದು ಹೇಳುವುದಿಲ್ಲ. ಲೌಕಿಕ ತಂದೆಗೂ ಸಹ ಸುಪುತ್ರರು ಮತ್ತು ಕುಪುತ್ರ ಮಕ್ಕಳಿರುತ್ತಾರಲ್ಲವೆ. ಹಾಗೆಯೇ ಬೇಹದ್ದಿನ ತಂದೆಗೂ ಇದ್ದಾರೆ. ಸುಪುತ್ರರು ಹೋಗಿ ರಾಜರಾಗುತ್ತಾರೆ, ಕುಪುತ್ರರು ಕಸವನ್ನು ಗುಡಿಸುತ್ತಾರೆ. ಎಲ್ಲವೂ ಕಂಡು ಬರುತ್ತದೆಯಲ್ಲವೆ.

ಕೃಷ್ಣ ಜನ್ಮಾಷ್ಟಮಿಯ ಬಗ್ಗೆಯೂ ತಿಳಿಸುತ್ತಾರೆ, ಯಾವಾಗ ಕೃಷ್ಣನ ಜನ್ಮವಾಗುವುದೋ ಆಗ ಸ್ವರ್ಗವಾಗುವುದು. ಒಂದೇ ರಾಜ್ಯವಿರುತ್ತದೆ, ವಿಶ್ವದಲ್ಲಿ ಶಾಂತಿಯಿರುತ್ತದೆ. ಸ್ವರ್ಗದಲ್ಲಿ ಕೆಲವರೆ ಮನುಷ್ಯರಿರುತ್ತಾರೆ. ಅದು ಹೊಸ ಪ್ರಪಂಚವಾಗಿದೆ, ಅಲ್ಲಿ ಅಶಾಂತಿಯಿರುವುದಿಲ್ಲ. ಯಾವಾಗ ಒಂದು ಧರ್ಮವಿರುವುದೋ ಆಗ ಶಾಂತಿಯಿರುತ್ತದೆ, ಆ ಧರ್ಮವನ್ನು ತಂದೆಯೇ ಸ್ಥಾಪನೆ ಮಾಡುತ್ತಾರೆ ನಂತರ ಯಾವಾಗ ಅನ್ಯ ಧರ್ಮದವರು ಬರುವರೋ ಆಗ ಅಶಾಂತಿಯಾಗುತ್ತದೆ. ಸತ್ಯಯುಗದಲ್ಲಿ ಇರುವುದೇ ಶಾಂತಿ, 16 ಕಲಾ ಸಂಪೂರ್ಣರಲ್ಲವೆ! ಚಂದ್ರಮನೂ ಸಹ ಸಂಪೂರ್ಣ ಸ್ಥಿತಿಗೆ ಬಂದಾಗ ಎಷ್ಟೊಂದು ಶೋಭಿಸುತ್ತಾನೆ! ಆಗ ಪೂರ್ಣ ಚಂದ್ರನೆಂದು ಹೇಳಲಾಗುತ್ತದೆ. ತ್ರೇತಾಯುಗದಲ್ಲಿ ಮುಕ್ಕಾಲು ಭಾಗವೆಂದು ಹೇಳಬಹುದು ಅಂದಮೇಲೆ ಶೋಭೆಯು ಖಂಡನೆಯಾಯಿತಲ್ಲವೆ. ಎರಡು ಕಲೆಗಳು ಕಡಿಮೆಯಾದವು, ಸಂಪೂರ್ಣ ಶಾಂತಿಯು ಸತ್ಯಯುಗದಲ್ಲಿಯೇ ಇರುತ್ತದೆ. 25% ಸೃಷ್ಟಿಯು ಹಳೆಯದಾದಾಗ ಯಾವುದಾದರೊಂದು ಕಿರಿ ಕಿರಿಗಳಾಗುವುದು, ಎರಡು ಕಲೆಗಳು ಕಡಿಮೆಯಾಯಿತೆಂದು ಶೋಭೆಯೂ ಕಡಿಮೆಯಾಯಿತು. ಸ್ವರ್ಗದಲ್ಲಿ ಸಂಪೂರ್ಣ ಶಾಂತಿ, ನರಕದಲ್ಲಿ ಸಂಪೂರ್ಣ ಅಶಾಂತಿಯಿದೆ. ಈ ಸಮಯದಲ್ಲಿ ವಿಶ್ವದಲ್ಲಿ ಮನುಷ್ಯ ಮಾತ್ರರು ಶಾಂತಿಯನ್ನು ಬಯಸುತ್ತಾರೆ. ಇದಕ್ಕಿಂತಲೂ ಮೊದಲು ಶಾಂತಿ ಬೇಕು ಎನ್ನುವ ಮಾತಿರಲಿಲ್ಲ, ಇದು ಈಗಲೇ ಇದೆ ಏಕೆಂದರೆ ಈಗ ವಿಶ್ವದಲ್ಲಿ ಅದು ಪುನಃ ಸ್ಥಾಪನೆಯಾಗುತ್ತಿದೆ. ವಿಶ್ವದಲ್ಲಿ ಶಾಂತಿಯಿರಬೇಕೆಂದು ಆತ್ಮವು ಬಯಸುತ್ತದೆ, ಮನುಷ್ಯರಂತೂ ದೇಹಾಭಿಮಾನದಲ್ಲಿರುವ ಕಾರಣ ವಿಶ್ವ ಶಾಂತಿ ಬೇಕು ಎಂದು ಕೇವಲ ಹೇಳುತ್ತಿರುತ್ತಾರೆ. ಈಗ 84 ಜನ್ಮಗಳು ಪೂರ್ಣವಾಯಿತು, ಈ ತಂದೆಯೇ ಬಂದು ತಿಳಿಸಿಕೊಡುತ್ತಿರುತ್ತಾರೆ. ತಂದೆಯನ್ನೇ ನೆನಪು ಮಾಡುತ್ತೇವೆ, ಅವರೆಂದಾದರೂ ಯಾವುದೋ ರೂಪದಲ್ಲಿ ಬಂದು ಸ್ವರ್ಗ ಸ್ಥಾಪನೆ ಮಾಡುತ್ತಾರೆ, ಅವರ ಹೆಸರೇ ಆಗಿದೆ, ಸ್ವರ್ಗದ ರಚಯಿತ. ಅವರು ಹೇಗೆ ರಚಿಸುತ್ತಾರೆ ಎಂದು ಮನುಷ್ಯರಿಗೆ ತಿಳಿದಿಲ್ಲ. ಶ್ರೀಕೃಷ್ಣನಂತೂ ರಚಿಸಲು ಸಾಧ್ಯವಿಲ್ಲ. ಕೃಷ್ಣನಿಗೆ ದೇವತೆಯಂದು ಹೇಳಲಾಗುವುದು. ಮನುಷ್ಯರು ದೇವತೆಗಳಿಗೆ ನಮಸ್ಕಾರ ಮಾಡುತ್ತಾರೆ, ಅವರಲ್ಲಿ ದೈವೀ ಗುಣಗಳಿರುವ ಕಾರಣ ಅವರಿಗೆ ದೇವತೆಗಳೆಂದು ಹೇಳಲಾಗುತ್ತದೆ. ಯಾರಾದರೂ ಒಳ್ಳೆಯ ಗುಣಗಳನ್ನು ಹೊಂದಿದ್ದರೆ ಇವರು ದೇವತೆಯಂತೆ ಎಂದು ಹೇಳುತ್ತಾರಲ್ಲವೆ. ಹೊಡೆದಾಟ-ಜಗಳವಾಡುವವರಿಗೆ ಅಸುರರೆಂದು ಹೇಳುತ್ತಾರೆ. ಮಕ್ಕಳಿಗೆ ತಿಳಿದಿದೆ - ನಾವು ಬೇಹದ್ದಿನ ತಂದೆಯ ಸನ್ಮುಖದಲ್ಲಿ ಕುಳಿತಿದ್ದೇವೆ ಅಂದಮೇಲೆ ಮಕ್ಕಳ ಚಲನೆಯು ಇಷ್ಟು ಚೆನ್ನಾಗಿರಬೇಕು ಅಜ್ಞಾನ ಕಾಲದಲ್ಲಿ ಈ ಬ್ರಹ್ಮಾ ತಂದೆಯು ನೋಡಿದ್ದಾರೆ, 6-7 ಕುಟುಂಬಗಳು ಒಟ್ಟಿಗೆ ಇರುತ್ತವೆ, ಪರಸ್ಪರ ಕ್ಷೀರ ಖಂಡವಾಗಿ ನಡೆಯುತ್ತಾರೆ. ಇನ್ನೂ ಕೆಲವು ಮನೆಗಳಲ್ಲಂತೂ ಕೇವಲ ಇಬ್ಬರಿದ್ದರೂ ಸಹ ಬಹಳ ಜಗಳವಾಡುತ್ತಿರುತ್ತಾರೆ. ನೀವು ಈಶ್ವರೀಯ ಸಂತಾನರಾಗಿದ್ದೀರಿ, ಬಹಳ-ಬಹಳ ಪ್ರೀತಿಯಿಂದಿರಬೇಕಾಗಿದೆ. ಸತ್ಯಯುಗದಲ್ಲಿ ಕ್ಷೀರ ಖಂಡವಾಗಿರುತ್ತಾರೆ. ಇಲ್ಲಿ ನೀವು ಆ ರೀತಿ ಮಧುರರಾಗುವುದನ್ನು ಕಲಿಯುತ್ತೀರಿ ಅಂದಾಗ ಬಹಳ ಪ್ರೀತಿಯಿಂದಿರಬೇಕು. ತಂದೆಯು ತಿಳಿಸುತ್ತಾರೆ - ತನ್ನನ್ನು ಪರಿಶೀಲನೆ ಮಾಡಿಕೊಳ್ಳಿ, ನಾವು ಯಾವುದೇ ವಿಕರ್ಮವನ್ನಂತೂ ಮಾಡಲಿಲ್ಲವೆ? ಯಾರಿಗೂ ದುಃಖವನ್ನು ಕೊಡಲಿಲ್ಲವೆ? ಹೀಗೆ ಕೆಲವರು ತಮ್ಮನ್ನು ತಾವೇ ನೋಡಿಕೊಳ್ಳುವುದಿಲ್ಲ. ಇವು ಬಹಳ ತಿಳಿದುಕೊಳ್ಳುವ ಮಾತುಗಳಾಗಿವೆ. ನೀವು ಮಕ್ಕಳು ವಿಶ್ವದಲ್ಲಿ ಶಾಂತಿ ಸ್ಥಾಪನೆ ಮಾಡುವವರಾಗಿದ್ದೀರಿ. ಒಂದುವೇಳೆ ಮನೆಯಲ್ಲಿಯೇ ಅಶಾಂತಿ ಮಾಡುವಂತಿದ್ದರೆ ಹೇಗೆ ಶಾಂತಿ ಸ್ಥಾಪನೆ ಮಾಡುವಿರಿ? ಲೌಕಿಕ ತಂದೆಗೆ ಮಕ್ಕಳು ತೊಂದರೆ ಕೊಡುತ್ತಾರೆಂದರೆ ಇವರು ಹೆಸರು ಕೆಡಿಸುವರೆಂದು ಹೇಳುತ್ತಾರೆ. ಯಾವುದಾದರೂ ಚಟವಾಗಿ ಬಿಟ್ಟರೆ ಅದು ಪಕ್ಕಾ ಆಗಿ ಬಿಡುತ್ತದೆ. ನಾವಂತೂ ಬೇಹದ್ದಿನ ತಂದೆಯ ಮಕ್ಕಳಾಗಿದ್ದೇವೆ. ನಮಗೆ ವಿಶ್ವದಲ್ಲಿ ಶಾಂತಿ ಸ್ಥಾಪನೆ ಮಾಡಬೇಕಾಗಿದೆ ಎಂಬ ತಿಳುವಳಿಕೆಯಿರುವುದಿಲ್ಲ. ಶಿವ ತಂದೆಯ ಮಕ್ಕಳಾಗಿದ್ದೀರಿ, ಒಂದುವೇಳೆ ಅಶಾಂತರಾಗುತ್ತೀರೆಂದರೆ ಶಿವ ತಂದೆಯ ಬಳಿ ಬನ್ನಿ. ಅವರಂತೂ ವಜ್ರವಾಗಿದ್ದಾರೆ, ಹೀಗೆ ಮಾಡಿದರೆ ನಿಮ್ಮ ಮನಸ್ಸಿಗೆ ಶಾಂತಿ ಸಿಗುವುದೆಂದು ಕೂಡಲೇ ತಿಳಿಸಿ ಬಿಡುತ್ತಾರೆ. ಶಾಂತಿಯ ಪ್ರಬಂಧ ಮಾಡುತ್ತಾರೆ. ಹೀಗೆ ಅನೇಕರಿದ್ದಾರೆ, ದೈವೀ ಮನೆತನದ ಚಲನೆಯಿಲ್ಲ. ನೀವೀಗ ಪಾವನ ಪ್ರಪಂಚದಲ್ಲಿ ಹೋಗಲು ತಯಾರಾಗುತ್ತೀರಿ. ಇದು ಕೊಳಕು ಪ್ರಪಂಚ, ವೇಶ್ಯಾಲಯವಾಗಿದೆ, ಇದರೊಂದಿಗೆ ತಿರಸ್ಕಾರವು ಬರುತ್ತದೆ. ಹೊಸ ಪ್ರಪಂಚದಲ್ಲಿಯೇ ವಿಶ್ವದಲ್ಲಿ ಶಾಂತಿಯಿರುವುದು, ಸಂಗಮದಲ್ಲಿರಲು ಸಾಧ್ಯವಿಲ್ಲ. ಇಲ್ಲಿ ಶಾಂತರಾಗುವ ಪುರುಷಾರ್ಥ ಮಾಡುತ್ತೀರಿ. ಪೂರ್ಣ ಪುರುಷಾರ್ಥ ಮಾಡಲಿಲ್ಲವೆಂದರೆ ಶಿಕ್ಷೆಯನ್ನನುಭವಿಸಬೇಕಾಗುವುದು. ನನ್ನ ಜೊತೆ ಧರ್ಮರಾಜನೂ ಇದ್ದಾರಲ್ಲವೆ. ಯಾವಾಗ ಲೆಕ್ಕಾಚಾರಗಳು ಮುಗಿಯುವ ಸಮಯವು ಬರುವುದೋ ಆಗ ಬಹಳ ಶಿಕ್ಷೆಯನ್ನು ತಿನ್ನುವಿರಿ. ಅವಶ್ಯವಾಗಿ ಕರ್ಮಭೋಗವಿರುತ್ತದೆ, ರೋಗಿಗಳಾಗುತ್ತಾರೆ ಅದೂ ಸಹ ಕರ್ಮಭೋಗವಲ್ಲವೆ. ತಂದೆಗಿಂತಲೂ ಮೇಲೆ ಯಾರೂ ಇಲ್ಲ. ಮಕ್ಕಳೇ, ಪವಿತ್ರರಾಗಿ ಆಗ ಶ್ರೇಷ್ಠ ಪದವಿಯನ್ನು ಪಡೆಯುತ್ತೀರೆಂದು ತಂದೆಯು ತಿಳಿಸುತ್ತಾರೆ, ಇಲ್ಲವೆಂದರೆ ಯಾವುದೇ ಲಾಭವಿಲ್ಲ. ಭಗವಂತ ತಂದೆ ಯಾರನ್ನು ಅರ್ಧಕಲ್ಪ ನೆನಪು ಮಾಡಿದಿರೋ ಅವರಿಂದ ಆಸ್ತಿಯನ್ನು ಪಡೆಯದಿದ್ದರೆ ಮಕ್ಕಳಾಗಿಯೂ ಏನು ಪ್ರಯೋಜನ! ಆದರೆ ಡ್ರಾಮಾನುಸಾರ ಇದೂ ಅವಶ್ಯವಾಗಿ ಆಗಬೇಕಾಗಿದೆ ಅಂದಾಗ ತಿಳಿಸಿಕೊಡಲು ಬಹಳಷ್ಟು ಯುಕ್ತಿಗಳಿವೆ. ವಿಶ್ವ ಶಾಂತಿಯು ಸತ್ಯಯುಗದಲ್ಲಿತ್ತು, ಅಲ್ಲಿ ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಯುದ್ಧವೂ ಖಂಡಿತ ಆಗುವುದು ಏಕೆಂದರೆ ಅಶಾಂತಿಯಿದೆಯಲ್ಲವೆ. ಕೃಷ್ಣನು ಮತ್ತೆ ಸತ್ಯಯುಗದಲ್ಲಿ ಬರುವನು, ಕಲಿಯುಗದಲ್ಲಿ ದೇವತೆಗಳ ನೆರಳೂ ಸಹ ಬೀಳಲು ಸಾಧ್ಯವಿಲ್ಲವೆಂದು ಹೇಳುತ್ತಾರೆ. ಈ ಮಾತುಗಳನ್ನು ನೀವು ಮಕ್ಕಳು ಈಗಲೇ ಕೇಳುತ್ತಿದ್ದೀರಿ. ನಿಮಗೆ ತಿಳಿದಿದೆ – ಶಿವ ತಂದೆಯು ಓದಿಸುತ್ತಾರೆ, ಧಾರಣೆ ಮಾಡಬೇಕಾಗಿದೆ. ಇಡೀ ಆಯಸ್ಸೇ ಹಿಡಿಸುತ್ತದೆ. ಜೀವನವಿಡಿ ತಿಳಿಸಿದೆವು ಆದರೆ ತಿಳಿದುಕೊಳ್ಳಲಿಲ್ಲವೆಂದು ಹೇಳುತ್ತಾರಲ್ಲವೆ.

ಬೇಹದ್ದಿನ ತಂದೆಯು ತಿಳಿಸುತ್ತಾರೆ – ಮೊಟ್ಟ ಮೊದಲನೆಯದಾಗಿ ಮುಖ್ಯ ಮಾತನ್ನು ತಿಳಿಸಿ, ಜ್ಞಾನವೇ ಬೇರೆ, ಭಕ್ತಿಯೇ ಬೇರೆಯಾಗಿದೆ. ಅರ್ಧಕಲ್ಪ ದಿನ, ಅರ್ಧಕಲ್ಪ ರಾತ್ರಿಯಾಗಿದೆ. ಶಾಸ್ತ್ರಗಳಲ್ಲಿ ಕಲ್ಪದ ಆಯಸ್ಸನ್ನು ತಪ್ಪಾಗಿ ಬರೆದಿದ್ದಾರೆ ಅಂದಮೇಲೆ ಅರ್ಧ-ಅರ್ಧ ಭಾಗವಿರಲು ಸಾಧ್ಯವಿಲ್ಲ. ನಿಮ್ಮಲ್ಲಿ ಯಾರಾದರೂ ಯಾವುದೇ ಶಾಸ್ತ್ರ ಇತ್ಯಾದಿಗಳನ್ನು ಓದಿಲ್ಲವೆಂದರೆ ಬಹಳ ಒಳ್ಳೆಯದು. ಓದಿದ್ದರೆ ಸಂಶಯ ಬರುತ್ತದೆ, ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ. ವಾಸ್ತವದಲ್ಲಿ ಯಾವಾಗ ವಾನಪ್ರಸ್ಥ ಸ್ಥಿತಿಯಾಗುವುದೋ ಆಗ ಭಗವಂತನ್ನು ನೆನಪು ಮಾಡುತ್ತಾರೆ, ಯಾರಾದರೊಬ್ಬರ ಮತದಿಂದ ಮತ್ತೆ ಗುರುಗಳು ಕಲಿಸಿಕೊಡುತ್ತಾರೆ. ಭಕ್ತಿಯನ್ನೂ ಕಲಿಸುತ್ತಾರೆ, ಭಕ್ತಿಯನ್ನು ಕಲಿಸುವುದೆಂದಲ್ಲ, ಅವರಲ್ಲಿ ಭಕ್ತಿಯ ಶಕ್ತಿಯಿದೆ ಆದ್ದರಿಂದ ಇಷ್ಟೊಂದು ಮಂದಿ ಅನುಯಾಯಿಗಳಾಗುತ್ತಾರೆ. ಅನುಯಾಯಿಗಳಿಗೆ ಭಕ್ತ ಪೂಜಾರಿಗಳೆಂದು ಹೇಳುತ್ತಾರೆ. ಇಲ್ಲಿ ಎಲ್ಲರೂ ಪೂಜಾರಿಗಳಾಗಿದ್ದಾರೆ, ಸತ್ಯಯುಗದಲ್ಲಿ ಯಾರೂ ಪೂಜಾರಿಗಳಿರುವುದಿಲ್ಲ. ಭಗವಂತನೆಂದೂ ಪೂಜಾರಿಯಗುವುದಿಲ್ಲ. ನಿಮಗೆ ಅನೇಕ ಯುಕ್ತಿಗಳನ್ನು ತಿಳಿಸಲಾಗುತ್ತದೆ, ನಿಧಾನ-ನಿಧಾನವಾಗಿ ನೀವು ಮಕ್ಕಳಲ್ಲಿಯೂ ತಿಳಿಸುವ ಶಕ್ತಿಯು ಬರುತ್ತಾ ಹೋಗುವುದು.

ಕೃಷ್ಣನು ಬರುತ್ತಿದ್ದಾನೆಂದು ನೀವು ತಿಳಿಸುತ್ತೀರಿ, ಸತ್ಯಯುಗದಲ್ಲಿ ಅವಶ್ಯವಾಗಿ ಕೃಷ್ಣನಿರುವನು ಇಲ್ಲಿದಿದ್ದರೆ ವಿಶ್ವದ ಚರಿತ್ರೆ-ಭೂಗೋಳವು ಹೇಗೆ ಪುನರಾವರ್ತನೆಯಾಗುವುದು? ಕೇವಲ ಒಬ್ಬ ಕೃಷ್ಣನಂತೂ ಇರುವುದಿಲ್ಲ. ಯಥಾ ರಾಜ - ರಾಣಿ ತಥಾ ಪ್ರಜೆಗಳೂ ಇರುವುದಿಲ್ಲ. ಇದರಲ್ಲಿಯೂ ತಿಳಿದುಕೊಳ್ಳುವ ಮಾತಿವೆ, ನೀವು ಮಕ್ಕಳು ತಿಳಿದುಕೊಳ್ಳುತ್ತೀರಿ - ನಾವು ತಂದೆಯ ಮಕ್ಕಳಾಗಿದ್ದೇವೆ ಆದ್ದರಿಂದ ಆಸ್ತಿಯನ್ನು ಪಡೆಯಲು ಬಂದಿದ್ದೇವೆ. ಎಲ್ಲರೂ ಸ್ವರ್ಗದಲ್ಲಿ ಬರುವುದಿಲ್ಲ ಅಥವಾ ತ್ರೇತಾಯುಗದಲ್ಲಿಯೇ ಎಲ್ಲರೂ ಬರಲು ಸಾಧ್ಯವಿಲ್ಲ. ವೃಕ್ಷವು ನಿಧಾನ-ನಿಧಾನವಾಗಿ ವೃದ್ಧಿ ಹೊಂದುತ್ತಿರುತ್ತದೆ. ಈಗ ಮನುಷ್ಯ ಸೃಷ್ಟಿರೂಪಿ ವೃಕ್ಷವಾಗಿದೆ. ನಿರ್ವಾಣ ಧಾಮದಲ್ಲಿ ಆತ್ಮಗಳ ವೃಕ್ಷವಿದೆ. ಇಲ್ಲಿ ಬ್ರಹ್ಮನ ಮೂಲಕ ಸ್ಥಾಪನೆ, ಶಂಕರನ ಮೂಲಕ ವಿನಾಶ ಮತ್ತೆ ಪಾಲನೆ...... ಹೀಗೆ ಶಬ್ಧಗಳನ್ನೂ ಕಾಯಿದೆಯನುಸಾರ ಹೇಳಬೇಕು. ಮಕ್ಕಳ ಬುದ್ಧಿಯಲ್ಲಿ ಈ ನಶೆಯಿದೆ, ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ, ಹೇಗೆ ರಚನೆಯಾಗುತ್ತದೆ, ಇದು ಹೊಸ ರಚನೆಯಲ್ಲವೆ. ಇದು ಬಾಜೋಲಿ ಆಟವಾಗಿದೆ. ಮೊದಲು ಶೂದ್ರರು ಅನೇಕರಿರುತ್ತಾರೆ ಮತ್ತೆ ತಂದೆಯು ಬಂದು ಬ್ರಾಹ್ಮಣರ ಮೂಲಕ ರಚನೆ ಮಾಡುತ್ತಾರೆ. ಬ್ರಾಹ್ಮಣರು ಶಿಖೆಗೆ ಸಮಾನರಾಗುತ್ತಾರೆ. ಶಿಖೆ ಮತ್ತು ಕಾಲು, ಒಂದು ಕಡೆ ಸೇರುತ್ತದೆ. ಮೊದಲು ಬ್ರಾಹ್ಮಣರು ಬೇಕು, ಬ್ರಾಹ್ಮಣರ ಯುಗವು ಬಹಳ ಚಿಕ್ಕದಾಗಿದೆ ನಂತರ ದೇವತೆಗಳು. ಈ ವರ್ಣಗಳ ಚಿತ್ರವು ಬಹಳ ಉಪಯೋಗಕ್ಕೆ ಬರುವುದು. ಈ ಚಿತ್ರವನ್ನು ತಿಳಿಸಲು ಬಹಳ ಸಹಜವಾಗಿದೆ. ವಿಭಿನ್ನ ಮನುಷ್ಯರ ವಿಭಿನ್ನ ರೂಪವಿದೆ. ತಿಳಿಸಲು ಎಷ್ಟು ಆನಂದವಾಗುತ್ತದೆ. ಬ್ರಾಹ್ಮಣರಿದ್ದಾಗ ಎಲ್ಲಾ ಧರ್ಮಗಳಿರುತ್ತವೆ, ಶೂದ್ರರಿಂದ ಬ್ರಾಹ್ಮಣರ ಸಸಿಯು ನಾಟಿಯಾಗುತ್ತದೆ. ಮನುಷ್ಯರಂತೂ ಹೇಗೆ ವೃಕ್ಷದ ಸಸಿಯನ್ನು ನಾಟಿ ಮಾಡುತ್ತಾರೆ, ತಂದೆಯೂ ಸಹ ಇಲ್ಲಿ ನಾಟಿ ಮಾಡುತ್ತಾರೆ. ಇದರಿಂದ ವಿಶ್ವದಲ್ಲಿ ಶಾಂತಿ ಸ್ಥಾಪನೆಯಾಗುವುದು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಸದಾ ಸ್ಮೃತಿಯಿರಲಿ - ನಾವು ಈಶ್ವರನ ಸಂತಾನರಾಗಿದ್ದೇವೆ, ಪರಸ್ಪರ ಮಧುರರಾಗಿರಬೇಕಾಗಿದೆ. ಯಾರಿಗೂ ದುಃಖವನ್ನು ಕೊಡಬಾರದು.

2. ತಮ್ಮಲ್ಲಿ ಪರಿಶೀಲನೆ ಮಾಡಿಕೊಳ್ಳಿ - ನನ್ನಿಂದ ಯಾವುದೇ ವಿಕರ್ಮಗಳಾಗುತ್ತಿಲ್ಲವೆ? ಅಶಾಂತರಾಗುವ ಹಾಗೂ ಅಶಾಂತಿಯನ್ನು ಹರಡುವ ಹವ್ಯಾಸವಂತೂ ಇಲ್ಲವೆ?

ವರದಾನ:
“ಒಬ್ಬ ತಂದೆ ಬಿಟ್ಟರೆ ಇನ್ನೊಬ್ಬರಿಲ್ಲ” (“ಏಕ್ ಬಾಪ್ ದೂಸರಾ ನಾ ಕೊಯಿ”) ಈ ಸ್ಮೃತಿಯಿಂದ ಬಂಧನ ಮುಕ್ತ, ಯೋಗ ಯುಕ್ತ ಭವ.

ಈಗ ಮನೆಗೆ ವಾಪಸ್ಸು ಹೋಗುವ ಸಮಯವಾಗಿದೆ, ಆದ್ದರಿಂದ ಬಂಧನ ಮುಕ್ತ ಮತ್ತು ಯೋಗ ಯುಕ್ತರಾಗಿ. ಬಂಧನ ಮುಕ್ತ ಅರ್ಥಾತ್ ಸಡಿಲವಾದ ಡ್ರೆಸ್, ಟೈಟ್ ಅಲ್ಲ. ಆದೇಶ ಸಿಕ್ಕಿತು ಸೆಕೆಂಡ್ನಲ್ಲಿ ಹೊರಟೆ. ಈ ರೀತಿ ಬಂಧನ ಮುಕ್ತ, ಯೋಗ ಯುಕ್ತ ಸ್ಥಿತಿಯ ವರದಾನ ಪ್ರಾಪ್ತಿ ಮಾಡಿಕೊಳ್ಳುವುದಕ್ಕಾಗಿ ಸದಾ ಈ ಪ್ರತಿಜ್ಞೆ ಸ್ಮೃತಿಯಲ್ಲಿರಲಿ “ಏಕ್ ಬಾಪ್ ದೂಸರಾ ನಾ ಕೊಯಿ” ಏಕೆಂದರೆ ಮನೆಗೆ ಹೋಗುವುದಕ್ಕಾಗಿ ಹಾಗೂ ಸತ್ಯಯುಗಿ ರಾಜ್ಯದಲ್ಲಿ ಬರಬೇಕಾದರೆ ಈ ಹಳೆಯ ಶರೀರವನ್ನು ಬಿಡಬೇಕಾಗುವುದು. ಅದ್ದರಿಂದ ಚೆಕ್ ಮಾಡಿಕೊಳ್ಳಿ ಈ ರೀತಿ ಎವರೆಡಿ ಆಗಿರುವಿರಾ ಅಥವಾ ಇಲ್ಲಿಯವರೆಗೆ ಕೆಲವು ಹಗ್ಗಗಳು ಕಟ್ಟಲ್ಪಟ್ಟಿವೆಯಾ? ಈ ಹಳೆಯ ಚೀಲ(ಶರೀರ)ಟೈಟ್ ಇಲ್ಲಾ ತಾನೆ?

ಸ್ಲೋಗನ್:
ವ್ಯರ್ಥ ಸಂಕಲ್ಪರೂಪಿ ಅಧಿಕ (ಎಕ್ಸ್ಟಾ)ರ ಭೋಜನ ಮಾಡಬೇಡಿ ಆಗ ಭಾರೀತನದ ಖಾಯಿಲೆಯಿಂದ ಬಚಾವಾಗುವಿರಿ.